More

    ವಕೀಲ ಪಾಟೀಲ ಹತ್ಯೆ ಖಂಡಿಸಿ ಮನವಿ

    ಬೈಲಹೊಂಗಲ: ಕಲಬುರಗಿಯಲ್ಲಿ ವಕೀಲ ಈರಣ್ಣಗೌಡ ಪಾಟೀಲ ಹತ್ಯೆ ಖಂಡಿಸಿ ಪಟ್ಟಣದ ನ್ಯಾಯವಾದಿಗಳು ಕೋರ್ಟ್ ಕಲಾಪದಿಂದ ದೂರ ಉಳಿದು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ವಕೀಲರ ರಕ್ಷಣಾ ಕಾರ್ಯ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಸೋಮವಾರ ಉಪವಿಭಾಗಾಧಿಕಾರಿ ಪ್ರಭಾವತಿ ಕೀರೂರಗೆ ಮನವಿ ಸಲ್ಲಿಸಿದರು.

    ರಾಜ್ಯ ನೋಟರಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಚಿಕ್ಕನಗೌಡರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಎ.ಎಂ. ಸಿದ್ರಾಮನಿ ಮಾತನಾಡಿ, ವಕೀಲರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನ್ಯಾಯವಾದಿಗಳಾದ ಝಡ್.ಎ. ಗೋಕಾಕ, ಆರ್.ಎ. ಪಾಟೀಲ, ಡಿ.ಆರ್.ಜೋಶಿ, ಎಸ್.ವಿ. ಸಿದ್ದಮನಿ, ಐ.ಎಂ. ಅನಿಗೋಳ, ಪಿ.ಬಿ. ದೇಸಾಯಿ, ಎಸ್.ಟಿ. ಮಲ್ಲಾರಿ, ಬಿ.ಜಿ. ಹಮ್ಮಣ್ಣವರ, ಎಸ್.ಐ. ಪಾಟೀಲ, ಪಿ.ಡಿ. ಮರಕಟ್ಟಿ, ಆರ್.ಎ್. ಕುರುಬರ, ವಿಜಯಲಕ್ಷ್ಮೀ ಹಿರೇಮಠ, ಎಸ್.ಬಿ. ಬಡಿಗೇರ, ಎ.ಎಂ. ಕಾರೆಕಾಜಿ, ಎಂ.ಜಿ. ತಳವಾರ, ಎ.ಎ. ಕರಾಡೆ, ಆರ್.ಬಿ. ರುದ್ರಾಪುರ, ಎಸ್.ವಿ. ಬೆಳಗಾವಿ, ಎಸ್.ಬಿ. ಹಣ್ಣಿಕೇರಿ, ಐ.ಎಂ. ಗುಡದಮ್ಮನವರ, ಆರ್.ಎಸ್. ಗೌಡರ, ಬಿ.ಬಿ. ದೋತ್ರದ, ಬಸವರಾಜ ದೋತ್ರದ, ಸಕ್ಲೇನ್ ನದ್ಾ, ಆರ್.ಎಸ್. ಪಟ್ಟಣಶೆಟ್ಟಿ, ಎಸ್.ಪಿ. ಕುಲಕರ್ಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts