More

    ಒಳ್ಳೆಯ ತುಳು ಚಿತ್ರದ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇವೆ; ಮಂಗಳೂರಿನಲ್ಲಿ ಅಶ್ವಿತಿ- ಅದ್ವಿತಿ ಶೆಟ್ಟಿ ಚಲನಚಿತ್ರನಟಿ ಸಹೋದರಿಯರ ಮಾತು

    ತುಳು ಸಿನಿಮಾ ದಲ್ಲಿ ನಟಿಸಲು ಒಂದು ಒಳ್ಳೆಯ ಸ್ಕ್ರಿಪ್ಟ್‌ಗಾಗಿ ನಾವು ಇಬ್ಬರೂ ಕಾದು ಕುಳಿತ್ತಿರುವುದಾಗಿ ಮಂಗಳೂರು ಮೂಲದ ಮಾಡೆಲ್ ಹಾಗೂ .‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಚಿತ್ರ ಖ್ಯಾತಿಯ ಚಲನಚಿತ್ರ ನಟಿಯರಾದ ಅಶ್ವಿತಿ ಹಾಗೂ ಅದ್ವಿತಿ ಶೆಟ್ಟಿ ಹೇಳಿದ್ದಾರೆ.

    • ನಗರದ ಎಂ.ಜಿ.ರಸ್ತೆಯಲ್ಲಿರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನಲ್ಲಿ ಶನಿವಾರ ಯುಗಾದಿ ಸಂಭ್ರಮ ಕಾರ್ಯಕ್ರಮದಲ್ಲಿ ಯುಗಾದಿ ಸಂದರ್ಭಕ್ಕೆಂದು ವಿಶೇಷವಾಗಿ ವಿನ್ಯಾಸಗೊಳಿಸಲಾದ ಆಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
    • ನಾವು ಸಹೋದರಿಯರು ಇಬ್ಬರೂ ಜತೆಯಾಗಿ ನಟಿಸಿದ ‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಅದ್ಭುತವಾದ ಯಶಸ್ಸು ಕಂಡಿತು. ಉತ್ತಮ ಚಿತ್ರಕತೆ ಇರುವ ಪಾತ್ರಗಳು ದೊರೆತಾಗ ಖಂಡಿತವಾಗಿಯೂ ಮತ್ತೆ ಜತೆಯಾಗಿ ನಟಿಸುವುದಾಗಿ ಅದ್ವಿತಿ ಶೆಟ್ಟಿ ಹೇಳಿದರು
    • ಅಶ್ವಿಥಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಕೂಡ್ಲ ಮೂಲದ ಅವಳಿ ಜವಳಿ ಸಹೋದರಿಯರು. ಇಬ್ಬರು ಸಹೋದರಿಯರು ಮನರಂಜನಾ ಕ್ಷೇತ್ರದ ಎಲ್ಲ ವಿಧಗಳಲ್ಲೂ ಸಕ್ರಿಯವಾಗಿದ್ದಾರೆ. ಹಲವಾರು ಡ್ಯಾನ್ಸ್ ಶೋ ಗಳನ್ನು ನೀಡಿದ್ದಾರೆ.‘ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ’ ಚಿತ್ರದ ಮೂಲಕ ಇಬ್ಬರು ಸಹೋದರಿಯರು ಚಂದನವನ ಪ್ರವೇಶಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿದ್ದಾರೆ. ರಾಮಾಚಾರಿ ನಂತರ ಬಿಡುಗಡೆಗೊಂಡ ‘ಸುಳಿ’ ಚಿತ್ರದಲ್ಲಿ ಕೂಡ ಇಬ್ಬರು ಅಭಿನಯಿಸಿದರು.
    • ಮಂಗಳೂರು ಮೂಲದ ಯತಿರಾಜ್ ಶೆಟ್ಟಿ ಮತ್ತು ನಂದಾ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಅಶ್ವಿಥಿ ಮಣಿಪಾಲ್ ಮ್ಯಾನೇಜಮೆಂಟ್ ಇನ್ಸ್ಟಿಟ್ಯೂಟ್‌ನ ಪದವೀಧರೆ.‘ಮಿಸ್ ಬಂಟ್ ಬೆಂಗಳೂರು’,‘ಮಿಸ್ ಮಂಗಳೂರು ಬ್ಯೂಟಿ ಹೇರ್’ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts