More

    ಬುಧವಾರ ಮತ್ತೆ 379 ಜನರಿಗೆ ತಗುಲಿದ ಸೋಂಕು

    ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ರಣಕೇಕೆ ಹಾಕುತ್ತಿದ್ದು, ಬುಧವಾರ 379 ಜನರಿಗೆ ಸೋಂಕು ತಗುಲಿರುವುದು ದೃಢವಾಗಿದ್ದು, ಸೋಂಕಿತರ ಸಂಖ್ಯೆ 8,755ಕ್ಕೆ ಏರಿಕೆಯಾಗಿದೆ. ಮೂವರು ಕೋವಿಡ್-19ಗೆ ಮೃತಪಟ್ಟಿದ್ದು, ಮೃತರ ಸಂಖ್ಯೆ 140ಕ್ಕೆ ಏರಿಕೆಯಾಗಿದೆ. ಬೆಳಗಾವಿ ತಾಲೂಕಿನ 75 ವರ್ಷದ ವೃದ್ಧ ಹಾಗೂ 52, 55 ವರ್ಷದ ಇಬ್ಬರು ಮಹಿಳೆಯರು ಬಲಿಯಾಗಿದ್ದಾರೆ.

    ಬೆಳಗಾವಿ ತಾಲೂಕಿನಲ್ಲಿ-160, ಚಿಕ್ಕೋಡಿ-46, ಬೈಲಹೊಂಗಲ-43, ಹುಕ್ಕೇರಿ-40, ಗೋಕಾಕ-32, ಸವದತ್ತಿ-18, ರಾಮದುರ್ಗ-17, ಖಾನಾಪುರ ಹಾಗೂ ರಾಯಬಾಗದಲ್ಲಿ ತಲಾ-8, ಅಥಣಿ ತಾಲೂಕಿನಲ್ಲಿ-5 ಹಾಗೂ ಹುಬ್ಬಳ್ಳಿ ತಾಲೂಕಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ.

    943 ಕರೊನಾ ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಕರೊನಾ ವೈರಸ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 69,812 ಜನರ ಮೇಲೆ ನಿಗಾ ವಹಿಸಲಾಗಿದೆ. 21,530 ಜನ 14 ದಿನ ಮನೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 8,379 ಜನ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 36,213 ಜನ 28 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ. 68,516 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ.

    57,936 ಮಾದರಿಗಳು ನೆಗೆಟಿವ್ ಬಂದಿವೆ. ಕರೊನಾ ಸೋಂಕು ತಗುಲಿದ್ದ 267 ಜನರು ಬುಧವಾರ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಬಿಡುಗಡೆಯಾದವರ ಸಂಖ್ಯೆ 4,925ಕ್ಕೆ ಏರಿಕೆಯಾಗಿದೆ. 3,717 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts