More

    ಅಧ್ಯಯನದಲ್ಲಿ ಶಿಸ್ತು-ಸ್ಪಷ್ಟತೆ ಅಳವಡಿಸಿಕೊಳ್ಳಿ

    ವಿಜಯಪುರ: ಸ್ಪರ್ಧಾತ್ಮಕ ಜಗತ್ತಿನ ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಶಿಸ್ತು-ಸ್ಪಷ್ಟತೆ ಮತ್ತು ಕಠಿಣ ಪರಿಶ್ರಮ ಅಳವಡಿಸಿಕೊಂಡಾಗ ಜೀವನದಲ್ಲಿ ಸಾಧನೆಯ ಶಿಖರಕ್ಕೆ ಏರಬಲ್ಲರು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

    ನಗರದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಅಧ್ಯಯನ ಹೊರತುಪಡಿಸಿ ಉಳಿದೆಲ್ಲಾ ಸಂಗತಿಗಳು ವಿದ್ಯಾರ್ಥಿಗಳಿಗೆ ಗೌಣವಾಗಬೇಕು. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೇವೆ ಜಗತ್ತಿನ ಎರಡು ಶ್ರೇಷ್ಠ ಕಾಯಕಗಳಾಗಿದ್ದು, ಇಂತಹ ಸೇವೆಗಳನ್ನು ಪ್ರೋತ್ಸಾಹಿಸುತ್ತಿರುವ ವಿದ್ಯಾರ್ಥಿ ಪಾಲಕರು ಸಹ ಅಭಿನಂದನಾರ್ಹರು ಎಂದರು.

    ಸಾನ್ನಿಧ್ಯ ವಹಿಸಿದ್ದ ಬಾಲಗಾಂವ್ ಗುರುದೇವ ಆಶ್ರಮದ ಡಾ. ಅಮೃತಾನಂದ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಶ್ರೀಮಂತಿಕೆಗಿಂತ ವ್ಯಕ್ತಿತ್ವ ಮುಖ್ಯವಾಗಿದೆ. ವಿದ್ಯಾರ್ಥಿಗಳು ಧನಾತ್ಮಕ ಮನೋಭಾವದಿಂದ ಅಧ್ಯಯನ ಮಾಡಿ ಸಾಧಕರಾಗಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಚೇರಮನ್ ಬಸವರಾಜ ಕೌಲಗಿ ಮಾತನಾಡಿ, ಈ ವರ್ಷ 50ವಿದ್ಯಾರ್ಥಿಗಳು ಮೆಡಿಕಲ್ ಸೀಟ್ ಪಡೆಯಲಿದ್ದು, 5 ವಿದ್ಯಾರ್ಥಿಗಳು ಐಐಟಿಯಲ್ಲಿ ಪ್ರವೇಶ ಹೊಂದಲಿದ್ದಾರೆ. ಜೆಇಇ ಹಾಗೂ ನೀಟ್ ವಿಭಾಗಗಳಲ್ಲಿ ಕಾಲೇಜು ಉತ್ತಮ ಲಿತಾಂಶ ಗಳಿಸಿದೆ ಎಂದರು.

    ಯುವ ಮುಖಂಡ ಸಂಗಮೇಶ ಬಬಲೇಶ್ವರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ, ಉಪನ್ಯಾಸಕ ಮಂಜುನಾಥ ಜುನುಗೊಂಡ, ಸರ್ಕಾರಿ ಕಾಲೇಜ್ ಉಪನ್ಯಾಸಕ ಶಿವಾನಂದ ಕಲ್ಯಾಣಿ ಉಪಸ್ಥಿತರಿದ್ದರು.

    ನನ್ನ ತಂದೆ ಟೀ ಅಂಗಡಿ ವ್ಯಾಪಾರಿ ನನಗೆ ಕಾಲೇಜು ಶುಲ್ಕ ಕೊಡುವುದು ಕಷ್ಟವಾಗಿತ್ತು. ಇಂತಹ ಸಮಯದಲ್ಲಿ ಎಕ್ಸಲೆಂಟ್ ಕಾಲೇಜು ಎರಡು ವರ್ಷ ಉಚಿತ ಶಿಕ್ಷಣ ನೀಡಿ ವೈದ್ಯನಾಗುವ ಕನಸು ನನಸು ಮಾಡಿತು ಎಂದು ನೀಟ್‌ನಲ್ಲಿ 592 ಅಂಕ ಪಡೆದ ಶರಣು ವಜ್ಜಲ ತಮ್ಮ ಅನುಭವ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts