More

    ಬಸವಣ್ಣನವರ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಜೀವನದಲ್ಲಿ ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ಸಾಗಬೇಕು ಎಂದು ಜಗತ ಭೋವಿ ವಡ್ಡರ್​ ಪಂಚಪೀಠದ ಅಧ್ಯಕ್ಷ ಶ್ರೀ ರಂಗನಾಥ ಸ್ವಾಮೀಜಿ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಜಗತ್​ ಭೋವಿ ವಡ್ಡರ ಪಂಚಪೀಠ ವತಿಯಿಂದ ಬೃಹತ್​ ರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.
    ಸಮಾಜದಲ್ಲಿ ಮೊತ್ತಬ್ಬರಿಗೆ ಕೇಡುಂಟು ಮಾಡದೆ ಒಳಿತನ್ನೇ ಬಯಸಬೇಕು. ಅಂದಾಗ ಮಾತ್ರ ನಮ್ಮ ಜೀವನ ಪಾವನವಾಗಲಿದೆ. ಸಮಾಜದ ಮಕ್ಕಳಿಗೆ ಸಹ ಶಿಕ್ಷಣದ ಜತೆಗೆ ಒಳ್ಳೆ ಸಂಸತಿ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.
    ಸಮಾಜದ ಮುಖಂಡ ಬಸವರಾಜ ಮುತ್ತಳ್ಳಿ ಮಾತನಾಡಿ, ನಮ್ಮ ಸಮಾಜ ಹಿಂದುಳಿದ ಸಮಾಜವಾಗಿದೆ. ಸಮಾಜದ ಜನರಿಗೆ ಭೋವಿ ನಿಗಮದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಮ್ಮ ಬೇಡಿಕೆಗಳ ಈಡೇರಿಕೆಗಳಿಗೆ ಸರ್ಕಾರಗಳೂ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ ನಾವೆಲ್ಲರೂ ಸೇರಿ ಒಟ್ಟಾಗುವ ಮೂಲಕ ನಮ್ಮ ಬೇಡಿಕೆಗಳನ್ನು ಪಡೆದುಕೊಳ್ಳಲು ಪ್ರಯತ್ನ ಪಡಬೇಕು ಎಂದರು.
    ಶ್ರೀ ನರಸಿಂಹ ಸ್ವಾಮೀಜಿ ಮಾತನಾಡಿದರು. ಗೌರವ ಅಧ್ಯಕ್ಷ ಶ್ರೀ ನರಸಿಂಹ ಸ್ವಾಮೀಜಿ, ಉಪಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಕವಿ ಸ್ವಾಮೀಜಿ, ಶ್ರೀ ಯೋಗಾನಂದ ಸ್ವಾಮೀಜಿ, ಪಂಚಪೀಠದ ಸಂಸ್ಥಾಪಕ ಮಂಜುನಾಥ ಹಿರೇಮನಿ, ಭೋವಿ ವಡ್ಡರ ಸಮಾಜದ ರಾಜ್ಯಾಧ್ಯಕ್ಷ ವೈ. ಕೊಟ್ರೇಶ, ಧಾರವಾಡ ಜಿಲ್ಲಾಧ್ಯಕ್ಷ ಹರೀಶ ವಡ್ಡರ್​, ಉಪಾಧ್ಯಕ್ಷ ಮಂಜುನಾಥ ಹಳಿಯಾಳ, ರಾವೇಂದ್ರ ದೊಡಮನಿ, ಬೈಲಹೊಂಗಲ ತಾಲೂಕು ಅಧ್ಯಕ್ಷ ಗಣಪತಿ ಮೊರಬ, ಸಮಾಜದ ಮುಖಂಡರಾದ ಮಲ್ಲೇಶ ಮುನವಳ್ಳಿ, ಭೀಮಶಿ ನೇಮಿಕಲ್ಲ, ತಿಮ್ಮಣ್ಣ ಹಿರೇಮನಿ, ಶಿಲ್ಪಾ ದೊಡ್ಡಮನಿ, ದೇವೇಂದ್ರ ಕಾಲವಾಡ, ಯಲ್ಲಪ್ಪ ಹಸಮಟ್ಟಿ, ರಾಮಣ್ಣ ವಡ್ಡರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts