More

    ಚೆಕ್ ಡ್ಯಾಮ್ ನಿರ್ಮಾಣಕ್ಕೆ ಗ್ರಹಣ

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸುಜಲಾಂ ಸುಫಲಾಂ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ಹಾಗೂ ಭಾರತೀಯ ಜೈನ್ ಸಂಘದ ಸಹಯೋಗದಡಿ ಪ್ರಗತಿಯಲ್ಲಿರುವ ನಾಲಾ ನಿರ್ಮಾಣ ಯೋಜನೆ ಬಹುತೇಕ ಪೂರ್ಣಗೊಂಡಿದೆ. ಆದರೆ ಚೆಕ್ಡ್ಯಾಮ್ ನಿರ್ಮಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿರುವುದರಿಂದ ದೊಡ್ಡ ಕೆರೆಗೆ ನೀರು ಹರಿಸುವ ಭಗೀರಥ ಯತ್ನಕ್ಕೆ ಹಿನ್ನಡೆಯಾಗಿದೆ.

    ಕಳೆದ ವರ್ಷ ಜೈನ ಸಂಘದಿಂದ (ಬಿಜೆಎಸ್) ಜಿಲ್ಲೆಯ 23 ಕೆರೆಗಳಲ್ಲಿ ಹೂಳೆತ್ತುವ ಕಾಮಗಾರಿ ಪೂರ್ಣಗೊಳಿಸಲಾಗಿತ್ತು. ಆದರೆ ಹೂಳೆತ್ತಿದ ಕೆರೆಗಳಲ್ಲಿ ನೀರು ಸಂಗ್ರಹವಾಗದ ಹಿನ್ನೆಲೆಯಲ್ಲಿ ಈ ಬಾರಿ ಸಣ್ಣ ನೀರಾವರಿ ಇಲಾಖೆ ಮತ್ತು ಭಾರತೀಯ ಜೈನ್ ಸಂಘಟನೆಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ನಾಲಾ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 10 ಜೆಸಿಬಿ ಯಂತ್ರಗಳು ನಾಲಾದಲ್ಲಿ ಗಂಟೆಗೆ 75 ಕ್ಯೂಬಿಕ್ ಮಣ್ಣು ಹೊರ ತೆಗೆಯುತ್ತಿವೆ. ಇದರಿಂದ 75 ಸಾವಿರ ಲೀಟರ್ ಹೆಚ್ಚುವರಿ ನೀರು ಸರಾಗವಾಗಿ ಹರಿದು ಕೆರೆ ಒಡಲು ಸೇರಲಿದೆ. ಸದ್ಯ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನಾಲಾಗಳಲ್ಲಿ ನೀರು ತುಂಬಿ ಜೀವಕಳೆ ಬಂದಿದೆ.

    ಕೋವಿಡ್-19 ಆತಂಕದಲ್ಲೂ ಜಿಲ್ಲೆ ರೈತರಿಗೆ ನೀರಾವರಿಗಾಗಿ ಅನುಕೂಲ ಕಲ್ಪಿಸುವಂಥ ಕೆಲಸ ನಿರಂತರ ನಡೆದಿದೆ. ಯಾದಗಿರಿ ದೊಡ್ಡ ಕೆರೆಯಿಂದ ಆರ್ಟಿಒ ಸಮೀಪದ ಹಳ್ಳದವರೆಗೆ 6 ಚೆಕ್ ಡ್ಯಾಮ್ ನಿರ್ಮಿಸಬೇಕಾದ ಅಗತ್ಯವಿದೆ. ಇದರಿಂದ ನೀರು ವ್ಯರ್ಥವಾಗಿ ಹಳ್ಳ ಸೇರದೆ ಅಲ್ಲಲ್ಲಿ ಸಂಗ್ರಹಗೊಂಡರೆ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಗಿ ಬೇಸಿಗೆ ವೇಳೆ ಬೋರ್ವೆಲ್ಗಳು ಬತ್ತುವುದಿಲ್ಲ. ಆದರೆ ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಗಮನಹರಿಸದ ಕಾರಣ ನೀರು ವ್ಯರ್ಥವಾಗಿ ಹಳ್ಳ ಸೇರುತ್ತಿದ್ದು, ಹಗಲಿರುಳು ಶ್ರಮಪಟ್ಟು ಮಾಡಿದ ಕೆಲಸವೆಲ್ಲ ನದಿಯಲ್ಲಿ ಹೋಮ ಮಾಡಿದಂತಾಗುತ್ತಿದೆ.

    ಮುಂಡರಗಿಯಿಂದ ದೊಡ್ಡ ಕೆರೆ ಮಧ್ಯೆ ಮತ್ತು ದೊಡ್ಡ ಕೆರೆಯಿಂದ ಆರ್ಟಿಒ ಹಳ್ಳದಲ್ಲಿ ಸಣ್ಣ ಗಾತ್ರದ ಕನಿಷ್ಠ 20 ಚೆಕ್ಡ್ಯಾಮ್ ನಿಮರ್ಾಣಗೊಂಡರೆ ಭವಿಷ್ಯದಲ್ಲಿ ಯಾದಗಿರಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ನೀರಿನ ಸಮಸ್ಯೆ ಎದುರಾಗದು ಎನ್ನುತ್ತಾರೆ ಬಿಜೆಎಸ್ ಪದಾಧಿಕಾರಿಗಳು. ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನಲ್ಲಿ ನದಿ ಇಲ್ಲದ್ದರಿಂದ ಬಹುತೇಕ ಹಳ್ಳಿ ರೈತರು ಕೃಷಿ ಚಟುವಟಿಕೆಗಾಗಿ ಕೆರೆಗಳ ಮೇಲೆಯೇ ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಸಕಾಲಕ್ಕೆ ಮಳೆಯಾಗದ ಕಾರಣ ರೈತರು ಹೊಟ್ಟೆಪಾಡಿಗಾಗಿ ದೂರದ ಶಹರಗಳಿಗೆ ಗುಳೆ ಹೊರಡುತ್ತಿದ್ದಾರೆ.

    ಇದನ್ನರಿತು ಕೇಂದ್ರ ಸಕರ್ಾರ ನೀತಿ ಆಯೋಗದಡಿ ದೇಶದಲ್ಲಿ ಅತಿ ಹಿಂದುಳೀದ 115 ಜಿಲ್ಲೆಗಳ ಪೈಕಿ ಯಾದಗಿರಿ ಸೇರಿಸಿ ಇಂಥ ಮಹತ್ತರ ಕಾರ್ಯಕ್ಕೆ ಕೈ ಹಾಕಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಪಂ ಅಧಿಕಾರಿಗಳು ತಲೆಕೆಡಿಸಿಕೊಳ್ಳದ ಕಾರಣ ಮಹತ್ತರ ಯೋಜನೆಗೆ ಕೊಡಲಿಪೆಟ್ಟು ಬಿದ್ದಂತಾಗಿರುವುದು ಸುಳ್ಳಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts