More

    VIDEO: ಬೆಂಗಳೂರಿಗೆ ಬಂದು ಮುಖ್ಯಮಂತ್ರಿಯವರನ್ನು ಭೇಟಿಯಾದ ಕ್ಯಾಟ್​ವಾಕ್​ ಸುಂದರಿ ಯಾರು?!

    ಬೆಂಗಳೂರು: ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ಆಗಮಿಸಿದ ಸುಂದರಿಯೊಬ್ಬರು ಇಂದು ಎಲ್ಲರ ಗಮನಸೆಳೆದರು. ಮಿಸ್ ಯೂನಿವರ್ಸ್ ಕಿರೀಟಿ ಮುಡಿಗೇರಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಶುಭ ಹಾರೈಸಿದರು.

    VIDEO: ಬೆಂಗಳೂರಿಗೆ ಬಂದು ಮುಖ್ಯಮಂತ್ರಿಯವರನ್ನು ಭೇಟಿಯಾದ ಕ್ಯಾಟ್​ವಾಕ್​ ಸುಂದರಿ ಯಾರು?!ಯಾರೀಕೆ ಎಂಬ ಸಹಜ ಕುತೂಹಲ ಅಲ್ಲಿದ್ದವರನ್ನು ಎಲ್ಲರನ್ನೂ ಕಾಡಿತ್ತು. ಎಲ್ಲರ ದೃಷ್ಟಿಯೂ ಆಕೆ ಮೇಲೆಯೇ ಇತ್ತು. ಈಕೆ ಬೇರಾರೂ ಅಲ್ಲ, ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಉಡುಪಿಯ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ.

    ಏನಿದು ಸ್ಪರ್ಧೆ: ಲಿವಾ ಫ್ಲೂಯಿಡ್ ಷ್ಯಾಷನ್​ ಮಾಲೀಕತ್ವದ ಮಿಸ್​ ದಿವಾ 2020ಯ 8ನೇ ಆವೃತ್ತಿಯ ಸ್ಪರ್ಧೆ ಫೆಬ್ರವರಿ 22ರಂದು ಮುಂಬೈನ ಅಂಧೇರಿ ವೆಸ್ಟ್​ನಲ್ಲಿರುವ ಯಶ್​ ರಾಜ್ ಸ್ಟುಡಿಯೋದಲ್ಲಿ ನಡೆದಿತ್ತು. ದೇಶಾದ್ಯಂತ ಆಯ್ದ 20 ಸ್ಪರ್ಧಿಗಳು ಅಂತಿಮ ಸುತ್ತಿನ ಹಣಾಹಣಿಯಲ್ಲಿ ಭಾಗವಹಿಸಿದ್ದರು. ಕೊನೆಗೆ ಲೀವಾ ಮಿಸ್ ದಿವಾದ ಮಿಸ್​ ಯೂನಿವರ್ಸ್ ಇಂಡಿಯಾ 2020ರ ಕಿರೀಟವನ್ನು ಉಡುಪಿಯ ಅಡ್ಲೀನ್ ಕ್ಯಾಸ್ಟಲಿನೊ ಮುಡಿಗೇರಿಸಿಕೊಂಡರು. 2019ರ ಮಿಸ್​ ಯೂನಿವರ್ಸ್ ಇಂಡಿಯಾ ವರ್ತಿಕಾ ಸಿಂಗ್ ಅವರು ಬೆಳ್ಳಿ ಕಿರೀಟವನ್ನು ಅಡ್ಲೀನ್​ಗೆ ತೊಡಿಸಿದರು. ಇದೇ ಅಡ್ಲೀನ್ ಕ್ಯಾಸ್ಟಲಿನೋ ಮಿಸ್ ಯೂನಿವರ್ಸ್ 2020ರ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts