More

    ಹೊಂದಾಣಿಕೆ ಜೀವನದಿಂದ ನೆಮ್ಮದಿ

    ಬೆಳಗಾವಿ: ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಎಲ್ಲರೊಂದಿಗೆ ಹೊಂದಾಣಿಕೆಯ ಜೀವನ ನಡೆಸಬೇಕಿದೆ ಎಂದು ಬೆಳಗಾವಿ ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದ್ದಾರೆ.

    ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಹಾಗೂ ‘ಭಾರತದ ಉಕ್ಕಿನ ಮನುಷ್ಯ’ ಸರ್ದಾರ ವಲ್ಲಭಬಾಯಿ ಪಟೇಲ್ ಅವರ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ಚಿಕ್ಕನಗೌಡರ, ಮಹೇಶ ಮೋಹಿತೆ, ಮಲ್ಲಿಕಾರ್ಜುನ ಮಾದಮ್ಮನವರ, ವೀರಭದ್ರಯ್ಯ ಪೂಜೇರ, ಜಿತೇಂದ್ರ ಮಾದರ, ಶೇಖರ ಕಾಲೇರಿ, ಈರಪ್ಪ ಢವಳೇಶ್ವರ, ಕಪಿಲ ತ್ಯಾಗಿ, ನಿತಿನ್ ಚೌಗುಲೆ, ರಾಜೇಂದ್ರ ಪಾಟೀಲ, ಸೂರ್ಯಕಾಂತ ಚೌಗುಲೆ, ಅರುಣ ಕೋಲಕಾರ, ಯಲ್ಲಪ್ಪ ಶಹಾಪುರಕರ, ಮಲ್ಲಪ್ಪ ಪಾಟೀಲ ಇತರರು ಇದ್ದರು.

    ಕುಲಗೋಡ ವರದಿ: ಯುವಕರು ದೇಶದ ಏಕತೆಗೆ ಶ್ರಮಿಸಿದರೆ ಭಾರತ ಸುಭದ್ರವಾಗಿರುತ್ತದೆ. ಭಾಷೆ-ಸಂಸ್ಕೃತಿಗಳ ಒಕ್ಕೂಟವಾಗಿರುವ ಭಾರತ ವಿವಿಧೆತೆಯಲ್ಲಿ ಏಕತೆ ಸಾರುವ ಮೂಲಕ ವಿಶ್ವಕ್ಕೆ ಗುರುವಾಗಲಿ ಎಂದು ಬೆಟಗೇರಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ ಅಳಗುಂಡಿ ಆಶಯ ವ್ಯಕ್ತಪಡಿಸಿದ್ದಾರೆ. ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದ ಸರ್ಕಾರಿ ಪಿಯು ಮಹಾವಿದ್ಯಾಲಯದಲ್ಲಿ ಶನಿವಾರ ಕುಲಗೋಡ ಪೋಲಿಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತೆ ಮತ್ತು ಭದ್ರತೆ ವಿಷಯ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

    ಪ್ರಬಂಧಕಾರ ಡಾ.ರಾಜು ಕಂಬಾರ, ಒಕ್ಕೂಟ ವ್ಯವಸ್ಥೆಗೆ ಸರದಾರ್ ವಲ್ಲಭಬಾಯಿ ಪಟೇಟ್ ಕೊಡುಗೆ ಅಪಾರವಾಗಿದೆ ಎಂದರು. ಏಕತಾ ದಿನದ ಅಂಗವಾಗಿ ಕುಲಗೋಡ ಗ್ರಾಮದಿಂದ ಕೌಜಲಗಿಯವರೆಗೆ ಸುಮಾರು 5 ಕಿ.ಮೀ. ವರೆಗೆ, ಇಲ್ಲಿಯ ಪೋಲಿಸ್ ಸಿಬ್ಬಂದಿ ಪಿಎಸ್‌ಐ ಎಚ್.ಕೆ.ನೇರಳೆ ನೇತೃತ್ವದಲ್ಲಿ ಏಕತಾ ಓಟ ನಡೆಯಿತು. ಪ್ರಾಚಾರ್ಯ ಎಂ.ಕೆ.ಹಾದಿಮನಿ, ಜ್ಞಾನಜ್ಯೋತಿ ಪ್ರೌಢಶಾಲೆ ಚೇರ್ಮನ್ ಶಿವಾನಂದ ಲೋಕಣ್ಣವರ, ರವಿ ಪರುಶೆಟ್ಟಿ, ಮಹಾದೇವ ಬುದ್ನಿ, ಅಶೋಕ ಹೊಸಮನಿ, ಚೇತನ ಯಕ್ಷಂಬಿ, ಬಸು ಮಲಕಣ್ಣವರ, ಮಲ್ಲಪ್ಪ ಗೋಕಾವಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts