More

    ಕ್ಷೇತ್ರದ ಅಭಿವೃದ್ಧಿಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕ

    ದೇವನಹಳ್ಳಿ: ಮುಂದಿನವಾರದಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ದೇವನಹಳ್ಳಿ ಕ್ಷೇತ್ರಕ್ಕೆ ಅವಶ್ಯ ಮೂಲಸೌಕರ್ಯ ಸೇರಿ ವಿವಿಧ ಅಭಿವೃದ್ಧಿಗಳ ಕುರಿತಾದ ಮಾಹಿತಿಗಾಗಿ ಎಲ್ಲ ಗ್ರಾಮಪಂಚಾಯಿತಿ ಪಿಡಿಒಗಳು, ಎರಡು ಪುರಸಭೆ ಮುಖ್ಯಾಧಿಕಾರಿಗಳು, ಕಂದಾಯ ಇಲಾಖಾಧಿಕಾರಿಗಳು, ವಿವಿಧ ಇಲಾಖಾಧಿಕಾರಿಗಳ ಸಭೆಯನ್ನು ಕಾರ್ಯನಿರ್ವಹಣಾಧಿಕಾರಿ ಮುರಡಯ್ಯ ಹಾಗೂ ತಹಸೀಲ್ದಾರ್ ಅಜಿತ್‌ರೈ ಉಪಸ್ಥಿತಿಯಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.

    ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಿಡಿಒಗಳು ತಮ್ಮ ಗ್ರಾಪಂಗಳಿಗೆ ಬೇಕಿರುವ ಅಗತ್ಯವಿರುವ ಬೇಡಿಕೆಗಳನ್ನು ಸೋಮವಾರ ಶಾಸಕರ ಗಮನಕ್ಕೆ ತಂದರು.

    ಕುಡಿಯುವ ನೀರು, ತ್ಯಾಜ್ಯ ವಿಲೇವಾರಿ, ಟ್ಯಾಂಕರ್ ನೀರಿನ ಬಿಲ್ ಪಾವತಿ ಸೇರಿ ಇನ್ನಿತರ ಅಂಶಗಳ ಬಗ್ಗೆ ಗಮನ ಸೆಳೆಯಲಾಯಿತು.

    ಎಲ್ಲ ಪಂಚಾಯಿತಿಗಳ ಸಮಸ್ಯೆ ಆಲಿಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಯಾವ ಪಂಚಾಯಿತಿಗೆ ಏನು ಅವಶ್ಯಕತೆ ಇದೆ ಎಂಬ ವಿವರಗಳನ್ನು ಎರಡು ಮೂರು ದಿನಗಳ ಒಳಗಾಗಿ ಪಟ್ಟಿ ಮಾಡಿ ಲಖಿತವಾಗಿ ಇಒಗೆ ನೀಡಿ. ನಂತರ ಸಂಬಂಧಪಟ್ಟ ಅಧಿಕಾರಿಗಳ ಬಳಿ ಾಲೋಅಪ್ ಮಾಡಿ. ಆ ಅಧಿಕಾರಿಗಳಿಗೆ ಶೀಘ್ರ ಕೆಲಸ ಮಾಡುವಂತೆ ಸೂಚಿಸುತ್ತೇನೆ ಎಂದರು.

    ಪುರಸಭಾ ಮುಖ್ಯಾಧಿಕಾರಿ ಎಚ್.ಸಿ.ಹನುಮಂತೇಗೌಡ, ಸಮಾಜಕಲ್ಯಾಣಾಧಿಕಾರಿ ಚನ್ನಬಸಪ್ಪ, 24 ಗ್ರಾಪಂ ಪಿಡಿಒಗಳು, ಕಂದಾಯ ಇಲಾಖೆ ಆರ್‌ಐಗಳು ಉಪಸ್ಥಿತರಿದ್ದರು.

    ಸರ್ಕಾರ ಹಂತದ ಕೆಲಸ ಮಾಡಿಸಿಕೊಡುವ ಭರವಸೆ: ಸರ್ಕಾರದ ಹಂತದಲ್ಲಿ ಆಗಬೇಕಾದ ಕೆಲಸಗಳನ್ನು ನಾನು ಅಧಿವೇಶನದಲ್ಲಿ ಮಾತನಾಡಿ ಮಾಡಿಕೊಡುವೆ. ಟ್ಯಾಂಕರ್ ನೀರಿನ ಬಿಲ್ ಬಾಕಿ, ಸಿಬ್ಬಂದಿಗೆ ವೇತನವಾಗದಿರುವ ವಿವರ ನೀಡಿ ಅದನ್ನು ಮಾತನಾಡುತ್ತೇನೆ. ಇದರ ಜತೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಷ್ಟು ಎಕರೆ ರೈತರ ಭೂಮಿ ಹೋಗಿದೆ ಭೂಮಿ ಕೊಟ್ಟ ರೈತರ ಸ್ಥಿತಿಗತಿ ಈಗ ಹೇಗಿದೆ ಎಂಬ ಸಂಪೂರ್ಣ ವಿವರ ಬೇಕು. ಪೋಡಿಮುಕ್ತ ಗ್ರಾಮಗಳ ಮಾಹಿತಿ, ನಿವೇಶನ ರಹಿತರ ನಿವೇಶನ ಬೇಡಿಕೆ ಅರ್ಜಿಗಳ ಪಟ್ಟಿ ಎಲ್ಲವೂ ಎರಡು ದಿನದಲ್ಲಿ ನೀಡಬೇಕು ಎಂದು ಕಂದಾಯ ಇಲಾಖೆಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೂಚಿಸಿದರು.

    ನನ್ನವರೆಗೂ ದೂರು ತರಬೇಡಿ: ಹಳ್ಳಿಗಳ ಚರಂಡಿ ಸರಿ ಇಲ್ಲವೆಂದು ಜನ ಶಾಸಕರಿಗೆ ಕರೆ ಮಾಡುತ್ತಾರೆ ಗ್ರಾಪಂ, ಜಿಪಂ ಕೆಲಸ ಮಾಡುತ್ತಿಲ್ಲವೆ. ಸಕಾಲದಲ್ಲಿ ಬರಬೇಕಾದ ತೆರಿಗೆ ವಸೂಲಿ ಮಾಡಿ ಅವಶ್ಯ ಮೂಲ ಸೌಕರ್ಯಗಳನ್ನು ಆ ಹಣದಲ್ಲಿಯೇ ಜನರಿಗೆ ಮಾಡಿಕೊಡಿ. ನನ್ನವರೆಗೂ ದೂರು ತರುವಂತೆ ಮಾಡಬೇಡಿ. ಮೂರು ತಿಂಗಳಿಗೊಮ್ಮೆ ನಡೆಯುವ ಸಭೆಗೆ ಎಲ್ಲ ಅಧಿಕಾರಿಗಳ, ಪಿಡಿಒಗಳ ಹಾಜರಾತಿ ಕಡ್ಡಾಯ ಎಂದು ಶಾಸಕರು ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts