More

    ಆದಿ ಶಂಕರಾಚಾರ್ಯರ ತತ್ವಾದರ್ಶಗಳನ್ನು ಎರಲ್ಲರೂ ಅಳವಡಿಸಿಕೊಳ್ಳೋಣ- ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿ ಸಲಹೆ

    ಗಂಗಾವತಿ: ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಜಗದ್ಗುರು ಶ್ರೀ ಶಂಕರಾಚಾರ್ಯ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿ ಮಾತನಾಡಿ, ದಾರ್ಶನಿಕರ ತತ್ವ ಅದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅವಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಶಿರಸ್ತೇದಾರರಾದ ವಸಂತ ಮಾಧವ, ಶ್ರೀಕಂಠೇಶ, ಮಹ್ಮದ್ ರಫೀ, ಶರಣಪ್ಪ, ಪವನಕುಮಾರ, ಕವಿತಾ ಇತರರು ಇದ್ದರು.

    ಶಂಕರ ಮಠ: ನಗರದ ಶ್ರೀ ಶಂಕರ ಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ದೇವಸ್ಥಾನ ಸಮಿತಿ ಆಚಾರ್ಯ ಶಂಕರರ ಜಯಂತಿ ಆಚರಿಸಿತು. ಮಠದಲ್ಲಿ ಶ್ರೀಶಾರದಾದೇವಿ, ಗಣೇಶ, ದತ್ತಾತ್ರೇಯ ಮತ್ತು ಶಂಕರಾಚಾರ್ಯ ಮೂರ್ತಿಗಳನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ಕೆಳಮಹಡಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕೆ ವಿತರಿಸುವ 30 ಹುಡುಗರಿಗೆ ಆಹಾರ ದಿನಸಿಯನ್ನೊಳಗೊಂಡ ಕಿಟ್ ವಿತರಿಸಲಾಯಿತು. ಶಾಸಕ ಪರಣ್ಣ ಮುನವಳ್ಳಿ, ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ, ಡಿವೈಎಸ್ಪಿ ಡಾ. ಬಿ.ಪಿ. ಚಂದ್ರಶೇಖರ್, ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ, ನಗರಸಭೆ ಸದಸ್ಯರಾದ ಶರಭೋಜಿ ಗಾಯಕ್ವಾಡ್, ವಾಸು ನವಲಿ, ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts