More

    ಸರ್ಕಾರಿ ಶಾಲೆಗಳನ್ನು ಉಳಿಸಲು ಹೊರಟ ‘ಆಧುನಿಕ ಶ್ರವಣಕುಮಾರ’ …

    ಬೆಂಗಳೂರು: ರಾಘವೇಂದ್ರ ರಾಜಕುಮಾರ್​ ಇತ್ತೀಚೆಗೆ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ‘ಧ್ರುವ 369’ ಎಂಬ ಚಿತ್ರದಲ್ಲಿ ರಾಜ್ಯಪಾಲರ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಈಗ ಅವರು ಸದ್ದಿಲ್ಲದೆ, ‘ಆಧುನಿಕ ಶ್ರವಣಕುಮಾರ’ ಎಂಬ ಚಿತ್ರದಲ್ಲಿ ನಟಿಸಿದ್ದು, ಇತ್ತೀಚೆಗೆ ಟೀಸ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಶೂಟಿಂಗ್​ಗೆ ಹೊರಟರು ಬಡೆ ಮಿಯಾ, ಚೋಟೆ ಮಿಯಾ …

    ಸರ್ಕಾರಿ ಶಾಲೆ ಉಳಿಸಬೇಕು ಎಂದು ಪಣ ತೊಡುವ ಹಾಗೂ ಸ್ನೇಹಿತರ ಜೊತೆಗಿನ ಬಾಂಧವ್ಯವನ್ನು ಸಾರುವ ಫ್ಯಾಮಿಲಿ ಚಿತ್ರವೇ ‘ಆಧುನಿಕ ಶ್ರವಣಕುಮಾರ’ ಈ ಚಿತ್ರವನ್ನು ಕೃಷ್ಣ ಕೆ.ಎಸ್ ನಿರ್ದೇಶನ ಮಾಡಿದ್ದಾರೆ.

    ಈ ಕುರಿತು ಮಾತನಾಡುವ ಅವರು, ‘ಇದು ನನ್ನ ಮೊದಲ ಸಿನಿಮಾ. ಕೋವಿಡ್​ಗೂ ಮೊದಲೇ ಅಪ್ಪು ಸರ್ ಇದ್ದಾಗ, ರಾಘಣ್ಣ ಅವರಿಗೆ ಕಥೆ ಹೇಳಿದ್ದೆ. ತುಂಬಾ ಖುಷಿಯಿಂದ ಒಪ್ಪಿಕೊಂಡರು. ಹಲವು ಹಿರಿಯ ನಟರು ಚಿತ್ರದ ತಾರಾಬಳಗದಲ್ಲಿದ್ದಾರೆ. ಮನರಂಜನೆಯ ಜತೆಗೆ ಸರ್ಕಾರಿ ಶಾಲೆ ಉಳಿಸಬೇಕು ಎನ್ನುವ ಒಂದೊಳ್ಳೆಯ ಸಂದೇಶವೂ ಈ ಚಿತ್ರದಲ್ಲಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಮಾರ್ಚ್​ನಲ್ಲಿ ಸಿನಿಮಾ ತೆರೆಗೆ ತರುವ ತಯಾರಿ ಮಾಡಿಕೊಂಡಿದ್ದೇವೆ’ ಎಂದು ಹೇಳಿದರು.

    ಇದು ನನ್ನ ಸಿನಿಮಾ ಅಲ್ಲ, ಈ ಚಿತ್ರದಲ್ಲಿ ನಾನು ಒಂದು ಪಾತ್ರ ಎನ್ನುವ ರಾಘವೇಂದ್ರ ರಾಜಕುಮಾರ್​, ‘ನಾಲ್ಕು ಜನ ಸ್ನೇಹಿತರ ಕಥೆ ಇದು. ಅವರಿಗೆ ಅವರದ್ದೇ ಆದ ಸಮಸ್ಯೆಗಳು ಇರುತ್ತವೆ. ಅವರಿಗೆ ಸ್ನೇಹಿತನೇ ಸಮಸ್ಯೆ ಆದಾಗ ಹೇಗೆ ಅದನ್ನು ಸರಿಪಡಿಸಿಕೊಳ್ಳುತ್ತಾರೆ ಎನ್ನುವುದು ಚಿತ್ರದ ಕಥೆ. ತುಂಬಾ ಇಷ್ಟವಾದ ಪಾತ್ರ ಮಾಡಿದ್ದೇನೆ. ಅಪ್ಪು ಬಿಟ್ಟು ಹೋದ ಮೇಲೆ ಮಾಡಿದ ಮೊದಲ ಸಿನಿಮಾ ಇದು’ ಎಂದು ಹೇಳಿದರು.

    ಇದನ್ನೂ ಓದಿ: ಮತ್ತೊಮ್ಮೆ ‘ಬೊಂಬಾಟ್​ ಭೋಜನ’ ಬಡಿಸಲು ಬರುತ್ತಿದ್ದಾರೆ ಸಿಹಿಕಹಿ ಚಂದ್ರು

    ದಿ ನಾಗ್ಸ್ ಫಿಲಂಸ್ ಮತ್ತು ಮೀಡಿಯಾ ಬ್ಯಾನರ್​ನಡಿ ಭರತ್​ ಬಾಬು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಬಾಲ ರಾಜ್ವಾಡಿ. ದಿಲೀಪ್ ಪೈ, ಮಿಮಿಕ್ರಿ ದಯಾನಂದ್, ಗೋವಿಂದೇ ಗೌಡ, ಟಿ ಎಸ್. ನಾಗಾಭರಣ, ರಮೇಶ್ ಭಟ್, ಗಿರಿಜಾ ಲೋಕೇಶ್, ಸ್ಪರ್ಶ ರೇಖಾ, ಸುಧಾ ಬೆಳವಾಡಿ, ರಘು ರಮಣಕೊಪ್ಪ ಮುಂತಾದವರು ನಟಿಸಿದ್ದಾರೆ. ಅರುಣ್ ಶ್ರೀನಿವಾಸ್ ಸಂಗೀತ ಈ ಚಿತ್ರಕ್ಕಿದೆ.

    ಕನ್ನಡಕ್ಕೆ ನನ್ನ ಮೊದಲ ಪ್ರಾಶಸ್ತ್ಯ; ಮನದ ಮಾತು ಬಿಚ್ಚಿಟ್ಟ ಸಪ್ತಮಿ ಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts