More

    ಬಾಂಬ್ ಬ್ಲಾಸ್ಟ್ ದುಷ್ಕರ್ಮಿಗಳ ಉದ್ದೇಶ ಏನಾಗಿತ್ತು?; ಮಹತ್ವದ ಸಂಗತಿ ಹೊರಗೆಡಹಿದ ಅಲೋಕ್ ಕುಮಾರ್

    ಬೆಂಗಳೂರು: ಮಂಗಳೂರಿನ ಆಟೋವೊಂದರಲ್ಲಿ ಸಂಭವಿಸಿದ್ದ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಂಗತಿಯೊಂದು ಹೊರಬಿದ್ದಿದೆ. ಎಡಿಜಿಪಿ ಅಲೋಕ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಕರಣದ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿಗೆ ಹೊರಟ ಅವರು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ಮಾಹಿತಿ ಹೊರಗೆಡಹಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಾತ್ರಿ ಅಥವಾ ನಾಳೆವರೆಗೂ ವಿಚಾರಣೆ ಮುಂದುವರಿಯುತ್ತದೆ. ತರಾತುರಿಯಲ್ಲಿ ಈ‌ ಬಗ್ಗೆ ನಾವು ಏನೂ ಹೇಳಲು ಆಗುವುದಿಲ್ಲ. ನಮ್ಮ ಹಿರಿಯರ ತಂಡದೊಂದಿಗೆ ಕೇಂದ್ರ ಅಧಿಕಾರಿಗಳ ಜೊತೆ ಸಂಪರ್ಕವಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

    ಈ ಪ್ರಕರಣದಲ್ಲಿ ಯಾರಿದ್ದಾರೆ ಎನ್ನುವ ಬಗ್ಗೆ ಸಾಕಷ್ಟು ಮಾಹಿತಿ ಸಿಕ್ಕಿದೆ. ದುಷ್ಕರ್ಮಿಯ ಸಂಪರ್ಕ ಇರುವೆಡೆಗೆಲ್ಲ ನಮ್ಮ ತಂಡ ಹೋಗಿದೆ. ಅವನ ಗುರುತು ಸಂಪೂರ್ಣವಾಗಿ ಖಚಿತ ಪಡಿಸಲಿಕ್ಕೆ ಆತನ ಸಂಬಂಧಿಕರನ್ನು ಕರೆಸಿದ್ದೇವೆ. ಅವರು ಬಂದು ಗುರುತಿಸಿದ ನಂತರ ಯಾರು ಅಂತ ನಾವು ಖಚಿತಪಡಿಸುತ್ತೇವೆ. ಆರೋಪಿಯ ಮುಖ ಸುಟ್ಟು ಗಾಯವಾಗಿದೆ, ಆತ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ ಎಂದೂ ಅವರು ತಿಳಿಸಿದ್ದಾರೆ.

    ನಿನ್ನೆ ಸಂಜೆ 4.30ರ ಸುಮಾರಿಗೆ ಆಟೋದಲ್ಲಿ ಬಾಂಬ್ ಬ್ಲಾಸ್ಟ್​ ಆಗಿದೆ. ಅದನ್ನು ಬೇರೆಡೆ ಹೋಗಿ ಬ್ಲಾಸ್ಟ್ ಮಾಡುವ ಉದ್ದೇಶ ಅವರದ್ದಾಗಿತ್ತು. ಆದರೆ ಆಕಸ್ಮಿಕವಾಗಿ ಆಟೋದಲ್ಲೇ ಬಾಂಬ್ ಬ್ಲಾಸ್ಟ್ ಆಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

    ಬ್ರೂಸ್​ ಲೀ ಸತ್ತ 49 ವರ್ಷಗಳ ಬಳಿಕ ಬಯಲಾಯ್ತು ಸಾವಿನ ರಹಸ್ಯ!; ಸಮರಕಲೆ ಪ್ರವೀಣ ಸತ್ತಿದ್ದು ಹೇಗೆ?

    ಸೊಸೆ ಹಿಂಸೆ ಕೊಡುತ್ತಿದ್ದಾಳೆ, ಏನ್ ಮಾಡ್ಬೇಕು ಸಾಹೇಬ್ರೇ?: ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡ ಅತ್ತೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts