More

    ಮಂಗಳೂರಲ್ಲಿ ಕುಕ್ಕರ್ ಬಾಂಬ್ ಸ್ಫೋಟ: ರಾಜ್ಯದ ಜನರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಸಿದ ಅಲೋಕ್​ ಕುಮಾರ್​

    ಬೆಂಗಳೂರು: ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿದೆ. ಶಂಕಿತ ಉಗ್ರ ಶಾರೀಕ್​, ಮೈಸೂರಲ್ಲಿ ಹಿಂದು ಯುವಕನೆಂದು ಹೇಳಿಕೊಂಡು ನಕಲಿ ಆಧಾರ್​ ಇಟ್ಟುಕೊಂಡು ಓಡಾಡುತ್ತಿದ್ದ. ಅಷ್ಟೇ ಅಲ್ಲ, ಟೆಕ್ಕಿಯೊಬ್ಬರ ಹೆಸರಲ್ಲಿ ಸಿಮ್​ ಕೂಡ ಪಡೆದಿದ್ದ. ಫೋನ್​ ತರಬೇತಿಗೂ ನಕಲಿ ದಾಖಲೆ ಕೊಟ್ಟಿದ್ದ… ಇಂತಹ ಆಘಾತಕಾರಿ ಸಂಗತಿಗಳು ಒಂದೊಂದೇ ಬಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಸಾರ್ವಜನಿಕರಿಗೆ ಮಹತ್ವದ ಸಲಹೆ ಕೊಟ್ಟು ಎಚ್ಚರಿಕೆ ವಹಿಸಲು ಸೂಚಿಸಿದ್ದಾರೆ.

    ಟ್ವಿಟ್ ಮೂಲಕ ಸಾರ್ವಜನಿಕರಿಗೆ ಅಲೋಕ್​ ಕುಮಾರ್​ ಅವರು ನೀಡಿರುವ ಸಲಹೆ ಇಲ್ಲಿದೆ…
    – ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಕಳೆದುಕೊಂಡರೆ ಜಾಗರೂಕರಾಗಿರಿ
    – ಯುಐಡಿಎಐ ಸೈಟ್‌ನ ದುರುಪಯೋಗ ತಡೆಯಲು ಲಭ್ಯವಿರುವ ಲಾಕ್ ಮತ್ತು ಅನ್‌ಲಾಕ್ ಸೌಲಭ್ಯವನ್ನು ಬಳಸಿ
    – ಅಪರಿಚಿತರಿಗೆ ಮನೆ ಬಾಡಿಗೆಗೆ ಕೊಡುವ ಮುನ್ನ ಅವರ ಪೂರ್ವಾಪರಗಳನ್ನು ಪರಿಶೀಲಿಸಿ. ಗುರತಿನ ಚೀಟಿಗಳ ಒಂದು ಪ್ರತಿ ಪಡೆದಿಟ್ಟುಕೊಳ್ಳಿ.
    – ನಿಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ನಿಗಾ ಇಡಿ

    ಶಂಕಿತ ಉಗ್ರನ ಟಾರ್ಗೆಟ್​ನಿಂದ ಸಿಎಂ ಜಸ್ಟ್​ ಮಿಸ್​! ಶಾರೀಕ್​ನ ಮೊಬೈಲ್ ಡಿಪಿಯಲ್ಲಿ ಇಶಾ ಫೌಂಡೇಶನ್ ಫೋಟೋ!

    ಸ್ವತಂತ್ರವಾಗಿ JDS ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ, ದಲಿತರು-ಮಹಿಳೆಗೆ ಡಿಸಿಎಂ ಪಟ್ಟ: HDK ಘೋಷಣೆ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಣಬೆ ಪದಾರ್ಥ ತಿಂದು ತಂದೆ-ಮಗ ಸಾವು!? ರಾತ್ರಿಯಿಡೀ ನರಳಾಡಿ ಮನೆಯ ಅಂಗಳದಲ್ಲೇ ದುರಂತ ಅಂತ್ಯ

    ಗೆಳೆಯನನ್ನು ಕೊಂದು ಕಾರಿನಲ್ಲಿ ಮೃತದೇಹದೊಂದಿಗೆ ಪೊಲೀಸ್ ಠಾಣೆಗೇ ಬಂದ ಭೂಪ! ಬೆಂಗಳೂರಲ್ಲಿ ಬೆಚ್ಚಿಬೀಳಿಸೋ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts