More

    ಅಮೃತಕ್ಕೆ ಸಮನಾದ ನೀರಿನ ಸದ್ಬಳಕೆ ಅಗತ್ಯ

    ಸೊರಬ: ಕಲಿಯುಗದಲ್ಲಿ ನೀರು ಅಮೃತಕ್ಕೆ ಸಮನಾಗಿದ್ದು ಅದರ ಸಂರಕ್ಷಣೆ ಮತ್ತು ಸದ್ಬಳಕೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
    ಶುಕ್ರವಾರ ತಾಲೂಕಿನ ತವನಂದಿ ಗ್ರಾಪಂ ವ್ಯಾಪ್ತಿಯ ಕುದುರೆಗಣಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ೫೧೩ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಹೂಳೆತ್ತಲಾದ ಕುದುರೆಗಣಿ ಗ್ರಾಮದ ದೊಡ್ಡಕೆರೆಗೆ ಬಾಗಿನ ಅರ್ಪಣೆ ಮತ್ತು ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪುರಾಣಗಳ ಪ್ರಕಾರ ಸಮುದ್ರ ಮಂಥನದಿAದ ಅಮೃತ ದೊರೆಯಿತು. ಆದರೆ ಪ್ರಸ್ತುತ ಸಕಲ ಜೀವಿಗಳಿಗೂ ನೀರು ಜೀವ ಜಲವಾಗಿದ್ದು ಅಮೃತಕ್ಕಿಂತ ಹೆಚ್ಚು ಎಂಬುದನ್ನು ಪ್ರಕೃತಿ ತೋರಿಸಿಕೊಟ್ಟಿದೆ. ಮುಂದಿನ ದಿನದಲ್ಲಿ ಭೂಮಿ, ರಾಜ್ಯಕ್ಕಾಗಿ ಯುದ್ಧ ನಡೆಯದೆ ನೀರಿಗಾಗಿ ಯುದ್ಧ ನಡೆಯುತ್ತದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಅದರಿಂದ ಸಕಲ ಜೀವಿಗಳು ಚೆನ್ನಾಗಿರಲಿ ಎಂದು ಹೆಗಡೆ ದಂಪತಿಗಳು ಹೂಳು ತುಂಬಿದ ಕೆರೆಗಳಿಗೆ ಜೀವಕಳೆ ನೀಡುವ ಕಲ್ಪನೆಯನ್ನು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯಿಂದ ಕಾರ್ಯಗತ ಮಾಡಿರುವುದು ಶ್ಲಾಘನೀಯ ಎಂದರು.
    ತಾಪಂ ಕಾರ್ಯನಿರ್ವಹಣಾಽಕಾರಿ ಡಾ.ಎನ್.ಆರ್.ಪ್ರದೀಪ್ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, ಶಿಸ್ತುಬದ್ಧ ಜೀವನದ ಜತೆಗೆ ಆರ್ಥಿಕ ಅಭಿವೃದ್ಧಿಯತ್ತ ಜನರನ್ನು ಕೊಂಡೊಯ್ಯುವುದು ಗ್ರಾಮೀಣಾಭಿವೃದ್ಧೊ ಯೋಜನೆ ನಡೆಸುತ್ತಿದೆ. ಶಿಕ್ಷಣ ಜತೆ ಕಾಯಕ ನಿಷ್ಠೆಯನ್ನು ಹೊಂದಿ ಯೋಜನೆಯ ಜತೆ ಜನರ ಸಹಕಾರ ಸದಾ ಇರಬೇಕು ಎಂದರು.
    ಕೆರೆ ಹಸ್ತಾಂತರ ಮಾಡಿದ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಮಾತನಾಡಿದರು. ಕೆರೆ ಸಮಿತಿ ಅಧ್ಯಕ್ಷ ಎ.ಎಚ್.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಗೌರಿ ಮಠದ ಶ್ರೀ ಸದಾಶಿವಯ್ಯ ಸ್ವಾಮೀಜಿ, ಗ್ರಾಮ ಸಮಿತಿ ಅಧ್ಯಕ್ಷ ಆರ್.ಡಿ.ಅಣ್ಣಪ್ಪ, ತವನಂದಿ ಗ್ರಾಮಾಭಿವೃದ್ಧಿ ಅಽಕಾರಿ ಜಿ.ರೇಣುಕಾ, ತಾಲೂಕು ಧರ್ಮಸ್ಥಳ ಯೋಜನೆ ಅಽಕಾರಿ ಸುಬ್ರಾಯ ನಾಯ್ಕ, ಕೃಷಿ ಅಽಕಾರಿ ಲೋಕೇಶ್, ಮೇಲ್ವಿಚಾರಕ ಉಮೇಶ್, ಪ್ರವೀಣ್, ಸೇವಾ ಪ್ರತಿನಿಽಗಳಾದ ಜಯಲಕ್ಷಿ÷್ಮÃ ಉಷಾ, ಸುಷ್ಮಾ, ಜಷಿಂತ್, ಸಂಧ್ಯಾ ನಾಗರಾಜ ದೀಪಕ್ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts