More

    ನಟಿ ಸಂಜನಾ ಈಗ ಹಿಂದುವಲ್ಲ ಮುಸ್ಲಿಂ!? ಹೊಸ ಹೆಸರು ಬಹಿರಂಗಪಡಿಸಿದ ಪ್ರಶಾಂತ್​ ಸಂಬರಗಿ

    ಬೆಂಗಳೂರು: ಡ್ರಗ್ಸ್​ ಮಾಫಿಯಾ ಪ್ರಕರಣದ ಆರೋಪಿ ಆಗಿರುವ ನಟಿ ಸಂಜನಾ ಗಲ್ರಾಣಿ ಅವಿವಾಹಿತೆಯಾ-ವಿವಾಹಿತೆಯಾ ಎಂಬ ಬಗ್ಗೆ ಕೆಲವು ದಿನಗಳ ಹಿಂದೆ ಚರ್ಚೆ ಆಗಿತ್ತು. ಇದೀಗ ಅವರು ಹಿಂದುನಾ ಅಥವಾ ಮುಸ್ಲಿಮಾ ಎಂಬುದು ಕೂಡ ಚರ್ಚಾಸ್ಪದವಾಗಿದೆ.

    ಇಂಥದ್ದೊಂದು ಚರ್ಚೆ ಉಂಟಾಗಲು ಕಾರಣವಾಗಿರುವುದು ಒನ್ಸ್​ ಅಗೇನ್​ ಪ್ರಶಾಂತ್​ ಸಂಬರಗಿ. ಡ್ರಗ್ಸ್​ ಮಾಫಿಯಾ ಪ್ರಕರಣ ಸಂಬಂಧ ಸಂಜನಾ ಕುರಿತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಈಗಾಗಲೇ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅವರು ಸಂಜನಾ ಧರ್ಮದ ಬಗ್ಗೆಯೇ ತಕರಾರು ಎತ್ತಿದ್ದಾರೆ.

    ಸಂಜನಾ ಗಲ್ರಾನೀ ಮುಸ್ಲಿಂ ಧರ್ಮಕ್ಕೆ 2018ರಲ್ಲಿ ಮತಾಂತರ ಗೊಂಡಿದ್ದಾರೆ. ಈಗ ಅವರ ಹೊಸ ಹೆಸರು ಮಾಹಿರಾ.ನಮ್ಮ ಕರ್ನಾಟಕದಲ್ಲಿ ಲವ್ ಜಿಹಾದ್ ತಾಂಡವವಾಡುತ್ತಿವೆ.

    Posted by Prashanth Sambargi on Friday, September 18, 2020

    ಸಂಜನಾ ಲವ್ ಜಿಹಾದ್​ಗೆ ಒಳಗಾಗಿದ್ದು, 2018ರಲ್ಲೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಮಾತ್ರವಲ್ಲ, ಮಾಹಿರಾ ಎಂದು ಹೆಸರನ್ನೂ ಬದಲಾಯಿಸಿಕೊಂಡಿದ್ದಾರೆ ಎಂಬುದಾಗಿ ಪ್ರಶಾಂತ್ ಸಂಬರಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ದಾಖಲೆ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಅದರ ಪ್ರತಿಯೂ ಇಲ್ಲಿದೆ.

    ನಟಿ ಸಂಜನಾ ಈಗ ಹಿಂದುವಲ್ಲ ಮುಸ್ಲಿಂ!? ಹೊಸ ಹೆಸರು ಬಹಿರಂಗಪಡಿಸಿದ ಪ್ರಶಾಂತ್​ ಸಂಬರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts