More

    ಬಂಧನದ ಭೀತಿ ಹಿನ್ನೆಲೆ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ರಾಖಿಗೆ ಭಾರೀ ಮುಖಭಂಗ! ಮಾಜಿ ಪತಿ ಆದಿಲ್​ ಖಾನ್​ಗೆ ಗೆಲುವು?

    ಮುಂಬೈ: ಬಾಲಿವುಡ್​ನ ವಿವಾದಾತ್ಮಕ ನಟಿ ಮತ್ತು ಹಿಂದಿ ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಇದೀಗ ಬಂಧನದ ಭೀತಿ ಎದುರಿಸುತ್ತಿದ್ದು, ತನ್ನ ಮಾಜಿ ಪತಿ ಆದಿಲ್ ಖಾನ್​ರ ಖಾಸಗಿ ವಿಡಿಯೋ ಸೋರಿಕೆ ಪ್ರಕರಣದಲ್ಲಿ ಇಂದು ಸುಪ್ರೀಂ ಕೋರ್ಟ್ ಆಕೆ ಸಲ್ಲಿಸಿದ್ದ ನಿರೀಕ್ಷಣಾ ಪರಿಹಾರ ಅರ್ಜಿಯನ್ನು ತಿರಸ್ಕರಿಸಿದೆ. ಈ ಹಿಂದೆ ಮಾಜಿ ಪತಿ ಆದಿಲ್ ಖಾನ್ ದುರಾನಿ ತನ್ನ ಅಶ್ಲೀಲ ವೀಡಿಯೊಗಳನ್ನು ರಾಖಿ ಪ್ರಸಾರ ಮಾಡಿದ್ದರು ಎಂದು ಆರೋಪಿಸಿದ್ದರು.

    ಇದನ್ನೂ ಓದಿ: ವಿದ್ಯಾರ್ಥಿನಿ ನೇಹಾ ಹಿರೇಮಠಗೆ ಶ್ರದ್ಧಾಂಜಲಿ: ರಾಜ್ಯಸರ್ಕಾರದ ವಿರುದ್ಧ ಜೆಡಿಎಸ್-ಬಿಜೆಪಿ ಆಕ್ರೋಶ

    ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯಲು ಮತ್ತು ಸಂಭಾವ್ಯ ಬಂಧನದಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಖಿ ಸಾವಂತ್​, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದೀಗ ಆಕೆ ಹಾಕಿಕೊಂಡಿದ್ದ ಲೆಕ್ಕಾಚಾರಗಳು ತಲೆಕೆಳಗಾಗಿದ್ದು, ಅರ್ಜಿ ತಿರಸ್ಕರಿಸಿದ ಕೋರ್ಟ್​, ನಾಲ್ಕು ವಾರಗಳಲ್ಲಿ ಶರಣಾಗುವಂತೆ ನಟಿಗೆ ತಿಳಿಸಿದೆ. ಬಾಂಬೆ ಹೈಕೋರ್ಟ್ ಈ ಹಿಂದೆ ಆಕೆಯ ಮನವಿಯನ್ನು ವಜಾಗೊಳಿಸಿತ್ತು, ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಖಿಗೆ ಹೇಳಲಾಗಿತ್ತು. ಅದರಂತೆಯೇ ಮಾಡಿದ ಸಾವಂತ್​ಗೆ ಇದೀಗ ಭಾರೀ ಮುಖಭಂಗ ಎದುರಾಗಿದೆ.

    ಮಾಜಿ ಪತಿ ಆದಿಲ್ ರಾಖಿ ವಿರುದ್ಧ ದೂರು ಸಲ್ಲಿಸಿದ ನಂತರ ಈ ಗೊಂದಲ ಸೃಷ್ಟಿಯಾಯಿತು. ತನ್ನ ಖಾಸಗಿ, ಲೈಂಗಿಕ-ಅಶ್ಲೀಲ ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆದಿಲ್ ಆರೋಪಿಸಿದ್ದರು. ರಾಖಿ ಮತ್ತು ಆದಿಲ್ 2022ರಲ್ಲಿ ವಿವಾಹವಾದರು ಎಂದು ಮೂಲಗಳು ತಿಳಿಸಿವೆ. ಆದರೆ, 2023ರ ಜನವರಿಯಲ್ಲಿ ನಟಿ ತಾನು ಮದುವೆಯಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು.

    ಇದನ್ನೂ ಓದಿ: ಹಜ್ ಕೋಟಾವನ್ನು ಹೆಚ್ಚಿಸುವಂತೆ ಸೌದಿ ಅರೇಬಿಯಾದ ಯುವರಾಜನಿಗೆ ಮನವಿ ಮಾಡಿದ್ದೆ: ಪ್ರಧಾನಿ ನರೇಂದ್ರ ಮೋದಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆಲವೇ ತಿಂಗಳುಗಳಲ್ಲಿ ದಂಪತಿಗಳು ವಿಚ್ಛೇದನ ಪಡೆಯುವ ಮೂಲಕ ದೂರವಾದರು. ತದನಂತರ ನ್ಯಾಯಾಲಯದಲ್ಲಿ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವಿವಾದ ಮಾಡಿಕೊಂಡರು. ರಾಖಿ, ಆದಿಲ್ ಮೇಲೆ ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದಿಲ್ ನಿವಾಸದ ಮುಂದೆಯೂ ನಟಿ ಹೈಡ್ರಾಮಾ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹ ವ್ಯಾಪಕವಾಗಿ ಹರಿದಾಡಿತ್ತು,(ಏಜೆನ್ಸೀಸ್).

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts