More

    ಮುಂದಿನ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದ ನಟ ವಿಜಯ್​ಗೆ ಶಾಕ್​ ನೀಡಿದ ಐಟಿ ಅಧಿಕಾರಿಗಳು!

    ಚೆನ್ನೈ: ತಮ್ಮ ಮುಂದಿನ ಚಿತ್ರದ ಶೂಟಿಂಗ್​ನಲ್ಲಿ ಬಿಜಿಯಾಗಿದ್ದ ತಮಿಳು ಸ್ಟಾರ್​ ನಟ ವಿಜಯ್​ಗೆ ಬುಧವಾರ ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್​ ನೀಡಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಬಿಗಿಲ್​ ಚಿತ್ರ ಕುರಿತು ಐಟಿ ಇಲಾಖೆಯ ವಿಚಾರಣೆಯನ್ನು ವಿಜಯ್​ ಎದುರಿಸಬೇಕಾಗಿದೆ.

    ಐಟಿ ಅಧಿಕಾರಿಗಳ ತಂಡವೊಂದು ತಮಿಳುನಾಡಿನ ನೆವೆಲಿಯಲ್ಲಿ ನಡೆಯುತ್ತಿದ್ದ ಲೋಕೇಶ್​ ಕನಗರಾಜ್​ ನಿರ್ದೇಶನದ ಮಾಸ್ಟರ್​ ಚಿತ್ರದ ಶೂಟಿಂಗ್​ ಸ್ಥಳಕ್ಕೆ ವಿಜಯ್​ಗೆ ಸಮನ್ಸ್​ ನೀಡಲು ಆಗಮಿಸಿದ್ದು, ಇಡೀ ಚಿತ್ರತಂಡಕ್ಕೆ ಒಂದು ರೀತಿಯ ಶಾಕ್​ ಆಗಿತ್ತು.

    ಎಜಿಎಸ್​ ಸಿನಿಮಾ ಮತ್ತು ಎಜಿಎಸ್​ ಎಂಟರ್​ಟೈನ್​ಮೆಂಟ್​ ಸೇರಿದಂತೆ ಎಜಿಎಸ್​ ಗ್ರೂಪ್​ಗೆ ಸಂಬಂಧಿಸಿದ ಸುಮಾರು 20 ಕಡೆ ಐಟಿ ದಾಳಿ ನಡೆದ ದಿನವೇ ವಿಜಯ್​ಗೆ ಐಟಿ ಅಧಿಕಾರಿಗಳು ಸಮನ್ಸ್​ ನೀಡಿದ್ದಾರೆ. ಅದಕ್ಕೆ ಕಾರಣ ಬಿಗಿಲ್​ ಚಿತ್ರವನ್ನು ಎಜಿಎಸ್​ ಸಿನಿಮಾ ನಿರ್ಮಾಣ ಮಾಡಿತ್ತು.

    ಫೆ.1ರಿಂದಲೂ ಮಾಸ್ಟರ್​ ಚಿತ್ರದ ಶೂಟಿಂಗ್​ನಲ್ಲಿ ತೊಡಗಿಕೊಂಡಿರುವ ವಿಜಯ್​ಗೆ ಐಟಿ ಅಧಿಕಾರಿಗಳು ಖುದ್ದಾಗಿ ಹೋಗಿ ಸಮನ್ಸ್​ ನೀಡಿದ್ದಾರೆ. ಬಿಡುಗಡೆಗೊಂಡು ಯಶಸ್ವಿಯಾದ ಕ್ರೀಡಾ ಆಧಾರಿತ ಬಿಗಿಲ್​ ಚಿತ್ರದ ಆದಾಯ ಸಂಬಂಧ ವಿಜಯ್​ಗೆ ಸಮನ್ಸ್​ ನೀಡಲಾಗಿದೆ. ಬಿಗಿಲ್​ ಚಿತ್ರಕ್ಕಾಗಿ ವಿಜಯ್​ ಸಂಭಾವನೆ ಹಾಗೂ ಬಿಗಿಲ್​ ಚಿತ್ರದ ಲಾಭದ ಕುರಿತು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದು, ಬುಧವಾರ ಸಂಜೆ ಚೆನ್ನೈನ ವಿಜಯ್​ ನಿವಾಸದಲ್ಲಿ ವಿಚಾರಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts