More

    ನಟ ಪುನೀತ್ ಸಾಮಾಜಿಕ ಕಾರ್ಯ ಮಾದರಿ

    ಸೊರಬ: ಯುವಕರಿಗೆ ಸ್ಫೂರ್ತಿಯಾಗಿದ ಅಪ್ಪು ಉತ್ತಮ ನಟ, ಗಾಯಕ, ನೃತ್ಯ ಕಲಾವಿದರಾಗಿದ್ದರು. ಯುವಕರಿಗೆ ಮಾದರಿಯಾಗುವಂತಹ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ತಮ್ಮ ಜೀವಿತಾವಧಿಯಲ್ಲಿ ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ ಎಂದು ಜೆಸಿಐ ರಾಷ್ಟ್ರೀಯ ಸಂಯೋಜಕ ಪ್ರಶಾಂತ್ ದೊಡ್ಡಮನೆ ಹೇಳಿದರು.

    ತಾಲೂಕಿನ ನಿಸರಾಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್‌ನಿಂದ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಸವಿನೆನಪಿಗೆ ಡಿಆರ್‌ಎಸ್ ಅಪ್ಪು ವನ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.
    ವೃದ್ಧಾಶ್ರಮ, ಬಡ ಮಕ್ಕಳಿಗೆ ವಿದ್ಯಾಭ್ಯಾಸ ಇನ್ನೂ ಅನೇಕ ಸಮಾಜಮುಖಿ ಕೆಲಸಗಳು ಮಾದರಿ. ಹಾಗಾಗಿ ಕೇಕ್ ಬಿಡು ಗಿಡ ನೆಡು ಎನ್ನುವ ಧ್ಯೇಯ ವಾಕ್ಯದೊಂದಿಗೆ ಅಪ್ಪು ಹುಟ್ಟುಹಬ್ಬವನ್ನು ಶಾಲೆಯಲ್ಲಿ ಗಿಡ ನೆಡುವ ಮೂಲಕ ಮಾದರಿ ಕೆಲಸವನ್ನು ಮಾಡುತ್ತಿದ್ದೇವೆ. ಜೆಸಿಐನಿಂದ ಈ ವರ್ಷ 20 ರಾಜ್ಯಗಳಲ್ಲಿ 250ಕ್ಕೂ ಹೆಚ್ಚು ಪಾರ್ಕ್ ನಿರ್ಮಾಣ ಮಾಡಲು ಪಣತೊಟ್ಟಿದ್ದೇವೆ ಎಂದರು.
    ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್ ಮಾತನಾಡಿ, ಪ್ರಶಾಂತ್ ಅವರು ಪ್ರತಿ ವರ್ಷ ಒಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿ ಆ ಶಾಲೆಯಲ್ಲಿ ಗಿಡಗಳನ್ನ ನೆಟ್ಟು ಕೈತೋಟ, ಪಾರ್ಕ್ ನಿರ್ಮಾಣ ಮಾಡಿಕೊಟ್ಟಿದ್ದಾರೆ. ಜಡೆ, ಕರಡಿಗೆರೆ, ಸೊರಬ, ನಡಹಳ್ಳಿ, ಚನ್ನಪುರ, ಅಂಕರವಳ್ಳಿ ಗುಂಜನೂರು ಶಾಲೆಗಳಲ್ಲಿ ಹಸಿರೀಕರಣದ ಕೆಲಸ ಮಾಡಿದ್ದಾರೆ. ಗ್ರಾಮಾಂತರದ ಸರ್ಕಾರಿ ಶಾಲೆಗಳನ್ನ ಗುರುತಿಸಿ ಅಭಿವೃದ್ಧಿಯ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
    ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ್, ಉಪಾಧ್ಯಕ್ಷೆ ನಿಖಿಲಾ, ಸದಸ್ಯರಾದ ಪ್ರಕಾಶ್, ರಜನಿ, ರಾಜು, ಸಂಗೀತ, ಸಣ್ಣಪ್ಪ, ಜ್ಯೋತಿ, ಅಣ್ಣಪ್ಪ, ರಶ್ಮಿ, ಜೆಸಿಐ ಸೊರಬ ಸಿಂಧೂರ ಘಟಕದ ಸ್ಥಾಪಕ ಅಧ್ಯಕ್ಷೆ ಪೂಜಾ ಪ್ರಶಾಂತ್, ಅಧ್ಯಕ್ಷ ಉಮೇಶ್ ನಾಯಕ್, ಉಪಾಧ್ಯಕ್ಷ ಮಹೇಶ್ ಖಾರ್ವಿ, ಎಂ.ಆರ್.ಪಾಟೀಲ್, ಮುಖ್ಯ ಶಿಕ್ಷಕ ದೀಪಕ್, ಶಿಕ್ಷಕರಾದ ಜೋಶಿ, ಶಾರದಮ್ಮ, ಅನಿತಾ, ಸುಮಂಗಳಾ, ಅಕ್ಷತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts