More

    ಆಚೆಗೆ ಬರೋಕಾಗಲ್ಲ ಅಂದ್ಕೋಬೇಡಿ, ಬಂದೇ ಬರ್ತೀವಿ.. ಮನಸಿದ್ದರೆ ಮಾರ್ಗ: ನೀನಾಸಂ ಸತೀಶ್

    ಬೆಂಗಳೂರು: ಕರೊನಾ ಹಾವಳಿ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕಾಗಿ ಹೇರಲಾಗಿರುವ ಲಾಕ್​ಡೌನ್​ನಿಂದಾಗಿ ಮನೆಯೊಳಗೇ ಇದ್ದು ಬೇಸರದಲ್ಲಿ ಇರುವವರಿಗೆ ನಟ ನೀನಾಸಂ ಸತೀಶ್ ತಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬಗ್ಗೆಯೇ ಹೇಳಿಕೊಳ್ಳುತ್ತ, ಮನಸಿದ್ದರೆ ಮಾರ್ಗ ಎನ್ನುತ್ತ, ಮನಸಿದ್ದರೆ ಎಲ್ಲವೂ ಸಾಧ್ಯ ಎಂಬ ಮನಸಿಗೆ ಧೈರ್ಯ ಕೊಡುವ ಮಾತುಗಳನ್ನು ಅವರು ಹೇಳಿದ್ದಾರೆ.

    ನಾಟಕದಿಂದ ಹೇಗೆ ‘ಪರಮಪದ’ ಎಂಬ ಧಾರಾವಾಹಿಗೆ, ‘ಪರಮಪದ’ದಿಂದ ಹೇಗೆ ‘ಮನಸಾರೆ’ ಸಿನಿಮಾಗೆ, ಧಾರಾವಾಹಿಯಿಂದ ಹೇಗೆ ಸಿನಿಮಾಗಳ ಸಣ್ಣಸಣ್ಣ ಪಾತ್ರಗಳಿಗೆ, ಸಿನಿಮಾಗಳ ಸಣ್ಣ ಪಾತ್ರಗಳಿಂದ ಹೇಗೆ ಹೀರೋ ಪಾತ್ರಗಳಿಗೆ ಬಂದೆ, ಕನ್ನಡ ಚಿತ್ರರಂಗದಿಂದ ಹೇಗೆ ತಮಿಳು ಚಿತ್ರರಂಗಕ್ಕೆ ಹೋದೆ ಎಂಬುದೆಲ್ಲವನ್ನೂ ಹೇಳಿಕೊಂಡ ಅವರು ಅವೆಲ್ಲದಕ್ಕೂ ‘ಮನಸ್ಸಿದ್ದರೆ ಮಾರ್ಗ’ ಅಂತ ಅಂದುಕೊಂಡಿದ್ದೇ ಕಾರಣ ಎಂದು ತಮ್ಮ ಯಶಸ್ಸಿನ ರಹಸ್ಯ ತಿಳಿಸಿದ್ದಾರೆ.

    ಅದೇ ರೀತಿ ಈಗ ನಮ್ಮೆಲ್ಲರನ್ನೂ ಒಳಗೇ ಕೂಡಿಹಾಕಿದಂತಿರು ಕರೊನಾ ಪರಿಸ್ಥಿತಿಯಿಂದಲೂ ಹೊರಗೆ ಬರಲು ಸಾಧ್ಯ. ಮನಸ್ಸಿದ್ದರೆ ಮಾರ್ಗ ಅಂದುಕೊಂಡರೆ ಅದೇನೂ ಕಷ್ಟವಲ್ಲ. ಕರೊನಾ ಎಂಬ ಕಷ್ಟದಿಂದ ಆಚೆಗೆ ಬರೋಕಾಗಲ್ಲ ಅಂದ್ಕೊಬೇಡಿ, ಆಚೆಗೆ ಬಂದೇ ಬರ್ತೀವಿ, ಮನಸ್ಸಿದ್ದರೆ ಮಾರ್ಗ ಎಂದಿರುವ ಅವರು ಅದಕ್ಕೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು ಎಂದು ಕಿವಿಮಾತನ್ನೂ ಹೇಳಿದ್ದಾರೆ.

    ನಾವೆಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸೋಣ, ಯಾರೂ ಇನ್ನೊಬ್ಬರ ಜೀವ-ಜೀವನದ ಜತೆ ಆಟ ಆಡುವುದು ಬೇಡ. ಕೆಲವರು ತಾವು ಸತ್ತರೂ ಪರವಾಗಿಲ್ಲ ಎಂದುಕೊಂಡು ನಿಯಮ ಉಲ್ಲಂಘಿಸುತ್ತಾರೆ. ಅಂಥವರು ಸತ್ತರೂ ಪರವಾಗಿಲ್ಲ, ಆದರೆ ಬದುಕಬೇಕು ಎಂದುಕೊಂಡಿರುವ ನಮಗೆ, ನಮ್ಮಂಥ ಕೋಟ್ಯಂತರ ಮಂದಿಗೋಸ್ಕರವಾದರೂ ನಾವು ಕರೊನಾ ನಿಯಂತ್ರಣ ನಿಯಮಗಳನ್ನು ಪಾಲಿಸೋಣ ಎಂದು ಅವರು ವಿಡಿಯೋ ತುಣುಕೊಂದರ ಮೂಲಕ ತಮ್ಮ ಮನಸ್ಸಿನ ಮಾತುಗಳನ್ನು ಹೇಳಿದ್ದಾರೆ.

    ಊರು ತುಂಬ ಇದರದ್ದೇ ಸುದ್ದಿ, ಅಲ್ಲಲ್ಲಿ ಸಗಣಿ ಇಟ್ಟು ಕರೊನಾ ಕಟ್ಟಿಹಾಕಲು ​ಪ್ಲಾನ್​

    ಹಾವು ಹಿಡಿದು ಎಲ್ಲಿ ಹಾಕಿಕೊಳ್ತಾನೆ ನೋಡಿ.. ಮೈ ಝುಂ ಎನ್ನಿಸುವ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts