More

  ಗೋಲ್ಡ್​ ಎಂಬ ಮಾರಿ! ರಾ, ರಗಡ್​ ಪಾತ್ರದಲ್ಲಿ ದೂದ್​ಪೇಡಾ ದಿಗಂತ್​

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ನಟ ದಿಗಂತ್​ ಹೆಚ್ಚಾಗಿ ರೊಮ್ಯಾಂಟಿಕ್​ ಕಾಮಿಡಿ ಚಿತ್ರಗಳಲ್ಲಿ, ಚಾಕ್​ಲೇಟ್​ ಬಾಯ್​ ಪಾತ್ರಗಳಲ್ಲಿ ಮಿಂಚಿದ್ದಾರೆ. ಹೀಗಾಗಿಯೇ ಅವರನ್ನು ಸ್ಯಾಂಡಲ್​ವುಡ್​ನಲ್ಲಿ “ದೂದ್​ಪೇಡಾ’ ಎನ್ನುತ್ತಾರೆ. ಇಂತಹ ದಿಗಂತ್​ ಇದೇ ಮೊದಲ ಬಾರಿಗೆ ರಾವೇಂದ್ರ ನಾಯಕ್​ ನಿರ್ದೇಶನದ “ಮಾರಿಗೋಲ್ಡ್​’ ಸಿನಿಮಾದಲ್ಲಿ ರಾ, ರಗಡ್​ ಪಾತ್ರದಲ್ಲಿ ನಟಿಸಿದ್ದಾರೆ. ಶುಕ್ರವಾರ (ಏ. 5) ಸಿನಿಮಾ ರಾಜ್ಯಾದ್ಯಂತ ರಿಲೀಸ್​ ಆಗಲಿದ್ದು, ಅದೇ ಖುಷಿಯಲ್ಲಿ ದಿಗಂತ್​ ವಿಜಯವಾಣಿ ಜತೆ ಮಾತಿಗೆ ಸಿಕ್ಕಿದ್ದರು.

  ಗೋಲ್ಡ್​ ಎಂಬ ಮಾರಿ! ರಾ, ರಗಡ್​ ಪಾತ್ರದಲ್ಲಿ ದೂದ್​ಪೇಡಾ ದಿಗಂತ್​

  ಮೊದಲ ಬಾರಿಗೆ ವಿಭಿನ್ನ ಪ್ರಯತ್ನ
  “ಮಾರಿಗೋಲ್ಡ್​’ ಕೆಮ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು, ನಾಲ್ವರು ಗೆಳೆಯರು ಚಿನ್ನದ ಬಿಸ್ಕೆಟ್​ ಮಾರಲು ಹೋಗಿ ಏನೆಲ್ಲಾ ಸಮಸ್ಯೆಗೆ ಸಿಲುಕುತ್ತಾರೆ ಎಂಬುದರ ಸುತ್ತ ಕಥೆ ಸಾಗುತ್ತದೆ. ದಿಗಂತ್​ ಜತೆ ಸಂಗೀತಾ ಶೃಂಗೇರಿ, ಯಶ್​ ಶೆಟ್ಟಿ ಮತ್ತು ಕಾಕ್ರೋಚ್​ ಸುಧಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದ ಬಗ್ಗೆ ದಿಗಂತ್​, “ಈ ಸಿನಿಮಾದಲ್ಲಿ ರಾ, ರಗಡ್​ ಪಾತ್ರ ಮಾಡಿದ್ದೇನೆ. ಈ ಹಿಂದೆ ಈ ರೀತಿ ಪಾತ್ರ ಮಾಡಿರಲಿಲ್ಲ. ರೊಮ್ಯಾಂಟಿಕ್​ ಕಾಮಿಡಿ, ಕಾಮಿಡಿ ಸಿನಿಮಾಗಳನ್ನು ಹೆಚ್ಚು ಮಾಡಿರುವ ಕಾರಣ, ನನ್ನ ಕರಿಯರ್​ನಲ್ಲಿ ಡಿರೆಂಟ್​ ಸಿನಿಮಾ. ಬಾಡಿ ಲಾಂಗ್ವೇಜ್​, ಡೈಲಾಗ್ಸ್​ ಮತ್ತು ಡೈಲಾಗ್​ ಡೆಲಿವರಿ ಎಲ್ಲವೂ ವಿಭಿನ್ನವಾಗಿತ್ತು’ ಎಂದು ಹೇಳಿಕೊಳ್ಳುತ್ತಾರೆ. ಹಾಗೇ ಸಿನಿಮಾ ಪ್ರಾರಂಭವಾದ ಬಗ್ಗೆ ದಿಗಂತ್​, “ನಾನು ರಾು ಹಳೆಯ ಪರಿಚಯ. ಒಂದು ದೊಡ್ಡ ಬ್ಯಾನರ್​ನಲ್ಲಿ 2013, 14ರಲ್ಲಿ ಸಿನಿಮಾ ಮಾಡಬೇಕಿತ್ತು. ಆ ಸಿನಿಮಾ ಆಗಲಿಲ್ಲ. ಆದರೆ, ಕಥೆ ಪ್ರೊಡಕ್ಷನ್​ ಹೌಸ್​ ಜತೆ ಉಳಿಯಿತು. ಆಗ ತುಂಬ ಬೇಜಾರಾಗಿತ್ತು. ಏನ್​ ಮಾಡೋದು ಅಂತ ಯೋಚಿಸುತ್ತಿದ್ದೆವು. ಕೆಲ ವರ್ಷಗಳ ಬಳಿಕ ರಾು ಬಂದು ಈ ಕಥೆ ಹೇಳಿದರು. ಇಷ್ಟವಾಯಿತು. ರಾು ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಈ ಸಿನಿಮಾ ಚೆನ್ನಾಗಿ ಮಾಡುತ್ತಾರೆ ಅಂತ ಗೊತ್ತಿತ್ತು’ ಎನ್ನುತ್ತಾರೆ.

  ಗೋಲ್ಡ್​ ಎಂಬ ಮಾರಿ! ರಾ, ರಗಡ್​ ಪಾತ್ರದಲ್ಲಿ ದೂದ್​ಪೇಡಾ ದಿಗಂತ್​


  ಆ ಟಾರ್ಚರ್​ ಯಾರಿಗೂ ಬೇಡ!
  ಬೇಸಗೆಯ ಉರಿಬಿಸಲು, ಕಸ ತುಂಬಿದ, ದುರ್ನಾತ ಬೀರುವ ಜಾಗಗಳಲ್ಲಿ ಚಿತ್ರೀಕರಣ ನಡೆಸಿದ ಅನುಭವ ಹಂಚಿಕೊಳ್ಳುವ ದಿಗಂತ್​, “ಚಿತ್ರದುರ್ಗದ ವಿಂಡ್​ ಮಿಲ್​ ಬಳಿ ಬೇಸಗೆಯ ಉರಿಬಿಸಿಲು, ಧೂಳಿನ ನಡುವೆ ಶೂಟ್​ ಮಾಡಿದ್ದೇವೆ. ಅದಕ್ಕಿಂತ ಹೆಚ್ಚಾಗಿ ಟಾರ್ಚರ್​ ಸೀನ್​ ಒಂದನ್ನು ಎಚ್​ಎಂಟಿ ್ಯಾಕ್ಟರಿಯಲ್ಲಿ ಚಿತ್ರೀಕರಣ ಮಾಡಿದೆವು. ನೆಲದ ಮೇಲೆ ಊಟ ಹಾಕುತ್ತಾರೆ, ಅದನ್ನು ತಿನ್ನಬೇಕು. ಎಷ್ಟೋ ವರ್ಷಗಳ ಕಸ, ಧೂಳು, ವಾಸನೆಯ ನಡುವೆ ಚಿತ್ರತಂಡವರೆಲ್ಲರೂ ಎಲ್ಲರೂ ಮಾಸ್ಕ್​ ಹಾಕಿಕೊಂಡು ಶೂಟ್​ ಮಾಡುತ್ತಿದ್ದರೆ, ನಾನು ಮೂರ್ನಾಲ್ಕು ದಿನ ಪ್ರತಿ ಶಾಟ್​ಗೆ ಮಾಸ್ಕ್​ ತೆಗೆದು ಕ್ಯಾಮರಾ ಮುಂದೆ ಬರಬೇಕಿತ್ತು. ಆ ಟಾರ್ಚರ್​ ಸೀನ್​ ಶೂಟಿಂಗ್​ ಮುಗಿಯುವಷ್ಟರಲ್ಲಿ ನಿಜವಾದ ಟಾರ್ಚರ್​ ಆಗಿತ್ತು’ ಎಂದು ನಗುತ್ತಾರೆ ದಿಗಂತ್​.

  ಗೋಲ್ಡ್​ ಎಂಬ ಮಾರಿ! ರಾ, ರಗಡ್​ ಪಾತ್ರದಲ್ಲಿ ದೂದ್​ಪೇಡಾ ದಿಗಂತ್​

  ಫೋರ್​ ಬಾರಿಸಲು ರೆಡಿ
  ಐಪಿಎಲ್​ ಹಂಗಾಮಾ ನಡುವೆಯೇ ನಟ ದಿಗಂತ್​ ಕೂಡ ಈ ವರ್ಷ ಫೋರ್​ ಬಾರಿಸಲು ರೆಡಿಯಾಗಿದ್ದಾರೆ. ಈ ವಾರ “ಮಾರಿಗೋಲ್ಡ್​’ ತೆರೆಗೆ ಬರಲಿದ್ದು, “ಐಪಿಎಲ್​ ನಡೆಯುತ್ತಿದೆ. ಚುನಾವಣೆ ಬೇರೆ ಇದೆ. ಮೂರ್ನಾಲ್ಕು ಚಿತ್ರಗಳು ತೆರೆಗೆ ಬರುತ್ತಿವೆ. ಎಲ್ಲ ಸಿನಿಮಾಗಳನ್ನೂ ಬೆಂಬಲಿಸಿ’ ಎನ್ನುತ್ತಾರೆ. ಅದರ ಜತೆಗೆ ದಿಗಂತ್​ “ಪೌಡರ್​’, “ಎಡಗೈಯೇ ಅಪಘಾತಕ್ಕೆ ಕಾರಣ’ ಮತ್ತು “ದ ಜಡ್ಜ್​ಮೆಂಟ್​’ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಸಿನಿಮಾಗಳು ಸದ್ಯ ವಿವಿಧ ಹಂತದಲ್ಲಿವೆ.

  ಗೋಲ್ಡ್​ ಎಂಬ ಮಾರಿ! ರಾ, ರಗಡ್​ ಪಾತ್ರದಲ್ಲಿ ದೂದ್​ಪೇಡಾ ದಿಗಂತ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts