More

    ಶೋಷಿತರಿಗೆ ಪ್ರಾತಿನಿಧ್ಯ ದೊರಕಿಸಲು ಕ್ರಮ

    ಚಿಕ್ಕಮಗಳೂರು: ಸಮಾಜದ ತಳ ಸಮುದಾಯಗಳಿಗೂ ಪ್ರಾತಿನಿಧ್ಯ ದೊರಕಿಸುವ ಉದ್ದೇಶದಿಂದ ಕಾಂಗ್ರೆಸ್ ಸಾಮಾಜಿಕ ನ್ಯಾಯ ಘಟಕದ ರಚನೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸಾಮಾಜಿಕ ನ್ಯಾಯ ಘಟಕದ ರಾಜ್ಯಾಧ್ಯಕ್ಷ ಸಿ.ಎಸ್.ದ್ವಾರಕನಾಥ್ ಹೇಳಿದರು.

    ಇಷ್ಟು ದಿನ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರುವ ಸರ್ಕಾರ ಅಧಿಕಾರದಲ್ಲಿತ್ತು. ಜನತೆ ಈಗ ಬದಲಾವಣೆ ಬಯಸಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ಬಂದಿದೆ. ಅಲೆಮಾರಿ, ಬುಡಕಟ್ಟು, ಹಕ್ಕಿಪಿಕ್ಕಿ ಜನಾಂಗಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕಾಳಜಿ ತೋರಲಿಲ್ಲ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಜನರನ್ನು ಸಂಕಷ್ಟಕ್ಕೆ ಸಿಲುಕ್ಕಿಸಿದರು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಆದಿವಾಸಿಗಳು, ದಲಿತರು, ಮಹಿಳೆಯರ ಮೇಲೆ ನಡೆಯುತ್ತಿರುವ ಅನ್ಯಾಯ ದಬ್ಬಾಳಿಕೆ ನೋಡಿದಾಗ ಸಾಮಾಜಿಕ ನ್ಯಾಯ ಘಟಕದ ರಚನೆಯ ಅಗತ್ಯವಿದೆ ಎಂದೆನಿಸಿತು ಎಂದರು.
    ಸಂವಿಧಾನದ ಮೂಲಕ ಆಶಯಗಳನ್ನು ಈಡೇರಿಸುವಲ್ಲಿ ಹಿಂದಿನ ಸರ್ಕಾರ ವಿಫಲವಾಗಿದೆ. ಈವರೆಗೆ ಸಂವಿಧಾನದ ಮೂಲ ಆಶಯಗಳನ್ನು ಗಾಳಿಗೆ ತೂರು ಮತಾಂದ ಸರ್ಕಾರಗಳು ಅಧಿಕಾರದಲ್ಲಿ ಇದ್ದವು. ಇದರ ವಿರುದ್ಧ ಚಳವಳಿಗಳು ನಡೆಯಿತು. ಇದರಿಂದ ದಲಿತರು, ಹಿಂದುಳಿದ ವರ್ಗಗಳ ಮೇಲೆ ದೌರ್ಜನಗಳು ನಡೆಯಿತು ಎಂದು ತಿಳಿಸಿದರು.
    ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ದೊರಕಿಸಲು ಘಟಕ ಸ್ಥಾಪನೆ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 45 ದಿನಗಳೊಳಗೆ ಸಾಮಾಜಿಕ ನ್ಯಾಯ ಘಟಕ ಆರಂಭಿಸಬೇಕೆಂಬ ಆದೇಶ ನೀಡಿರುವುದರಿಂದ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ. ಯಾವುದೇ ಜಾತಿ, ಭೇದವಿಲ್ಲದೆ ಎಲ್ಲರೂ ಈ ಘಟಕಕ್ಕೆ ಬರಬಹುದು. ಪಕ್ಷದಿಂದ ಹೊರಗಿರುವವರನ್ನು ಘಟಕಕ್ಕೆ ಸೇರಿಸಿಕೊಂಡು ಜವಾಬ್ದಾರಿ ನೀಡಲಾಗುವುದು ಎಂದರು.
    ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಮನ್ ಫರ್ಜಾನ, ಉಪಾಧ್ಯಕ್ಷೆ ಪದ್ಮಾ, ಪುಟ್ಟೇಗೌಡ, ನಗರಸಭೆ ಸದಸ್ಯ ಲಕ್ಷ್ಮಣ್, ಮುಖಂಡ ಈರಣ್ಣ, ವಕ್ತಾರ ರೂಬಿನ್ ಮೋಸನ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts