ಚಿರತೆ ಸೆರೆ ಹಿಡಿಯಲು ಸೂಕ್ತ ಕ್ರಮ : ಸ್ಥಳ ಪರಿಶೀಲಿಸಿ ಶಾಸಕ ಉಮಾನಾಥ ಕೋಟ್ಯಾನ್ ಭರವಸೆ

chirathe
Published on

ಮೂಲ್ಕಿ: ಚಿರತೆ ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಜನತೆ ಜಾಗ್ರತೆ ವಹಿಸುವುದರೊಂದಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಕೆಲವು ದಿನಗಳ ಹಿಂದೆ ಮೂಲ್ಕಿ ಪರಿಸರದ ಅಕ್ಕಸಾಲಿಗರ ಕೇರಿ ಬಳಿ ಚಿರತೆಗಳು ಕಂಡುಬಂದಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನೀಲ್ ಆಳ್ವ, ಸದಸ್ಯರಾದ ಸುಭಾಷ್ ಶೆಟ್ಟಿ, ಹರ್ಷರಾಜ ಶೆಟ್ಟಿ, ದಯಾವತಿ ಅಂಚನ್, ಶೈಲೇಶ್ ಕುಮಾರ್, ಮುಖ್ಯಾಧಿಕಾರಿ ಮಧುಕರ್ ಹಾಗೂ ರಂಗನಾಥ ಶೆಟ್ಟಿ, ಪುರುಷೋತ್ತಮ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಅಕ್ಕಸಾಲಿಗರ ಕೇರಿ ಬಳಿ ನಾಲ್ಕು ಚಿರತೆ ಮರಿಗಳು ಪತ್ತೆಯಾಗಿದ್ದು ಎರಡು ಬೋನು ಇರಿಸಲಾಗಿದ್ದರೂ ಚಿರತೆಗಳು ಇನ್ನೂ ಸೆರೆಯಾಗಿಲ್ಲ. ಈ ನಡುವೆ ಭಾನುವಾರ ರಾತ್ರಿ ಮೂರು ಕಡೆ ಬೈಕ್ ಸವಾರರಿಗೆ ಚಿರತೆ ಕಾಣಸಿಕ್ಕಿದೆ. ಅಕ್ಕಸಾಲಿಗರ ಕೇರಿ, ವೆಂಕಟರಮಣ ದೇವಸ್ಥಾನ ರಸ್ತೆ ಹಾಗೂ ಒಡೆಯರಬೆಟ್ಟು ಘಜನಿ ಚರ್ಚ್ ಬಳಿ ಚಿರತೆ ಹಾದು ಹೋಗುವ ಸಂದರ್ಭ ಬೈಕ್ ಸವಾರರಿಗೆ ಕಾಣ ಸಿಕ್ಕಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net