More

    ಕಾಯ್ದೆ ಅರಿತು ಕರ್ತವ್ಯ ಪಾಲಿಸಿ

    ಕುಂದಾಪುರ: ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿಲ್ಲ. ವ್ಯವಸ್ಥೆಯೊಳಗಿರುವ ಭ್ರಷ್ಟಾಚಾರ ಹೊರ ಬಂದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

    ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ ಮತ್ತು ಪಂಚಾಯತ್‌ರಾಜ್ ಒಕ್ಕೂಟ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಸಭಾಭವನದಲ್ಲಿ, ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಪ್ರಕಟಿಸಿರುವ ಪಂಚಾಯತ್‌ರಾಜ್ ತಜ್ಞ ಎಸ್.ಜನಾರ್ದನ ಮರವಂತೆ ಸಂಕಲ್ಪಿಸಿರುವ ಜನಾಧಿಕಾರ ಗ್ರಾಪಂ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಪಂಚಾಯಿತಿ ಪ್ರತಿನಿಧಿಗಳು ಕಾಯ್ದೆ ತಿಳಿದುಕೊಂಡು ತಮ್ಮ ಹಕ್ಕು, ಕರ್ತವ್ಯಗಳನ್ನು ಪಾಲಿಸಬೇಕು. ಆ ಹಿನ್ನೆಲೆಯಲ್ಲಿ ಜನಾಧಿಕಾರ ಕೃತಿ ಮಾರ್ಗದರ್ಶಿಯಾಗಬಲ್ಲದು ಎಂಂದರು.

    ಪುಸ್ತಕ ಬಿಡುಗಡೆ ಮಾಡಿದ 3ನೇ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷ ಎ.ಜಿ. ಕೊಡ್ಗಿ, ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆ ಅತೀ ಅಗತ್ಯ. ಗ್ರಾಪಂಗಳಿಗೆ ಹೆಚ್ಚಿನ ಅಧಿಕಾರ, ಅನುದಾನ ಸಿಗುವಂತಾಗಬೇಕು ಎಂದರು.

    ಹಿರಿಯ ವಕೀಲ ಟಿ.ಬಿ.ಶೆಟ್ಟಿ ಕೃತಿ ಪರಿಚಯಿಸಿದರು. ಪ್ರಕಾಶಕ ಸುಬ್ರಹ್ಮಣ್ಯ ಪಡುಕೋಣೆ ಸ್ವಾಗತಿಸಿ, ಜನಾಧಿಕಾರ ಕೃತಿಯ ಲೇಖಕ ಎಸ್.ಜನಾರ್ದನ ಮರವಂತೆ ಪ್ರಸ್ತಾವಿಸಿದರು. ಕೇದಾರ ಮರವಂತೆ ನಾಡಗೀತೆ ಹಾಡಿದರು. ಶಿಕ್ಷಕ ಉದಯ ಗಾಂವಕರ ಕಾರ್ಯಕ್ರಮ ನಿರ್ವಹಿಸಿ, ಹಕ್ಕೊತ್ತಾಯ ಆಂದೋಲನದ ಕೃಪಾ ಎಂ.ಎಂ. ವಂದಿಸಿದರು. ಮುಖಪುಟ ವಿನ್ಯಾಸಕ ಶಿಕ್ಷಕ ಉದಯ ಗಾಂವಕರ, ರೇಖಾಚಿತ್ರ ರಚಿಸಿದ ಕೃಪಾ ಎಂಎಂ, ಪುಟ ವಿನ್ಯಾಸಕರಾದ ಪ್ರವೀಣ್ ಕುಮಾರ್ ಪಡು, ನಾಗರಾಜ ವಂಡ್ಸೆ, ರೇಣುಕಾ ಶೆಟ್ಟಿ ಅವರನ್ನು ಗೌರವಿಸಲಾಯಿತು.

    ಪಂಚಾಯಿತಿ ಕಟ್ಟಡ ಮಾದರಿಯ ಗ್ರಾಮ ಸರ್ಕಾರ ಕಾರ್ಯಾಲಯ ಜನಾಧಿಕಾರ ಸೌಧದ ಬಾಗಿಲು ತೆರೆದು ಎ.ಜಿ ಕೊಡ್ಗಿಯವರು ಪುಸ್ತಕವನ್ನು ಹೊರ ತಗೆದು ಅನಾವರಣಗೊಳಿಸಿದರು. ಪ್ರತಿಯನ್ನು ವೇದಿಕೆಗೆ ನೀಡುವುದರೊಂದಿಗೆ, ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ ಶೆಟ್ಟಿ ಹಾಗೂ ಹಕ್ಕೋತ್ತಾಯ ಆಂದೋಲನದ ಶ್ರೀನಿವಾಸ ಗಾಣಿಗರಿಗೆ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts