More

    ರಜನಿಕಾಂತ್ ಸಿನಿಮಾ ಶುರು: ತಲೈವಾ ಚಿತ್ರಕ್ಕೆ ನೆಲ್ಸನ್​ ನಿರ್ದೇಶನ

    ಒಂದು ಕಡೆ ವಯಸ್ಸು, ಇನ್ನೊಂದು ಕಡೆ ಅನಾರೋಗ್ಯ, ಮತ್ತೊಂದು ಕಡೆ ಅಷ್ಟೇನೂ ಯಶಸ್ವಿ ಆಗದ ಹಿಂದಿನ ಚಿತ್ರಗಳು … ಇದೆಲ್ಲದರಿಂದ ರಜನಿಕಾಂತ್​ ಇನ್ನು ಅಭಿನಯಿಸುವುದು ಸಂಶಯ, ಬಹುಶಃ “ಅಣ್ಣಾತ್ತೆ’ ಅವರ ಕೊನೆಯ ಚಿತ್ರವಾಗುವ ಸಾಧ್ಯತೆ ಇದೆ ಎಂಬ ಗುಸುಗುಸು ಇತ್ತು. ಆದರೆ, ರಜನಿಕಾಂತ್​ ಇದನ್ನು ಸುಳ್ಳು ಮಾಡುವುದಕ್ಕೆ ಹೊರಟಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಅವರ ಹೊಸ ಚಿತ್ರ ಏಪ್ರಿಲ್​ನಿಂದ ಶುರುವಾಗಲಿದೆ.

    ಹೌದು, ಎಷ್ಟೇ ಅಡೆತಡೆಗಳ ನಡುವೆಯೂ, ರಜನಿಕಾಂತ್​ಗೆ ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುವ ಮನಸ್ಸಿಲ್ಲ. ಒಂದರಹಿಂದೊಂದು ಚಿತ್ರ ಮಾಡುತ್ತಲೇ ಇರಬೇಕು ಎನ್ನುವ ಅವರಿಗೆ ನೆಲ್ಸನ್​ ದಿಲೀಪ್​ ಕುಮಾರ್​ ಹೇಳಿದ ಕಥೆಯೊಂದು ಬಹಳ ಇಷ್ಟವಾಗಿದೆಯಂತೆ.

    ಈ ಕಥೆಗೆ ರಜನಿಕಾಂತ್​ ಗ್ರೀನ್​ ಸಿಗ್ನಲ್​ ನೀಡಿದ್ದು, ಅದೇ ಅವರ 169ನೇ ಚಿತ್ರವಾಗಲಿದೆ ಎಂದು ಹೇಳಲಾಗುತ್ತಿದೆ. “ಕೊಲಮಾವು ಕೋಕಿಲ’, “ಡಾಕ್ಟರ್​’ ಮತ್ತು ವಿಜಯ್​ ಅಭಿನಯದ “ಬೀಸ್ಟ್​’ ಚಿತ್ರಗಳನ್ನು ನಿರ್ದೇಶಿಸಿರುವ ನೆಲ್ಸನ್​ ದಿಲೀಪ್​ ಕುಮಾರ್​, ರಜನಿಕಾಂತ್​ ಜತೆಗೆ ಚಿತ್ರ ಮಾಡಬೇಕು ಎನ್ನುವುದು ಬಹಳ ವರ್ಷಗಳ ಕನಸ್ಸಾಗಿತ್ತಂತೆ. ಅದು “ತಲೈವಾ 169′ ಮೂಲಕ ಈಡೇರುತ್ತಿದೆ. ಏಪ್ರಿಲ್​ ಕೊನೆಗೆ ಪ್ರಾರಂಭವಾಗುವ ಈ ಚಿತ್ರವು, ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗಲಿದೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts