More

    ಹಣಕ್ಕಾಗಿ ಮನುಷ್ಯತ್ವವನ್ನೇ ಮರೆತ ರಾಕ್ಷಸ ಯುವಕ: ಈತನ ಹಿನ್ನೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ!

    ಬೆಂಗಳೂರು: ಹಣದ ಅಮಲೇರಿಸಿಕೊಂಡು, ಮಾನವೀಯತೆಯನ್ನು ಮರೆತು ಕೆಲವರನ್ನು ಅಕ್ರಮ ಬಂಧನದಲ್ಲಿಟ್ಟು ರಕ್ಕಸರ ರೀತಿಯಲ್ಲಿ ವರ್ತಿಸುತ್ತಿದ್ದ ದುಷ್ಟ ಯುವಕನನ್ನು ಬಂಧಿಸುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿ ಆಗಿದ್ದಾರೆ.

    ಬಂಧಿತ ಅಂತರಾಜ್ಯ ವಂಚಕನನ್ನು ಸ್ವರೂಪ್ ಅಲಿಯಾಸ್​ ಅಜಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಈತ ಹಣಕ್ಕಾಗಿ ಮನುಷ್ಯತ್ವವನ್ನೇ ಬಿಡುವ ಕ್ರೂರಿ. 25ರ ಆಸು-ಪಾಸಿನಲ್ಲೇ ದೊಡ್ಡ ಕ್ರಿಮಿನಲ್ ಎನಿಸಿಕೊಂಡಿದ್ದಾನೆ. ಅಲ್ಲದೆ, ತಾನೊಬ್ಬ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಲಕ್ಷ-ಲಕ್ಷ ರೂ. ಹಣವನ್ನು ಪೀಕಿದ್ದಾನೆ.

    ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಹೊಟೆಲ್​ನಲ್ಲಿ ಕೆಲಸ ಮಾಡುವ ಹಾವೇರಿ ಮೂಲದ ಅರ್ಶದ್ ಎಂಬಾತನನ್ನು ಸ್ವರೂಪ್​ ಪರಿಚಯ ಮಾಡಿಕೊಂಡಿದ್ದ. ಇದೇ ಸ್ಟಾರ್ ಹೋಟೆಲ್​ಗೆ ಗ್ರಾಹಕನಾಗಿ ಆಗಮಿಸಿದ್ದ ವೇಳೆ ಇಬ್ಬರ ಪರಿಚಯವಾಗಿತ್ತು. ತುಂಬಾ ಪರಿಚಿತರಾದ ನಂತರ ಅರ್ಶದ್​ ತನ್ನ ಹಣಕಾಸಿನ ಸಮಸ್ಯೆಯನ್ನು ಸ್ವರೂಪ್​ ಬಳಿ ಹೇಳಿಕೊಂಡಿದ್ದ. ನಿನಗೆ ಹಣಕಾಸಿನ ಸಹಾಯ ಮಾಡುತ್ತೇನೆ ಯಾರಿಗೂ ಹೇಳ್ಬೇಡ ಎಂದು ಸ್ವರೂಪ್​ ಹೇಳಿದ್ದ.

    ಇದನ್ನೂ ಓದಿ: ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಅರ್ಶದ್ ಕಡೆಯವರಿಂದ ಹಣ ವಸೂಲಿ ಮಾಡಲು ಮುಂದಾದ ಸ್ವರೂಪ್​, ಸ್ವಾಮೀಜಿ ಹೆಸರಿನಲ್ಲಿ ಪ್ಲಾನ್ ಮಾಡಿದ್ದ. ತನ್ನ ಪರಿಚಯಸ್ಥ ವಿಶ್ವನಾಥ್ ಸ್ವಾಮೀಜಿ ಅರ್ಶದ್ ಅಕೌಂಟ್​ಗೆ 25 ಲಕ್ಷ ರೂ. ಹಣ ದೇಣಿಗೆ ನೀಡಿದ್ದಾರೆ. 25 ಲಕ್ಷ ರೂ. ಏಕಾಏಕಿ ಬಂದಿರುವುದರಿಂದ ಅಕೌಂಟ್ ಫ್ರೀಜ್ ಆಗಿದೆ. 5.85 ಲಕ್ಷ ರೂ. ತೆರಿಗೆ ಕಟ್ಟಬೇಕು. ಆ ಬಳಿಕ ಅರ್ಶದ್ ಅಕೌಂಟ್​ಗೆ ಹಣ ಬರತ್ತೆ ಎಂದು ಪುಂಗಿಬಿಟ್ಟಿದ್ದ.

    ಇತ್ತ 5.85 ಲಕ್ಷ ರೂ. ಹಣ ಪಡೆದು 25 ಲಕ್ಷ ರೂ. ಕೊಡದೇ ಸ್ವರೂಪ್​ ಯಾಮಾರಿಸಿದ್ದ. ಆಗ ಹಣ ಬಾರದಿದ್ದದ್ದನ್ನು ಪ್ರಶ್ನಿಸಿದಾಗ ತಾನೇ ಹಣ ಕೊಡುತ್ತೇನೆಂದು ಹೇಳಿ ಅರ್ಶದ್​ನನ್ನು ಕಾಡುಗೋಡಿಯ ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡಿದ್ದ. ಅರ್ಶದ್​ ಬರುತ್ತಿದ್ದಂತೆಯೇ ಆತನನ್ನು ಲಾಕ್​ ಮಾಡಿದ ಸ್ವರೂಪ್​, ಮೂರು ತಿಂಗಳು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದ. ಈ ಮೂರು ತಿಂಗಳ ಅವಧಿಯಲ್ಲಿ ಅರ್ಶದ್​ಗೆ ನರಕ ದರ್ಶನ ಮಾಡಿಸಿದ್ದ. ಫ್ಲಾಟ್​ನಲ್ಲಿ ಒದೆಯೋದು, ತುಳಿಯೋದು ಮನಬಂದ ರೀತಿ ಹಲ್ಲೆ ಮಾಡುತ್ತಿದ್ದ.

    ಇದನ್ನೂ ಓದಿ: ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!

    ಕಿಕ್ ಬಾಕ್ಸಿಂಗ್ ರೂಪದಲ್ಲಿ ಮನೆಯಲ್ಲ ಓಡಾಡಿಸಿಕೊಂಡು ಹಲ್ಲೆ ನಡೆಸಿದ್ದ. ಹಲ್ಲೆ ಮಾತ್ರವಲ್ಲದೆ, ತನ್ನ ಫ್ಲಾಟ್​ನಲ್ಲೇ ಡ್ರಗ್ಸ್ ಸೇವನೆ ಮಾಡಿ ವಿಕೃತಿ ಮೆರೆಯುತ್ತಿದ್ದ. ಈ ವೇಳೆ ಪೊಲೀಸರಂತೆ ಅರ್ಶದ್ ಪೋಷಕರಿಗೆ ಕರೆ ಮಾಡಿಸಿ, ಹಣ ನೀಡುವಂತೆ ಬ್ಲಾಕ್​ಮೇಲ್​ ಮಾಡುತ್ತಿದ್ದ. ಈ ಹಿಂದೆ ಅರ್ಶದ್ ತಾಯಿ ಹೆಸರಿನಲ್ಲಿದ್ದ ಚೆಕ್​ಬೌನ್ಸ್ ಕೇಸ್ ಬಗ್ಗೆ ಪೊಲೀಸರಂತೆ ಪ್ರಸ್ತಾಪಿಸಿದ್ದ. ಇದೇ ಪ್ರಕರಣದಲ್ಲಿ ಅರ್ಶದ್ ಬಂಧಿಸುವುದಾಗಿ ಬೆದರಿಸಿ ಸುಮಾರು 48 ಲಕ್ಷ ರೂ. ಹಣ ಪೀಕಿದ್ದ.

    ಕೊನೆಗೂ ಖತರ್ನಾಕ್​ ಸ್ವರೂಪ್​ನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಬಂಧನವಾಗುತ್ತಿದ್ದಂತೆ ಸ್ವರೂಪ್ ವಿರುದ್ಧದ ಕ್ರಿಮಿನಲ್ ಕೇಸ್​ಗಳ ಇತಿಹಾಸ ಬಯಲಾಗುತ್ತಿದೆ. ಮಂಗಳೂರು ಸುತ್ತ ಅರೋಪಿ ವಿರುದ್ಧ 5ಕ್ಕು ಹೆಚ್ಚು ವಂಚನೆ ಹಾಗು ಅಕ್ರಮ ಬಂಧನ ಕೇಸ್ ಇದೆ. ಪುಣೆಯ ಓರ್ವರಿಗೆ ಎಂಎನ್​ಸಿ ಕಂಪನಿ ಸಿಇಒ ಎಂದು ಕರೆ ಮಾಡಿ ಲಕ್ಷ-ಲಕ್ಷ ಪೀಕಿದ್ದ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ವಾಟ್ಸ್​ಆ್ಯಪ್​ ಸ್ಟೇಟಸ್​ನಿಂದ ಬಯಲಾಯ್ತು ಮುಚ್ಚಿಟ್ಟಿದ್ದ ರಹಸ್ಯ: ಮರುಗಳಿಗೆಯಲ್ಲೇ ಮಹಿಳೆ ನೇಣಿಗೆ ಶರಣು!

    ಅಕ್ಕನಿಂದಲೇ 15 ವರ್ಷದ ತಂಗಿಯ ಮೇಲೆ ನಿರಂತರ ರೇಪ್​: ಸಂತ್ರಸ್ತೆ ಬಿಚ್ಚಿಟ್ಟ ಭಯಾನಕ ಕತೆ ಇದು!

    ಲಿವ್​ ಇನ್ ಹೆಸರಲ್ಲಿ ಗರ್ಭಿಣಿ ಮಾಡಿ ಬೀದಿಗೆ ಬಿಟ್ಟಿದ್ದಾನೆ- ಆತ್ಮಹತ್ಯೆ ಬಿಟ್ಟು ಬೇರೆನು ಮಾಡಲಿ?

    2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts