More

    ಸೌಕರ್ಯ ಒದಗಿಸಲು ಬದ್ಧ

    ಯರಗಟ್ಟಿ: ಸಿಎಂ ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಆಡಿಟೋರಿಯ ಸೇರಿ ಎಲ್ಲ ಮೂಲಸೌಲಭ್ಯ ಒದಗಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

    ಇಲ್ಲಿನ ಸಿಎಂ ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಘಟಕಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಬಹಳಷ್ಟು ಪ್ರಾಮುಖ್ಯವಾಗಿದೆ. ಆದ್ದರಿಂದ ಕಾಲೇಜು ಸಮಯವನ್ನು ಸದುಪಯೋಗ ಮಾಡಿಕೊಳ್ಳಬೇಕು. ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಯ ಮೆಟ್ಟಿಲೇರಿ ಮನೆ ಹಾಗೂ ಶಾಲೆ-ಕಾಲೇಜಿನ ಕೀರ್ತಿ ತರಬೇಕು ಎಂದರು.

    ಬೈಲಹೊಂಗಲ ಶಾಖಾ ಮೂರುಸಾವಿರಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಸ್ವಂತಿಕೆ ಬೆಳೆಸಿಕೊಳ್ಳಬೇಕು. ಯುವಕ-ಯುವತಿಯರು ರೀಲ್ಸ್ ಗೀಳು ಬಿಟ್ಟು ದೇಶ ಕಟ್ಟುವ ಉತ್ತಮ ಪ್ರಜೆಗಳಾಗಬೇಕು ಎಂದರು.

    ಹಿರಿಯ ಸಾಹಿತಿ ಆರ್.ಎಸ್. ಪಾಟೀಲ ಮಾತನಾಡಿದರು. ಪ್ರಾಚಾರ್ಯ ರಾಯನಗೌಡ ಮರಿಗೌಡರ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಅಧ್ಯಕ್ಷ ನೀಲಕಂಠ ಶಿವಬಸನ್ನವರ, ನಿಖಿಲ ದೇಸಾಯಿ, ಪ್ರಕಾಶ ವಾಲಿ, ವೈ.ಎಚ್. ಶೇರಿ, ಡಿ.ಕೆ.ರಫೀಕ್, ರುದ್ರರಡ್ಡಿ ಮಂಗನ್ನವರ, ಪ್ರೊ.ರಾಜಶೇಖರ ಬಿರಾದರ, ಟಿ.ಎಂ. ಕಾಮನ್ನವರ, ಆರ್.ಎಲ್. ಜೂಗನ್ನವರ, ಚಾಯಪ್ಪ ಹುಂಡೆಕರ, ಶಂಕರ ಇಟ್ನಾಳ, ಶಿವಾನಂದ ಕರಿಗನ್ನವರ, ಲಕ್ಷ್ಮಣ ಕುಂಟಿರಪ್ಪಗೋಳ, ಗಿಡ್ಡಪ್ಪ ಖಂಡ್ರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts