ಶಿವಮೊಗ್ಗ: ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರ ಮಾಡಿರುವ ಶಿ-Áರಸನ್ನು ಕೇಂದ್ರ ಸರ್ಕಾರ ಹಾಲಿ ನಡೆಯುತ್ತಿರುವ ಅಽವೇಶನದಲ್ಲೇ ಅಂಗೀಕರಿಸಿ ರಾಜ್ಯದ ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಹಾಲುಮತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ. ಪ್ರಶಾಂತ್ ಒತ್ತಾಯಿಸಿದರು.
ಸ್ವಾತಂತ್ರ‍್ಯ ಪೂರ್ವದಿಂದ ಇಲ್ಲಿವರೆಗೂ ಎಸ್ಟಿ ಮೀಸಲಾತಿ ಪಟ್ಟಿಯಲ್ಲಿರುವ ಕುರುಬ ಸಮುದಾಯವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸದೆ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸಲು ಸಮುದಾಯದ ಶ್ರೀ ನಿರಂಜನಾನAದಪುರಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಹಲವಾರು ಹೋರಾಟ ನಡೆದರೂ ಇದುವರೆಗೆ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸ್ವಾಮೀಜಿ ನೇತೃತ್ವದಲ್ಲಿ 2015ರಿಂದಲೂ ನಿರಂತರ ಹೋರಾಟ, ಸಮಾವೇಶ, ಧರಣಿ ಸತ್ಯಾಗ್ರಹದ ಮೂಲಕ ಅಂದಿನ ಕಾಂಗ್ರೆಸ್ ಸರ್ಕಾರ, ಬಳಿಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಮನವಿ ಹಾಗೂ ಒತ್ತಾಯ ಮಾಡಲಾಗಿತ್ತು. ಇದರಿಂದ ಸಮ್ಮಿಶ್ರ ಸರ್ಕಾರ ಕುರುಬ ಎಸ್ಟಿ ಮೀಸಲಾತಿಗಾಗಿ ಕುಲಶಾಸಿöÃಯ ಅಧ್ಯಯನಕ್ಕೆ ಆದೇಶ ನೀಡಿತ್ತು. 2019ರಿಂದ ರಾಜ್ಯದ 25 ಜಿಲ್ಲೆಗಳಲ್ಲಿ ನಡೆದ ಕುಲಶಾಸಿöÃಯ ಅಧ್ಯಯನದ ವರದಿಯನ್ನು 2023ರ ಮಾರ್ಚ್ನಲ್ಲಿ ನಡೆದ ಸಚಿವ ಸಂಪುಟದಲ್ಲಿ ಅಂಗೀಕರಿಸಲಾಗಿತ್ತು. ಈ ಆದೇಶವನ್ನು ಜು.20ರಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿ-Áರಸು ಮಾಡಿದೆ ಎಂದರು.
ಮಹಾಸಭಾದ ಜಿಲ್ಲಾ ಕಾರ್ಯಾಧ್ಯಕ್ಷ ಗಣೇಶ್ ಬಿಳಗಿ ಮಾತನಾಡಿ, ಮೂಲತಃ ಬುಡಕಟ್ಟು ಸಮುದಾಯವಾಗಿರುವ ಕುರುಬ ಸಮುದಾಯ ಇಂದಿಗೂ ಬುಡಕಟ್ಟು ಸಂಸ್ಕೃತಿ, ಆಚರಣೆಗಳನ್ನು ಅನುಸರಿಸುತ್ತಿದೆ. ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು ಸಹಕಾರ ನೀಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಕೇಂದ್ರ ಸರ್ಕಾರಕ್ಕೆ ಶಿ-Áರಸು ಮಾಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸಂಶೋಧಕ ಡಾ. ಲಿಂಗದಳ್ಳಿ ಹಾಲಪ್ಪ, ಜಿಲ್ಲಾಧ್ಯಕ್ಷ ಸಿ.ದಾನೇಶ್, ಕಾರ್ಯದರ್ಶಿ ಸುಹಾಸ್ ಬಾಬು, ಸಂಚಾಲಕರಾದ ವಿನಯ್‌ನಾರಾಯಣಸ್ವಾಮಿ, ದೊಡ್ಡಪ್ಪ, ವಾಟಾಳ್ ಮಂಜುನಾಥ್, ನವುಲೆ ಮಂಜು, ರಾಜ್ಯ ಮಹಿಳಾ ಉಪಾಧ್ಯಕ್ಷೆ ರತ್ನಮ್ಮ, ಸ್ವಪ್ನಾ ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.