More

    ಟ್ರೇಡ್ ಲೈಸೆನ್ಸ್ ಕೊಡಲು ಲಂಚಕ್ಕೆ ಬೇಡಿಕೆ: ಎಸಿಬಿ ಬಲೆಗೆ ಬಿದ್ದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್

    ಬೆಂಗಳೂರು: ಮೀನು, ಮಾಂಸ ಮಾರಾಟ ಮಳಿಗೆ ತೆರೆಯಲು ಟ್ರೇಡ್ ಲೈಸೆನ್ಸ್ ಕೊಡಲು ಲಂಚ ಪಡೆಯುತ್ತಿದ್ದ ಪಂಚಾಯಿತಿ ಬಿಲ್ ಕಲೆಕ್ಟರ್ ಮತ್ತು ಕಾರ್ಯದರ್ಶಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸೆರೆಸಿಕ್ಕಿದ್ದಾರೆ.

    ಬೆಂಗಳೂರು ನಗರ ಜಿಲ್ಲೆ ಸೀಗೆಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸಿ. ಮಂಜುನಾಥ್ ಮತ್ತು ಕಾರ್ಯದರ್ಶಿ ಸುಬ್ರಮಣಿ ಬಂಧಿತರು. ರಾಮಮೂರ್ತಿನಗರದ ವ್ಯಾಪಾರಿ, ಕೆ.ದೊಮ್ಮಸಂದ್ರದಲ್ಲಿ ಸಮುದ್ರ ಪ್ರೆಶ್ ಎಂಬ ಹೆಸರಿನಲ್ಲಿ ಮೀನು ಮತ್ತು ಮಾಂಸ ಮಾರಾಟ ಮಳಿಗೆ ತೆರೆಯಲು ಉದ್ದೇಶಿಸಿದ್ದರು. ಇದಕ್ಕಾಗಿ ಸೀಗೆಹಳ್ಳಿ ಗ್ರಾಮ ಪಂಚಾಯಿತಿಗೆ ಟ್ರೇಡ್ ಲೈಸೆನ್ಸ್‌ಗೆ ಅಕ್ಟೋಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆನಂತರ ಕಾರ್ಯದರ್ಶಿ ಸುಬ್ರಮಣಿಯನ್ನು ಭೇಟಿ ಮಾಡಿದಾಗ ಟ್ರೇಡ್ ಲೈಸೆನ್ಸ್‌ಗೆ 3,500 ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು.

    ಲಂಚ ಬೇಡಿಕೆ ಮಳಿಗೆ ಮಾಲೀಕ, ಎಸಿಬಿ ಕಚೇರಿಗೆ ದೂರು ನೀಡಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಅ.13ರಂದು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಮಂಜುನಾಥ್ ಮತ್ತು ಸುಬ್ರಮಣಿ ಅರ್ಜಿದಾರರನಿಂದ ಸರ್ಕಾರಿ ಶುಲ್ಕ 1,500 ರೂ. ಮತ್ತು ಲಂಚ 3,500 ರೂ. ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಆರೋಪಿತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಸಂಪಾದನೆ ಮಾಡಿದ್ರೆ ಇಂಥಾ ಅಭಿಮಾನಿಗಳನ್ನು ಸಂಪಾದಿಸ ಬೇಕು: ಫ್ಯಾನ್ಸ್​ಗೆ ಕಿಚ್ಚನ ಧನ್ಯವಾದ

    ಭೂಕಂಪ: ಕಾರಣ, ಪರಿಣಾಮ, ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರೊಂದಿಗೆ ಸಂವಾದ – ವಿಜಯವಾಣಿ ಕ್ಲಬ್​ಹೌಸ್​ನಲ್ಲಿ

    ಏರ್​ಪೋರ್ಟ್​ ಭದ್ರತಾ ಸಿಬ್ಬಂದಿ ಅನುಮತಿ ಕೇಳಿದ ಪುಟ್ಟ ಕಂದಮ್ಮ: ವಿಡಿಯೋ ನೋಡಿದ್ರೆ ಫಿದಾ ಗ್ಯಾರೆಂಟಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts