More

    ಯಾರನ್ನೂ ಒತ್ತಾಯಿಸುವುದಿಲ್ಲ ಇಷ್ಟವಿದ್ದರೆ ಮನೆ ನಿರ್ವಿುಸಿ

    ಕಳಸ: ನೆರೆ ನಿರಾಶ್ರಿತ ಕುಟುಂಬಗಳಿಗೆ ನಿವೇಶನ ಗೊತ್ತುಪಡಿಸಿದ ಕುಂಬಳಡಿಕೆ ಪ್ರದೇಶದಲ್ಲಿ ಸರ್ಕಾರ ನೀಡುವ ಹಣದಲ್ಲಿ ಇಷ್ಟವಿದ್ದರೆ ಮನೆ ನಿರ್ವಿುಸಿಕೊಳ್ಳಬಹುದು. ಯಾರನ್ನೂ ಒತ್ತಾಯ ಮಾಡುವುದಿಲ್ಲ ಎಂದು ಉಪ ವಿಭಾಗಾಧಿಕಾರಿ ನಾಗರಾಜ್ ಖಾರವಾಗಿ ಹೇಳಿದರು.

    ಶನಿವಾರ ಕುಂಬಳಡಿಕೆ ಪ್ರದೇಶಕ್ಕೆ ಭೇಟಿ ನೀಡಿದಾಗ ಸಂತ್ರಸ್ತ ಕುಟುಂಬದವರು ಅಹವಾಲು ಹೇಳಿಕೊಂಡರು. ನಮಗೆ ಗೊತ್ತು ಪಡಿಸಿದ ಸ್ಥಳದಲ್ಲಿ ವಿದ್ಯುತ್, ನೀರು ಇನ್ನು ಮುಂತಾದ ಮೂಲ ಸೌಲಭ್ಯಗಳು ಇಲ್ಲ. ಇಂತಹ ಪ್ರದೇಶದಲ್ಲಿ ಮನೆ ಹೇಗೆ ನಿರ್ವಿುಸುವುದು ಎಂದು ಪ್ರಶ್ನಿಸಿದರು.

    ಮನೆಕಟ್ಟಲು ನೀರಿಗೆ ಟ್ಯಾಂಕರ್ ವ್ಯವಸ್ಥೆ ಮಾಡಿಕೊಡುತ್ತೇವೆ. ಟ್ಯಾಂಕರ್ ಬಾಡಿಗೆ ನೀವೇ ಕೊಡಬೇಕು. ಮರಳಿಗೆ ವ್ಯವಸ್ಥೆ ಮಾಡಿಕೊಡುತ್ತೇವೆ. ಮರಳಿನ ಹಣ ಮತ್ತು ಅದರ ಬಾಡಿಗೆಯನ್ನು ನೀವೇ ಭರಿಸಬೇಕು. ವಿದ್ಯುತ್, ರಸ್ತೆ ವ್ಯವಸ್ಥೆ ಮಾಡಿಕೊಡುತ್ತೇವೆ.ನಿರಾಶ್ರಿತ 50 ಕುಟುಂಬಗಳ ಸಮ್ಮುಖದಲ್ಲಿ ಗ್ರಾಪಂ ಅಧಿಕಾರಿಗಳು ಲಾಟರಿ ಮುಖಾಂತರ ಆಯಾಯ ಸ್ಥಳಗಳನ್ನು ಆಯ್ಕೆ ಮಾಡಿ ಫಲಾನುಭವಿಗಳಿಗೆ ಕೊಡಲಾಗುತ್ತದೆ. ಅದೇ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಬೇಕು. ಈ ಸ್ಥಳಕ್ಕೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹೇಳಿದರು.

    ಇದಕ್ಕೆ ಆಕ್ಷೇಪ ವ್ಯಕ್ತೊಡಿಸಿದ ಸಂತ್ರಸ್ತರು, ನೀವು ಕೊಡುವ 5 ಲಕ್ಷ ರೂ.ನಲ್ಲಿ ನೀರನ್ನೂ ಬಾಡಿಗೆಗೆ ತಂದು ಮನೆ ಕಟ್ಟಲು ಸಾಧ್ಯವೇ. ಮನೆ ಅಡಿಪಾಯ ಹಾಕುವುದಕ್ಕೇ 5 ಲಕ್ಷ ರೂ. ಖರ್ಚಾಗುತ್ತದೆ. ಮನೆ ಬಾಡಿಗೆ ಹಣ ಕೊಡುತ್ತೇವೆ ಎಂದು ಹೇಳಿ ಅನ್ನೂ ಕೊಟ್ಟಿಲ್ಲ ಎಂದು ಹೇಳಿದರು.

    ಬಾಡಿಗೆ ಹಣ ನಿಮ್ಮ ಖಾತೆಗೆ ಪಾವತಿ ಆಗುತ್ತದೆ. ಸರ್ಕಾರ ಘೊಷಣೆ ಮಾಡಿದ್ದೇ ಐದು ಲಕ್ಷ ರೂ.. ಮನೆ ಕಟ್ಟಲು ಸಾಧ್ಯವಾದರೆ ಕಟ್ಟಬಹುದು. ಮರಳು, ನೀರು ತರಲು ಪಿಡಿಒ ಸಹಕಾರ ಮಾಡುತ್ತಾರೆ. ಕೆಲಸ ಪ್ರಾರಂಭ ಮಾಡುವವರು ಮಾಡಬಹುದು ಎಂದು ಹೇಳಿದರು. ನಿರಾಶ್ರಿತರು ಅಸಮಾಧಾನದಿಂದ ಸುಮ್ಮನಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts