More

    ABVP ಕೇವಲ ಸಂಘಟನೆಯಲ್ಲ, ಅದೊಂದು ಆಂದೋಲನ: ರಾಷ್ಟ್ರೀಯ ಸಮ್ಮೇಳನದಲ್ಲಿ ಅಮಿತ್ ಷಾ ಹೇಳಿಕೆ

    ನವದೆಹಲಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ (ABVP)ನ 75ನೇ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಿಸೆಂಬರ್ 8ರಂದು 69ನೇ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು.

    ಹೊಸದಿಲ್ಲಿಯ ಬುರಾರಿಯಲ್ಲಿರುವ 52 ಎಕರೆಯಲ್ಲಿ ನಿರ್ಮಿಸಲಾಗಿರುವ ವಿಸ್ತಾರವಾದ ‘ಇಂದ್ರಪ್ರಸ್ಥ ನಗರ’ ಟೆಂಟ್ ಸಿಟಿಯಲ್ಲಿ ನಾಲ್ಕು ದಿನಗಳ ಐತಿಹಾಸಿಕ ಕಾರ್ಯಕ್ರಮವು ಡಿಸೆಂಬರ್ 7 ರಂದು ಪ್ರಾರಂಭವಾಯಿತು, ಭಾರತದ ಪ್ರತಿ ಜಿಲ್ಲೆಯಿಂದಲೂ ವಿದ್ಯಾರ್ಥಿಗಳು ಆಗಮಿಸಿದ್ದಾರೆ.

    ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್ಎಸ್) ಉನ್ನತ ಮಟ್ಟದ ಪದಾಧಿಕಾರಿಗಳಾದ ಶ್ರೀ ಸುರೇಶ್ ಸೋನಿ (ಆರ್​ಎಸ್​ಎಸ್​ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ), ಸುಶ್ರೀ ಗೀತಾ ತೈ ಗುಂಡೆ, ಶ್ರೀ ಸಿ ಆರ್ ಮುಕುಂದ (ಸಹ ಸರ್ಕಾರಿವಾಹಕ, ಆರ್​​ಎಸ್​ಎಸ್), ಶ್ರೀ ಸುನೀಲ್ ಅಂಬೇಕರ್ ಜಿ ( ಅಖಿಲ ಭಾರತೀಯ ಪ್ರಚಾರ್ ಪ್ರಮುಖ್) ಮತ್ತು ಶ್ರೀ ರಾಮಲಾಲ್ ಜಿ (ಅಖಿಲ ಭಾರತೀಯ ಸಂಪರ್ಕ ಪ್ರಮುಖ್), ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಜ್ಞವಲ್ಕ್ಯ ಶುಕ್ಲಾ ಅವರು ಮಾತನಾಡಿ, ಎಬಿವಿಪಿ 50,65,264 ವಿದ್ಯಾರ್ಥಿಗಳ ಸದಸ್ಯತ್ವದೊಂದಿಗೆ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದು, ವಿಶ್ವದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ ಎಂದು ಘೋಷಿಸಿದರು. ಇದೇ ಸಂದರ್ಭದಲ್ಲಿ 69ನೇ ಎಬಿವಿಪಿ ರಾಷ್ಟ್ರೀಯ ಸಮ್ಮೇಳನದ ಥೀಮ್ ಸಾಂಗ್ ‘ಎಬಿವಿಪಿ, ಎಬಿವಿಪಿ ರಾಷ್ಟ್ರಭಕ್ತಿ’ ಬಿಡುಗಡೆ ಮಾಡಲಾಯಿತು. ರಾಷ್ಟ್ರೀಯ ಪ್ರಜ್ಞೆಯ ಐದು ವೈವಿಧ್ಯಮಯ ಪುಸ್ತಕಗಳ ಬಿಡುಗಡೆ ಮಾಡಲಾಯಿತು.

    ಎಬಿವಿಪಿ ರಾಷ್ಟ್ರೀಯ ಸಮ್ಮೇಳನವು ದೆಹಲಿಯ ನೈಜ ಇತಿಹಾಸ, ಸ್ವಾತಂತ್ರ್ಯ ಹೋರಾಟಗಳ ವೈಭವದ ಕಥೆ, ಎಬಿವಿಪಿ, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಹಿಂದವಿ ಸ್ವರಾಜ್ಯದ 75 ವರ್ಷಗಳ ಪ್ರಯಾಣ ಸೇರಿದಂತೆ ಪ್ರಮುಖ ಎಂಟು ವಿಷಯಗಳನ್ನು ಒಳಗೊಂಡಿರುವ ದತ್ತಾಜಿ ದಿದೋಲ್ಕರ್ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಆಕರ್ಷಣೆಗಳನ್ನು ಒಳಗೊಂಡಿದೆ. ಮಹಾರಾಣಾ ಪ್ರತಾಪ್, ಮಹಾರಾಜ ಮಿಹಿರ್ಭೋಜ್, ಮಹಾರಾಜ ಸೂರಜ್ಮಲ್, ರಾಣಿ ದುರ್ಗಾವತಿ ಮುಂತಾದ ಐತಿಹಾಸಿಕ ವ್ಯಕ್ತಿಗಳನ್ನು ಗೌರವಿಸುವ ಎಂಟು ಶಿಲ್ಪಗಳನ್ನು ಅನಾವರಣ ಮಾಡಲಾಯಿತು. ಭಾರತೀಯ ಪರಂಪರೆಯನ್ನು ಬಿಂಬಿಸುವ ಸಂತ ಜ್ಞಾನೇಶ್ವರ್, ಅಹಲ್ಯಾ ಬಾಯಿ ಹೋಳ್ಕರ್, ಲಚಿತ್ ಬರ್ಫುಕನ್, ಭಗವಾನ್ ಬಿರ್ಸಾ ಮುಂಡಾ, ಮದನ್ ಮೋಹನ್ ಮಾಳವೀಯ ಮತ್ತು ರಾಣಿ ಮಾ ಗೈಡಿನ್ಲಿಯು ಮುಂತಾದ ಹನ್ನೆರಡು ವಲಯಗಳಲ್ಲಿ (ನಗರ) ಗಣ್ಯರಿಗೆ ಸಮರ್ಪಿಸುವುದು ಪ್ರತಿನಿಧಿಗಳನ್ನು ಆಕರ್ಷಿಸಿತು. ಸಮ್ಮೇಳನದಲ್ಲಿ ಶೂನ್ಯ ಆಹಾರ ತ್ಯಾಜ್ಯ ಮತ್ತು ಶೂನ್ಯ ಪ್ಲಾಸ್ಟಿಕ್ ಬಳಕೆಯಂತಹ ಪದ್ಧತಿಯನ್ನು ಅನುಸರಿಸುತ್ತಿರುವುದು ವಿಶೇಷವಾಗಿದೆ.

    ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾತನಾಡಿ, “ನಾನು ABVPಯ ಮೂಲದಿಂದ ಬಂದವನು, ಮತ್ತು ನಾನು ರಾಜ್ಕೋಟ್ ABVP ರಾಷ್ಟ್ರೀಯ ಸಮ್ಮೇಳನದ ಸಮಯದಲ್ಲಿ ರಾಷ್ಟ್ರೀಯ ಪುನರ್​ನಿರ್ಮಾಣಕ್ಕಾಗಿ ನನ್ನ ಪ್ರಯಾಣವನ್ನು ಎಬಿವಿಪಿಯೊಂದಿಗೆ ಪ್ರಾರಂಭಿಸಿದೆ. 1949 ರಲ್ಲಿ ಸ್ಥಾಪನೆಯಾದ ABVP ರಾಷ್ಟ್ರೀಯ ಪುನರ್​ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿ ಕೊಡುಗೆ ನೀಡಿದೆ. ಸರ್ಕಾರದ ವಿರುದ್ಧದ ಚಳುವಳಿಗಳಿಗೆ ಯುವಕರು ತೊಡಗಿಕೊಳ್ಳಲು ಪ್ರೇರೆಪಣೆ ನೀಡಿದ್ದು, ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಯುವಕರು ವಿದ್ಯಾರ್ಥಿಗಳು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವುದಕ್ಕಿಂತ ಭಾರತಕ್ಕಾಗಿ ಬದುಕಬೇಕು ಎಂದು ಒತ್ತಿಹೇಳುತ್ತೇನೆ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವರ್ಷಾಚರಣೆಯ ಅಂಗವಾಗಿ ‘ ಹಿಂದವಿ ಸ್ವರಾಜ್ಯ ಯಾತ್ರೆ’ ನ್ನು ಸಂಘಟಿಸಿರುವ ಎಬಿವಿಪಿಗೆ ಹೃತ್ಪೂರ್ವಕ ಅಭಿನಂದನೆಗಳು. ವಿಶ್ವವು ಭಾರತೀಯ ಯುವಕರನ್ನು ಸಕಾರಾತ್ಮಕವಾಗಿ ಮತ್ತು ಭರವಸೆಯಿಂದ ನೋಡುತ್ತಿರುವ ಈ ಸಂದರ್ಭದಲ್ಲಿ ಮುಂದಿನ 25 ವರ್ಷಗಳನ್ನು ರಾಷ್ಟ್ರ ನಿರ್ಮಾಣಕ್ಕೆ ಬದ್ಧರಾಗುವಂತೆ ಅವರಲ್ಲಿ ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಎಬಿವಿಪಿ ಕೇವಲ ಸಂಘಟನೆಯಲ್ಲ, ಸ್ವತಃ ಒಂದು ಚಳುವಳಿ” ಎಂದರು.

    ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಯಜ್ಞವಾಲ್ಕ್ಯ ಶುಕ್ಲಾ ಮಾತನಾಡಿ, ‘ವಿದ್ಯಾರ್ಥಿ ಶಕ್ತಿಯೇ ರಾಷ್ಟ್ರದ ಶಕ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ, 69 ನೇ ರಾಷ್ಟ್ರೀಯ ಸಮ್ಮೇಳನವು ಶಿಕ್ಷಣ, ಸಂಸ್ಕೃತಿ ಮತ್ತು ನಾಯಕತ್ವದ ಮೂಲಕ ಭಾರತದ ಯುವಜನರ ಭವಿಷ್ಯವನ್ನು ರೂಪಿಸುವ ಸಂಘಟನೆಯಾಗಿದೆ. 69ನೇ ಎಬಿವಿಪಿ ರಾಷ್ಟ್ರೀಯ ಸಮ್ಮೇಳನದಲ್ಲಿ ದೇಶದ ಎಲ್ಲಾ ಜಿಲ್ಲೆಗಳಿಂದ ಹತ್ತು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಹೆಚ್ಚುವರಿಯಾಗಿ ವಿವಿಧ ರಾಯಭಾರ ಕಚೇರಿಗಳ ರಾಜತಾಂತ್ರಿಕರು ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಮೂಲಕ ಸಾಕ್ಷಿಯಾಗಿದ್ದಾರೆ. ಎಬಿವಿಪಿಯು ಸೃಜನಾತ್ಮಕ ಆಂದೋಲನಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಪ್ರತಿಪಾದಿಸುವ ಒಂದು ಆಂದೋಲನವಾಗಿದ್ದು, ಸಮಾಜದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ. ಎಬಿವಿಪಿಯು ವಿದ್ಯಾರ್ಥಿಗಳಿಗೆ ಆತ್ಮರಕ್ಷಣೆಯ ತರಬೇತಿಯನ್ನು ನೀಡಲು ರಾಷ್ಟ್ರವ್ಯಾಪಿ ಆಂದೋಲನವಾದ ‘ಮಿಷನ್ ಸಾಹಸಿ’ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ರಾಷ್ಟ್ರೀಯ ಸಮ್ಮೇಳನದಲ್ಲಿ, ನಮ್ಮ ದೇಶದ ಶ್ರೀಮಂತ ವೈವಿಧ್ಯತೆಯನ್ನು ಪ್ರತಿಬಿಂಬಿಸಲು ಭಾರತವನ್ನು ಸೂಕ್ಷ್ಮರೂಪದಲ್ಲಿ ಪ್ರಸ್ತುತಪಡಿಸಲು ಭಾಷಾ, ಸಾಮಾಜಿಕ, ಸಾಂಸ್ಕೃತಿಕ , ಧಾರ್ಮಿಕ,ಹೆಚ್ಚು ಒತ್ತನ್ನು ನೀಡುವುದರ ಜೊತೆಯಲ್ಲಿ ‘ವಸುಧೈವ ಕುಟುಂಬಕಂ’ ಎಂಬ ನಂಬಿಕೆಯಿಟ್ಟು ಜಾಗತಿಕ ಒಳಿತಿಗಾಗಿ ಶ್ರಮಿಸುತ್ತೇವೆ ಎಂದರು.

    ಹೋಮ್ ವರ್ಕ್ ಮಾಡಲಿಲ್ಲ ಎಂದು ವಿದ್ಯಾರ್ಥಿ ಮೇಲೆ ರಾಡ್‌ನಿಂದ ಹಲ್ಲೆ ಮಾಡಿದ ಶಿಕ್ಷಕಿ

    ಕಟ್ಟಡ ಸಮೇತ ನೆಲಕ್ಕೆ ಉರುಳಿದ ಟವರ್: ತಪ್ಪಿದ ಭಾರೀ ಅನಾಹುತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts