More

    ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ : ವಿಶೇಷತೆಗಳೇನು?

    ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಖ್ರಿಯಾಲ್ ನಿಶಾಂಕ್ ಅವರು 6 ರಿಂದ 8 ನೇ ತರಗತಿಗಳಿಗೆ ಎನ್‌ಸಿಇಆರ್‌ಟಿ ಅಭಿವೃದ್ಧಿಪಡಿಸಿದ ಎಂಟು ವಾರಗಳ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಸೋಮವಾರ ಬಿಡುಗಡೆಗೊಳಿಸಿದರು.

    ಮಕ್ಕಳ ಕಲಿಕೆಯಲ್ಲಿನ ಪ್ರಗತಿಯ ಮೌಲ್ಯಮಾಪನಕ್ಕೆ ಅನುಕೂಲವಾಗುವಂತೆ ಪರ್ಯಾಯ ಕ್ಯಾಲೆಂಡರ್ ಕಲಿಕೆಯ ಫಲಿತಾಂಶಗಳೊಂದಿಗೆ ವಿಷಯಗಳನ್ನು ರೂಪಿಸುತ್ತದೆ.

    ಇದನ್ನೂ ಓದಿ:  ರಿಯಾ ಎಲ್ಲಿದ್ದಾರೆ ಅಂತ ಗೊತ್ತಾಗಿದೆಯಂತೆ … ಬಿಹಾರ ಪೊಲೀಸರ ಮುಂದಿನ ನಡೆಯೇನು?

    ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಗ್ಗೆ ಟ್ವೀಟ್ ಮಾಡಿದ ಅವರು ನಾಲ್ಕು ವಾರಗಳವರೆಗಿನ ಉನ್ನತ ಪ್ರಾಥಮಿಕ ಹಂತ (VI ರಿಂದ VIII ತರಗತಿಗಳು)ದ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಈ ಮೊದಲು ಬಿಡುಗಡೆ ಮಾಡಲಾಗಿದೆ. ಮುಂದಿನ ಎಂಟು ವಾರಗಳವರೆಗಿನ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ನಾನು ಬಿಡುಗಡೆಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ.
    ಶೈಕ್ಷಣಿಕ ಕ್ಯಾಲೆಂಡರ್ ಪಠ್ಯಕ್ರಮ ಅಥವಾ ಪಠ್ಯಪುಸ್ತಕದಿಂದ ತೆಗೆದ ಅಧ್ಯಾಯಕ್ಕೆ ಸಂಬಂಧಿಸಿ ಆಸಕ್ತಿದಾಯಕ ಮತ್ತು ಸವಾಲಿನ ಚಟುವಟಿಕೆಗಳನ್ನು ಒಳಗೊಂಡಿರುವ ವಾರವಾರು ಯೋಜನೆಗಳನ್ನು ಒಳಗೊಂಡಿದೆ.

    ಇದನ್ನೂ ಓದಿ:  ಭಾರತ ಉಪಖಂಡದಲ್ಲಿ ಮುಂದುವರಿದ ನಕ್ಷೆ ರಾಜಕೀಯ; ಪಿಒಕೆಯನ್ನು ತನ್ನದೆಂದು ಹೊಸ ನಕ್ಷೆ ಬರೆದ ಪಾಕಿಸ್ತಾನ

    ವಿದ್ಯಾರ್ಥಿಗಳು https://ncert.nic.in/alternative-academic-calendar.php ಮೂಲಕ ಉನ್ನತ ಪ್ರಾಥಮಿಕ ಹಂತದ ಎನ್‌ಸಿಇಆರ್‌ಟಿ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಪರಿಶೀಲಿಸಬಹುದು.

    ಸುಶಾಂತ್​ ಮಾಜಿ ಮ್ಯಾನೇಜರ್​ ದಿಶಾಳನ್ನು ರೇಪ್​ ಮಾಡಿ ಸಾಯಿಸಲಾಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts