More

    ಯುವರಾಜ್​ಗೆ ಯಶಸ್ಸಿನ ಶ್ರೇಯ ನೀಡಿದ ಅಭಿಷೇಕ್​ ಶರ್ಮ; ಹೀಗಿದೆ ಕಾರಣ…

    ಹೈದರಾಬಾದ್​: ಸಿಎಸ್​ಕೆ ತಂಡದ 166 ರನ್​ ಸವಾಲು ಬೆನ್ನಟ್ಟಲು ನಿಂತ ಸನ್​ರೈಸರ್ಸ್​ಗೆ ಅಭಿಷೇಕ್​ ಶರ್ಮ (37 ರನ್​, 12 ಎಸೆತ, 3 ಬೌಂಡರಿ, 4 ಸಿಕ್ಸರ್​), ಮುಕೇಶ್​ ಚೌಧರಿ ಎಸೆದ ಇನಿಂಗ್ಸ್​ನ 2ನೇ ಓವರ್​ನಲ್ಲೇ 3 ಸಿಕ್ಸರ್​, 2 ಬೌಂಡರಿ ಸಹಿತ 27 ರನ್​ ತಂದುಕೊಟ್ಟರು. ಈ ಮೂಲಕ ಸನ್​ರೈಸರ್ಸ್​ ಗೆಲುವಿನ ಹಾದಿ ಸುಗಮಗೊಳಿಸಿದ ಅಭಿಷೇಕ್​ ಗೆಲುವಿನ ರೂವಾರಿ ಎನಿಸಿದರು. ಇದಕ್ಕೆ ಪ್ರತಿಯಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದ ಅಭಿಷೇಕ್​, ಟೀಮ್​ ಇಂಡಿಯಾದ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್​ ಹೆಸರನ್ನು ವಿಶೇಷವಾಗಿ ಉಲ್ಲೇಖಿಸಿ ಧನ್ಯವಾದ ಹೇಳಿದರು.

    ಪಂಜಾಬ್​ನವರೇ ಆದ ಅಭಿಷೇಕ್​ ಸಮಯ ಸಿಕ್ಕಾಗ ಚಂಡೀಗಢದಲ್ಲಿ ಯುವರಾಜ್​ ಮಾರ್ಗದರ್ಶನದಲ್ಲೇ ತರಬೇತಿ ಪಡೆಯುತ್ತಾರೆ. ಹೀಗಾಗಿ ತನ್ನ ತಂದೆ, ಸನ್​ರೈಸರ್ಸ್​ ಮಾಜಿ ಕೋಚ್​ ಬ್ರಿಯಾನ್​ ಲಾರಾ ಜತೆಗೆ ಯುವರಾಜ್​ಗೂ ಅಭಿಷೇಕ್​ ತನ್ನ ಯಶಸ್ಸಿನ ಕ್ರೆಡಿಟ್​ ನೀಡಿದ್ದಾರೆ.

    ಟ್ರಾವಿಡ್​ ಹೆಡ್​ (31) ಜತೆಗೂಡಿ ಅಭಿಷೇಕ್​ ಮೊದಲ ವಿಕೆಟ್​ಗೆ 46 ರನ್​ ಸೇರಿಸಿದರು. ಇದರಿಂದ ಸನ್​ರೈಸರ್ಸ್​ ಪವರ್​ಪ್ಲೇನಲ್ಲೇ 78 ರನ್​ ಕಲೆಹಾಕಿತು. ನಂತರ 84 ಎಸೆತಗಳಲ್ಲಿ 88 ರನ್​ ಗಳಿಸಬೇಕಾಗಿದ್ದ ಸನ್​ರೈಸರ್ಸ್​ 18.1 ಓವರ್​ಗಳಲ್ಲೇ 4 ವಿಕೆಟ್​ಗೆ 166 ರನ್​ ಕಲೆಹಾಕಿ, ಸಿಎಸ್​ಕೆ ತಂಡಕ್ಕೆ ಸತತ 2ನೇ ಸೋಲುಣಿಸಿತು. ಏಡನ್​ ಮಾರ್ಕ್ರಮ್​ (50) ಅರ್ಧಶತಕದಾಟವೂ ಸನ್​ರೈಸರ್ಸ್​ ಗೆಲುವಿಗೆ ಸಹಕಾರಿಯಾಯಿತು.
    ಎಕ್ಸ್​ನಲ್ಲಿ ಪ್ರತಿಕ್ರಿಯಿಸಿ ಅಭಿಷೇಕ್​ ಆಟವನ್ನು ಪ್ರಶಂಸಿಸಿರುವ ಯುವರಾಜ್​, ಕೆಟ್ಟ ಹೊಡೆತಕ್ಕೆ ಔಟ್​ ಆಗಿದ್ದಕ್ಕೂ ಕ್ಲಾಸ್​ ತೆಗೆದುಕೊಂಡಿದ್ದಾರೆ.

    ವಿರಾಟ್ ಶತಕದ ನಡುವೆಯೂ ರಾಜಸ್ಥಾನಕ್ಕೆ ಮಣಿದ ಆರ್‌ಸಿಬಿ: ಅಬ್ಬರಿಸಿದ ಬಟ್ಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts