More

    ಆರಾಧ್ಯಾಳಿಂದಲೇ ಸಿನಿಮಾ ಕರಿಯರ್ ಹಾಳು; ಪುತ್ರಿ ಬಗ್ಗೆ ಅಭಿಷೇಕ್​ ಬಚ್ಚನ್​ ಹೇಳಿದ್ದೇನು?

    ಬಿಗ್​ ಬಿ ಅಮಿತಾಭ್​ ಬಚ್ಚನ್​ ಮಗನೆಂಬ ಮಾತ್ರಕ್ಕೆ ಅಭಿಷೇಕ್​ಗೆ ಚಿತ್ರರಂಗದಲ್ಲಿ ಎಲ್ಲವೂ ಸಲೀಸಾಗಿ ಸಿಕ್ಕಿತು ಎಂದು ಹೇಳುವುದು ಕಷ್ಟ. 20 ವರ್ಷಗಳ ಹಿಂದೆ ಅಭಿಷೇಕ್​ ಚಿತ್ರರಂಗಕ್ಕೆ ಬರುವುದಕ್ಕೂ ಕಷ್ಟಪಟ್ಟರು, ಈಗಲೂ ಕಷ್ಟಪಡುತ್ತಿದ್ದಾರೆ ಎಂದರೆ, ಅದರಲ್ಲಿ ಸುಳ್ಳೇನಿಲ್ಲ. ಚಿತ್ರರಂಗಕ್ಕೆ ಬಂದು 20 ವರ್ಷಗಳಾದರೂ, ಅಭಿಷೇಕ್​ ಕೈಯಲ್ಲಿ ಅಷ್ಟೇನೂ ದೊಡ್ಡ ಚಿತ್ರಗಳಿಲ್ಲ. ಹಾಗೆಯೇ ಚಿತ್ರರಂಗದಲ್ಲಿ ಅವರು ಬೇಡಿಕೆಯ ನಟರಾಗಿ ಹೊರಹೊಮ್ಮಲಿಲ್ಲ. ಅದಕ್ಕೆ ಕಾರಣ, ಚಿತ್ರಗಳ ಸೋಲು. ಅಭಿಷೇಕ್​ ಒಂದಿಷ್ಟು ಒಳ್ಳೆಯ ಪಾತ್ರಗಳನ್ನು ಮಾಡಿದರೂ, ದೊಡ್ಡದೊಡ್ಡ ನಿರ್ದೇಶಕರ ಜತೆಗೆ ಕೆಲಸ ಮಾಡಿದರೂ, ಅವರ ಚಿತ್ರಗಳ್ಯಾವುವೂ ಬ್ಲಾಕ್​ಬಸ್ಟರ್​ಗಳಾಗಲೇ ಇಲ್ಲ. ಅದೇ ಕಾರಣಕ್ಕೆ ಅಭಿಷೇಕ್​, ಈಗಲೂ ಒದ್ದಾಡುತ್ತಲೇ ಇದ್ದಾರೆ. ಆ ಸೋಲಿಗೆ ನೇರವಾಗಿ ಪುತ್ರಿ ಆರಾಧ್ಯಾ ಕಾರಣ ಎಂದೂ ಅವರು ಹೇಳುತ್ತಾರೆ.

    ಇದನ್ನೂ ಓದಿ: ತಮಿಳು ನಟನ ತಂತ್ರಜ್ಞಾನಕ್ಕೆ ತಲೆಬಾಗಿದ ಕರ್ನಾಟಕ ಉಪ ಮುಖ್ಯಮಂತ್ರಿ

    ಹೌದು, ನಿಜಕ್ಕೂ ಇದು ಶಾಕಿಂಗ್​ ವಿಚಾರ. ಆದರೆ, ಕರಿಯರ್​ನ ಸೋಲನ್ನು ಮಗಳ ಮೇಲೆ ಹೊರಿಸುವುದಕ್ಕೆ ಯಾವುದೇ ಬೇಸರ ಅವರಿಗಿಲ್ಲವಂತೆ. ಹಾಗಾದರೆ ಅಷ್ಟಕ್ಕೂ ಆಗಿದ್ದೇನು? ಅದನ್ನು ಇತ್ತೀಚೆಗಷ್ಟೇ ಅಭಿಷೇಕ್​ ಬಹಿರಂಗವಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
    ‘ನನ್ನ ಸಿನಿಮಾ ಕರಿಯರ್​ನಲ್ಲಿ ನಾನು ಇಲ್ಲಿಯವರೆಗೂ ಇಂಟಿಮೆಷನ್​ ಸೀನ್​ಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಅದು ನನ್ನ ಸಿನಿಮಾ ಜೀವನದ ಪಾಲಿಸಿ. ನನಗೆ ನಾನೇ ಹಾಕಿಕೊಂಡ ಆ ನೀತಿಯೇ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಒಂದಷ್ಟು ಸಿನಿಮಾಗಳನ್ನು ಕೈಬಿಡಲು ಅದರಲ್ಲಿನ ಅಶ್ಲೀಲತೆ ಕಾರಣವಾಗಿತ್ತು. ಆ ಥರಹದ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನನಗೆ ಇಷ್ಟವಿಲ್ಲ. ನನ್ನ ಪುತ್ರಿ ಆರಾಧ್ಯಾ ಅಂಥ ದೃಶ್ಯಗಳನ್ನು ನೋಡಿ ಮುಜುಗರಕ್ಕೊಳಪಡುತ್ತಾಳೆ. ಅವಳನ್ನು ಗಮನದಲ್ಲಿಟ್ಟುಕೊಂಡೇ ನಾನು ಸಿನಿಮಾ ಆಯ್ದುಕೊಳ್ಳುತ್ತೇನೆ. ಮುಜುಗರಪಡುವ ದೃಶ್ಯಗಳು ತೆರೆಮೇಲೆ ಕಂಡರೆ ಇಲ್ಲೇನು ನಡೆಯುತ್ತಿದೆ ಎಂದೂ ಆರಾಧ್ಯಾ ಕೇಳುತ್ತಾಳೆ’ ಎನ್ನುತ್ತಾರೆ ಅಭಿಷೇಕ್​.

    ಇದನ್ನೂ ಓದಿ: ಸುಶಾಂತ್​ ಕರಿಯರ್​ಗೆ ಮಸಿ ಬಳಿಯುವ ಹುನ್ನಾರ!; ತನಿಖೆಯಲ್ಲಿ ಬಯಲಾಯ್ತು ಅಸಲಿ ಕಥೆ

    ಹತ್ತಾರು ಬಗೆಯ ಸಿನಿಮಾಗಳನ್ನು ಅಭಿಷೇಕ್​ ಕೇಳಿದ್ದಾರೆ. ಅವುಗಳಲ್ಲಿ ಹೆಚ್ಚು ಆಪ್ತತೆ ಇರುವ ದೃಶ್ಯಗಳನ್ನು ತೆಗೆಯಲು ಅವಕಾಶ ಇದೆಯಾ ಎಂದು ಕೇಳಿದ್ದರು. ಆದರೆ, ಅದು ಅಸಾಧ್ಯವಾಗದಿದ್ದಾಗ ಆ ಸಿನಿಮಾಗಳಿಂದ ಹೊರಬಂದಿದ್ದರು ಅಭಿಷೇಕ್​. ಆದರೆ, ಇದ್ಯಾವುದರಿಂದ ಅವರು ಒಮ್ಮೆಯೂ ಬೇಸರಿಸಿಕೊಂಡಿಲ್ಲವಂತೆ. ‘ಹೌದು, ನಾನು ಆರಾಮವಾಗಿದ್ದೇನೆ. ಸಿನಿಮಾ ಇಲ್ಲ ಎಂದ ತಕ್ಷಣ ಅದರಿಂದ ನನಗೇನು ಬೇಸರ ಇಲ್ಲ. ನನಗೆ ನನ್ನದೇ ಆದ ಕೆಲಸಗಳಿವೆ. ಅದರಲ್ಲಿಯೇ ನಾನು ತೊಡಗಿಸಿಕೊಳ್ಳುತ್ತೇನೆ’ ಎನ್ನುತ್ತಾರೆ. ಸದ್ಯ ಬ್ರೀಥ್​ ಅನ್ನೋ ವೆಬ್​ ಸಿರೀಸ್​ನಲ್ಲಿ ಅಭಿಷೇಕ್​ ನಟಿಸುತ್ತಿದ್ದಾರೆ (ಏಜೆನ್ಸೀಸ್​)

    40ನೇ ವಯಸ್ಸಲ್ಲಿ ಮೂರನೇ ಮದುವೆ!; ಮೂವರು ಮಕ್ಕಳಿರುವ ಈ ನಟಿಯ ಕಥೆ ಇದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts