More

    VIDEO| ಗೆಲುವಿನ ಭಾವನೆಯನ್ನು ‘ಚಕ್​ ದೇ ಇಂಡಿಯಾ’ ಚಿತ್ರದ ಶಾರುಖ್​​ ವಿಡಿಯೋ ಮೂಲಕ ವ್ಯಕ್ತಪಡಿಸಿದ ಆಪ್!​

    ನವದೆಹಲಿ: ದೆಹಲಿಯ ಗದ್ದುಗೆಯನ್ನು ಮೂರನೇ ಬಾರಿಗೆ ಏರಲು ಆಮ್​ ಆದ್ಮಿ ಪಕ್ಷ ಸಜ್ಜಾಗಿದೆ. ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 28ರಲ್ಲಿ ಜಯ ಸಾಧಿಸಿದ್ದು, 35ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆಯೇ ನಟ ಶಾರುಖ್​​ ಖಾನ್ ಅವರ ವಿಡಿಯೋ ಹರಿಬಿಟ್ಟು​ ವಿಭಿನ್ನವಾಗಿ ಭಾವನೆಯನ್ನು ಆಪ್​ ವ್ಯಕ್ತಪಡಿಸಿದೆ.

    ಮಧ್ಯಾಹ್ನ 2.45ರ ಸುಮಾರಿಗೆ ಟ್ವೀಟ್​ ಮಾಡಿರುವ ಆಪ್​, ಶಾರುಖ್​ ಅಭಿನಯದ ಚೆಕ್​ ದೇ ಇಂಡಿಯಾ ಚಿತ್ರದ ಭಾವನಾತ್ಮಕ ಸನ್ನಿವೇಶದ ವಿಡಿಯೋವೊಂದನ್ನು ಹರಿಬಿಟ್ಟಿದೆ.

    ವಿಡಿಯೋದಲ್ಲಿ ಏನಿದೆ?: ಚಕ್​ ದೇ ಇಂಡಿಯಾ ಚಿತ್ರದಲ್ಲಿ ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಫೈನಲ್​ ಪಂದ್ಯದಲ್ಲಿ ಭಾರತದ ಹಾಕಿ ತಂಡವು ಜಯಿಸಿದಾಗ ಕೋಚ್​ ಶಾರುಖ್​ ತುಂಬಾ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಇದೇ ದೃಶ್ಯವನ್ನು ಎಡಿಟ್​ ಮಾಡಿ ಆಪ್​ ಶೇರ್​ ಮಾಡಿಕೊಂಡಿದ್ದು, ದೆಹಲಿ ಚುನಾವಣೆಯಲ್ಲಿನ ತಮ್ಮ ಗೆಲುವನ್ನು ವ್ಯಕ್ತಪಡಿಸಿದೆ.

    ಸದ್ಯದ ಟ್ರೆಂಟ್​ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಆಪ್​ 63 ಹಾಗೂ ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್​ ಖಾತೆಯನ್ನೇ ತೆರದಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts