ನವದೆಹಲಿ: ಭಾರತೀಯ ಕ್ರಿಕೆಟಿಗರಾದ ದೊಡ್ಡ ಗಣೇಶ್ ಮತ್ತು ಅಭಿನವ್ ಮುಕುಂದ್ ಈಗಾಗಲೆ ವರ್ಣಭೇದದ ಬಗ್ಗೆ ಮಾತನಾಡಿದ್ದರೆ, ಈಗ ಮಾಜಿ ಆರಂಭಿಕ ಆಕಾಶ್ ಚೋಪ್ರಾ ತಮಗೆ ಇಂಗ್ಲೆಂಡ್ ಲೀಗ್ ಕ್ರಿಕೆಟ್‌ನಲ್ಲಿ ಆಡುತ್ತಿದ್ದಾಗ ಜನಾಂಗೀಯ ನಿಂದನೆ ಎದುರಾಗಿತ್ತು ಎಂದು ಹೇಳಿಕೊಂಡಿದ್ದಾರೆ. 2007ರಲ್ಲಿ ಎಂಸಿಸಿ ಪರ ಆಡಿದ್ದ ಆಕಾಶ್ ಚೋಪ್ರಾ, ಆಗ ತಮ್ಮನ್ನು ‘ಪಾಕಿ’ (ದಕ್ಷಿಣ ಏಷ್ಯಾದ ಜನರಿಗೆ ಬ್ರಿಟಿಷರ ನಿಂದನೆ) ಎಂದು ಕರೆಯಲಾಗಿತ್ತು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಇಶಾಂತ್ ಶರ್ಮಗೆ ಸಂಕಷ್ಟ ತಂದ 6 ವರ್ಷ ಹಿಂದಿನ ಇನ್‌ಸ್ಟಾಗ್ರಾಂ ಪೋಸ್ಟ್!
‘ನಾವು (ಕ್ರಿಕೆಟಿಗರು) ಒಂದಲ್ಲ ಒಂದು ಸಮಯದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿರುತ್ತೇವೆ. ನಾನು ಇಂಗ್ಲೆಂಡ್‌ನಲ್ಲಿ ಲೀಗ್ ಕ್ರಿಕೆಟ್ ಆಡುತ್ತಿದ್ದಾಗ ಎದುರಾಳಿ ತಂಡದಲ್ಲಿ ದಕ್ಷಿಣ ಆಫ್ರಿಕಾದ ಇಬ್ಬರು ಎದುರಾಳಿ ತಂಡದಲ್ಲಿದ್ದರು. ನಾನು ನಾನ್-ಸ್ಟ್ರೈಕರ್‌ನಲ್ಲಿದ್ದಾಗ ಅವರು ನನ್ನನ್ನು ಪಾಕಿ ಎಂದು ಕರೆಯುತ್ತಿದ್ದರು. ಪಾಕಿ ಎಂದರೆ ಪಾಕಿಸ್ತಾನದ ಸಂಕ್ಷಿಪ್ತ ರೂಪವಲ್ಲ. ಕಂದು ಚರ್ಮದವರಿಗೆ ಅಂದರೆ ಏಷ್ಯಾ ಉಪಖಂಡದವರಿಗೆ ಇದನ್ನು ಜನಾಂಗೀಯ ನಿಂದನೆಯ ಪದವಾಗಿ ಬಳಸಲಾಗುತ್ತದೆ’ ಎಂದು ವೀಕ್ಷಕವಿವರಣೆ ಕಾರರೂ ಆಗಿರುವ ಆಕಾಶ್ ಚೋಪ್ರಾ ಯುಟ್ಯೂಬ್ ಚಾನಲ್‌ನಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಅಪ್ಪನ ಜನ್ಮದಿನಕ್ಕೆ ದೀಪಿಕಾ ಪಡುಕೋಣೆ ವಿಶೇಷ ಸಂದೇಶ
ಬಣ್ಣ ಮಾತ್ರವಲ್ಲ, ನಂಬಿಕೆಗೂ ಭೇದವಿದೆ
ಜನಾಂಗೀಯ ಭೇದ ಕೇವಲ ಬಣ್ಣದ ವಿಷಯದಲ್ಲಿ ಮಾತ್ರ ನಡೆಯುವುದಿಲ್ಲ, ಧಾರ್ಮಿಕ ನಂಬಿಕೆಗಳಿಂದಾಗಿಯೂ ಭೇದವನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ತಂಡದ ಮಾಜಿ ವೇಗಿ ರ್ಇಾನ್ ಪಠಾಣ್ ಹೇಳಿದ್ದಾರೆ. ‘ಚರ್ಮದ ಬಣ್ಣದ ಕಾರಣದಿಂದಾಗಿ ಮಾತ್ರವಲ್ಲ, ಈಗ ಸಮಾಜದಲ್ಲಿ ಭಿನ್ನವಾದ ಧಾರ್ಮಿಕ ನಂಬಿಕೆಯ ಕಾರಣದಿಂದಾಗಿ ಮನೆಯೊಂದನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇದೂ ಜನಾಂಗೀಯ ಭೇದ ಭಾಗವಾಗಿದೆ’ ಎಂದು ಪಠಾಣ್ ಹೇಳಿದ್ದಾರೆ.
ನನ್ನನ್ನು ಚೈನೀಸ್ ಎನ್ನುತ್ತಾರೆ, ಜ್ವಾಲಾ ಗುಟ್ಟಾ ಜನಾಂಗೀಯ ನಿಂದನೆ ಆರೋಪ