ಬೆಂಗಳೂರು: ಆ ದಿನಗಳು ಚಿತ್ರ ಖ್ಯಾತಿಯ ನಟ ಚೇತನ್ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಫೆಬ್ರವರಿ 2ರಂದು ನಟ ಚೇತನ್ ವಲ್ಲಭ್ ನಿಕೇತನ ವಿನೋಭಾ ಭಾವೆ ಆಶ್ರಮದಲ್ಲಿ, ಸಂಜೆ 6 ಗಂಟೆಗೆ ಅನಾಥಾಶ್ರಮದ ಮಕ್ಕಳು ಹಾಗೂ ವೃದ್ಧರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳುತ್ತಿದ್ದಾರೆ.
ಅಸ್ಸಾಂ ಮೂಲದ ಮೇಘ ಎಂಬುವವರನ್ನು ಇವರು ವಿವಾಹವಾಗುತ್ತಿದ್ದಾರೆ. ಇಬ್ಬರ ನಡುವೆ ಪ್ರೇಮ ಅಂಕುರಿಸಿತ್ತು. ಈಗ ವಿವಾಹವಾಗಲು ಮುಂದಾಗುತ್ತಿದ್ದಾರೆ.
ವಿವಾಹದ ಆಮಂತ್ರಣ ಪತ್ರಿಕೆ ಕೂಡ ಸರಳವಾಗಿ ಮುದ್ರಿಸಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಇದೆ.
ವಿವಾಹದ ಅಂಗವಾಗಿ ವಚನ-ಸೂಫಿ ಗಾಯನ, ಸಿದ್ದಿ, ಲಂಬಾಣಿ, ಕೊರಗ ನೃತ್ಯ ಹಾಗೂ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. (ದಿಗ್ವಿಜಯ ನ್ಯೂಸ್)