More

    ಫಾಲ್ಸ್‌ನಲ್ಲಿ ಕೊಚ್ಚಿ ಹೋದ ಯುವಕ

    ಭದ್ರಾವತಿ: ಪ್ರವಾಸಕ್ಕೆಂದು ತೆರಳಿದ್ದ ತಾಲೂಕಿನ ಅಂತರಗಂಗೆ ಸಮೀಪದ ಕೆ.ಎಚ್.ನಗರ ನಿವಾಸಿ ಶರತ್‌ಕುಮಾರ್(24) ಉಡುಪಿ ಜಿಲ್ಲೆ ಕೊಲ್ಲೂರು ಸಮೀಪದ ಅರಿಶಿಣಗುಂಡಿ ಜಲಾಶಯ ವೀಕ್ಷಿಸುತ್ತಿದ್ದ ವೇಳೆ ಭಾನುವಾರ ಸಂಜೆ ಕಾಲು ಜಾರಿಬಿದ್ದು ಜಲಪಾತದಲ್ಲಿ ಕೊಚ್ಚಿ ಹೋಗಿದ್ದಾನೆ.
    ಕಡದಕಟ್ಟೆಯ ತನ್ನ ಸ್ನೇಹಿತ ಗುರುರಾಜ್ ಎಂಬಾತನೊಂದಿಗೆ ಕಳೆದ ತಿಂಗಳು ಖರೀದಿಸಿದ್ದ ಹೊಸ ಸ್ವ್‌ಟಿ ಕಾರಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಮಾಡಲು ಹೊರಟಿದ್ದ ಶರತ್‌ಕುಮಾರ್ ಕೊಲ್ಲೂರು ಮಾರ್ಗಮಧ್ಯೆ ಇದ್ದ ಅರಿಶಿಣಗುಂಡಿ ಜಲಪಾತ ನೋಡಲು ಕಾರಿನಿಂದ ಇಳಿದಿದ್ದಾನೆ. ಜಲಾಶಯದ ಸಮೀಪವಿದ್ದ ಬಂಡೆಕಲ್ಲಿನ ಮೇಲೆ ನಿಂತು ಜಲಾಶಯ ವೀಕ್ಷಣೆ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದು ಹರಿಯುತ್ತಿದ್ದ ರಭಸದ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
    ಶರತ್ ಜಲಾಶಯದ ಕೆಳಗಿಳಿದು ಬಂಡೆಕಲ್ಲಿನ ಮೇಲೆ ನಿಂತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದ ಆತನ ಗೆಳೆಯ ಗುರುರಾಜ್ ಆತ ಕಾಲು ಜಾರಿ ಬೀಳುವ ಹಾಗೂ ಆ ಕ್ಷಣ ಸ್ನೇಹಿತ ಶರತ್..ಶರತ್… ಎಂದು ಕೂಗಿಕೊಳ್ಳುವ ಸಂಪೂರ್ಣ ಚಿತ್ರಣ ವಿಡಿಯೋದಲ್ಲಿ ಸೆರೆಯಾಗಿದೆ.
    ತಕ್ಷಣ ಗುರುರಾಜ್ ಸಮೀಪದ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಸ್ಥಳೀಯರ ಸಹಕಾರದಿಂದ ಪತ್ತೆ ಮಾಡಿದರೂ ಶರತ್ ಪತ್ತೆ ಸಾಧ್ಯವಾಗಲಿಲ್ಲ. ಅಗ್ನಿಶಾಮಕದಳ, ಅರಣ್ಯ ಇಲಾಖೆ ಸಿಬ್ಬಂದಿ, ಕೊಲ್ಲೂರು ಪೊಲೀಸರು ಸೋಮವಾರ ಬೆಳಗ್ಗಿನಿಂದಲೂ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಈಜುಪಟು ಈಶ್ವರ್ ಮಲ್ಪೆ ಮತ್ತವರ ತಂಡವೂ ಕಾರ್ಯಪ್ರವೃತ್ತವಾಗಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts