More

    VIDEO: ಇದು ಆಕ್ಟೋಪಸ್ಸಾ ಅಥವಾ ಮೀನಾ?: ಟಿಕ್​ಟಾಕ್​ನಲ್ಲಿ ಕಂಡುಬಂತು ವಿಶೇಷ ಪ್ರಾಣಿ

    ಬೆಂಗಳೂರು: ಮನೋರಂಜನೆಗಾಗಿ ಬಳಸಲ್ಪಡುವ ಟಿಕ್​ಟಾಕ್​ ಆ್ಯಪ್​ನಲ್ಲಿ ಆಗಾಗ ವಿಶೇಷ ಎನಿಸುವಂತಹ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅಂತೆಯೇ ಇದೀಗ ವಿಶೇಷವಾದ ಪ್ರಾಣಿಯೊಂದರ ವಿಡಿಯೋ ವೈರಲ್​ ಆಗಿದ್ದು, ಅದು ಮೀನೋ ಅಥವಾ ಅಕ್ಟೋಪಸ್ಸೋ ಎನ್ನುವುದರ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

    ವಿಡಿಯೋದಲ್ಲಿರುವ ಪ್ರಾಣಿ ಮೇಲ್ನೋಟಕ್ಕೆ ಮೀನಿನಂತೆ ಕಾಣುತ್ತದೆ. ಆದರೆ ಬೃಹದಾಕಾರದ ತಲೆ ಹೊಂದಿರುವ ಆ ಪ್ರಾಣಿಗೆ ಆಕ್ಟೋಪಸ್​ನಂತೆಯೇ ಗೃಹಣಾಂಗಗಳು ಇವೆ. ಅಕ್ಟೋಪಸ್​ ಮತ್ತು ಮೀನು ಎರಡಕ್ಕೂ ಹೋಲಿಕೆ ಇರುವಂತಹ ಈ ಪ್ರಾಣಿಯ ವಿಡಿಯೋ ಟಿಕ್​ಟಾಕ್​ನಲ್ಲಿ ಹೆಚ್ಚು ಹೆಚ್ಚು ಜನರಿಂದ ಶೇರ್​ ಆಗುತ್ತಿದೆ. ಇದನ್ನು ಬ್ರೂಕ್ಲಿನ್​ನ ಕೋನಿ ದ್ವೀಪದಲ್ಲಿ ಹಿಡಿಯಲಾಗಿದೆ ಎಂದು ಡೈಲಿ ಮೇಲ್​ ವರದಿ ಮಾಡಿದೆ. ಪ್ರಾಣಿಯ ಬಾಯಿಯಲ್ಲಿ ಮೀನು ಹಿಡಿಯುವ ಗಾಳ ಇರುವುದು ಕಂಡುಬಂದಿದೆ.

    ವಿಡಿಯೋವನ್ನು ನಟಾಲಿಯಾ ವೊರೊಬೊಕ್​ ಎನ್ನುವವರು ಟಿಕ್​ಟಾಕ್​ನಲ್ಲಿ ಹಾಕಿದ್ದು, ವಿಡಿಯೋ ಈಗಾಗಲೇ 16.2 ಮಿಲಿಯನ್​ ವೀಕ್ಷಣೆ ಪಡೆದುಕೊಂಡಿದೆ. 1.4 ಮಿಲಿಯನ್​ ಜನರು ವಿಡಿಯೋಗೆ ಹಾರ್ಟ್​ ಕೊಟ್ಟು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇದು ಒಂದು ವಿಶೇಷ ಪ್ರಾಣಿ ಎಂದು ಅನೇಕರು ಕಮೆಂಟ್​ ಮಾಡಿದ್ದರೆ, ಕೆಲವರು ಇದು ಡೆಮೋಡ್ರಾಗನ್​ ಇರಬಹುದು ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ವೀಕ್ಷಣೆ ಮಾಡಿದ ಒಬ್ಬ ವ್ಯಕ್ತಿ ಇದನ್ನು ಕ್ಲಿಯರ್​ನೋಸ್​ ಸ್ಕೇಟ್​ ಎಂದು ಕರೆದಿದ್ದು, ಇವು ಸಮುದ್ರಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

     

    @natalie1526n#whatisthat #wtf #fyp #animal #ocean #nyc #atlanticocean #coneyisland #fishing

    ♬ Apocalyptic ASMR – kiyohshi

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts