More

    ತನ್ನದೇ ವಾಟ್ಸ್ಯಾಪ್, ಫೇಸ್​ಬುಕ್ ಬಿಟ್ಟು ಸಿಗ್ನಲ್ ಆ್ಯಪ್ ಬಳಸುತ್ತಿರುವ ಮಾರ್ಕ್ ಜುಕರ್​ಬರ್ಗ್​!

    ವಾಷಿಂಗ್ಟನ್: ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್​ಬುಕ್​ ಸಂಸ್ಥಾಪಕ, ಮಾರ್ಕ್​ ಜುಕರ್​ಬರ್ಗ್ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ತಮ್ಮ ಫೇಸ್​ಬುಕ್ ಹಾಗೂ ವಾಟ್ಸ್​ಪ್ ಶೇ 100 ರಷ್ಟು ಸುರಕ್ಷಿತ, ಮೂರನೇ ವ್ಯಕ್ತಿಯೊಂದಿಗೆ ಯಾವುದೇ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದರು ಜುಕರ್​ಬರ್ಗ್​.

    ಆದರೆ, ಇದೀಗ ಇದೇ ಮಾರ್ಕ್​, ತಮ್ಮ ಫೇಸ್​ಬುಕ್ ಖಾತೆಯಿಂದ ತಮ್ಮ ವೈಯಕ್ತಿಕ ಮಾಹಿತಿ ಲೀಕ್ ಆಗಿದೆ ಎಂದು ಮಾಹಿತಿ ವಿನಿಮಯಕ್ಕಾಗಿ ಸಿಗ್ನಲ್ ಆ್ಯಪ್ ಬಳಸುತ್ತಿದ್ದಾರೆ ಎಂಬ ವರದಿಯೊಂದು ಅಚ್ಚರಿ ಮೂಡಿಸಿದೆ.

    ಹೌದು, ಇದು ಅಚ್ಚರಿಯಾದರೂ ನಿಜ ಎನ್ನುತ್ತಿದ್ದಾರೆ ಅಮೆರಿಕದ ಸೈಬರ್ ಭದ್ರತಾ ಸಂಶೋಧಕರು. ಇತ್ತೀಚೆಗೆ ಸುಮಾರು 50 ಕೋಟಿ ಫೇಸ್​ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಹೀಗೆ ಸೋರಿಕೆಯಾದ ಮಾಹಿತಿಯಲ್ಲಿ ಮಾರ್ಕ್​ ಜುಕರ್​ಬರ್ಗ್​ ಅವರದ್ದು ಇದೆ. ಅವರ ಸೋರಿಕೆಯಾದ ಮೊಬೈಲ್​ ನಂಬರ್​ನಿಂದಲೇ ಈಗ ಅವರು ಸಿಗ್ನಲ್ ಆ್ಯಪ್ ಬಳಸುತ್ತಿದ್ದಾರೆ ಎಂದು ಅಮೆರಿಕದ ಸೈಬರ್ ಭದ್ರತಾ ಸಂಶೋಧಕ ಡೇವ್ ವಾಲ್ಕರ್ ಎನ್ನುವರು ಟ್ವೀಟ್​ ಮಾಡುವ ಮೂಲಕ ಹೇಳಿದ್ದಾರೆ.

    ಸಿಗ್ನಲ್ ಆ್ಯಪ್ ಇತ್ತೀಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಅಮೆರಿಕ ಮೂಲದ ಮೊಬೈಲ್ ಆ್ಯಪ್ ಆಗಿದೆ. ಬಳಕೆದಾರರ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿಡಬಲ್ಲದು ಈ ಸಿಗ್ನಲ್ ಆ್ಯಪ್. ವಾಟ್ಸ್​ಪ್ ಕೂಡ ತನ್ನದು end-to-end encryption ಮೆಸೆಂಜರ್ ಎಂದು ಹೇಳಿದರೂ ಕೂಡ ವಾಟ್ಸ್​ಪ್ ಮೇಲೆ ಆಗಾಗ ಆರೋಪಗಳು ಕೇಳಿ ಬರುತ್ತಿವೆ. ಆದರೆ ಸಿಗ್ನಲ್ ಅಪ್ಲಿಕೇಶನ್ ಮೇಲೆ ಜನ ವಿಶ್ವಾಸ ಹೆಚ್ಚಾಗುತ್ತಿದೆ. ಸಿಗ್ನಲ್ ಆ್ಯಪ್ ಬಳಕೆದಾರರು ಮಾತ್ರ ತಮ್ಮ ಮಾಹಿತಿಯನ್ನು ನೋಡಬಹುದಾಗಿದ್ದು, ಬಳಕೆದಾರರ ಖಾಸಗಿ ಮಾಹಿತಿಯನ್ನು ಎರಡನೇ ಅಥವಾ ಮೂರನೇ ವ್ಯಕ್ತಿಗೆ ನೋಡುವ ಅವಕಾಶ ಇಲ್ಲ ಎನ್ನಲಾಗುತ್ತಿದೆ. ಅಂದಹಾಗೇ ಅಂಡ್ರಾಯ್ಡ್​ ಪ್ಲೆ ಸ್ಟೋರ್​ನಲ್ಲಿ ಒಟ್ಟು 50 ಮಿಲಿಯನ್ ಡೌನ್​ಲೋಡ್​ಗಳನ್ನು ಇದು ಕಂಡಿದೆ. (ಕೃಪೆ: ಇಂಡಿಯಾ ಟುಡೇ)

    ಚಲಿಸುತ್ತಿದ್ದ ಆಟೋದಲ್ಲಿ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡ ದುರುಳ!

    68 ಹಲ್ಲುಗಳಿದ್ದರೂ ಮಾಂಸ ಜಗಿಯಲಾಗದ ಮೊಸಳೆ! ಕಾರಣ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts