More

    ಮದ್ವೆ ಸಂಭ್ರಮಕ್ಕೆ ಕೊಳ್ಳಿ ಇಟ್ಟ ಸಾವು: ವರನ ತಂದೆ ಸಾವಿಂದ ಆ ಮದ್ವೆ ನಡೆಯಲಿಲ್ಲ, ಅಜ್ಜಿ ಸಾವಿಂದ ಈ ಮದ್ವೆಯೂ ನಡೆಯುತ್ತಿಲ್ಲ…

    ಭದ್ರಾವತಿ: ಉಜ್ಜನೀಪುರದಲ್ಲಿ ಫೆ.9ರಂದು ಚಪ್ಪರದ ಶಾಸ್ತ್ರ ಮುಗಿಸಿ ಇನ್ನೇನು ಮದುವೆ ಕಲ್ಯಾಣ ಮಂಟಪಕ್ಕೆ ಹೊರಡಬೇಕು ಅನ್ನುವಷ್ಟರಲ್ಲಿ ವರನ ತಂದೆ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದರಿಂದ ಮದುವೆ ಮನೆಯಲ್ಲಿ ಸ್ಮಶಾನಮೌನ ಆವರಿಸಿದ್ದು, ಮದುವೆಯನ್ನ ಮುಂದೂಡಲಾಗಿದೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ಭದ್ರಾವತಿ ನಗರದಲ್ಲಿ ಸಂಭವಿಸಿದ್ದು, ಇನ್ನೊಂದು ಜೋಡಿಯ ಮದುವೆಯನ್ನೂ ಮುಂದೂಡಲಾಗಿದೆ.

    ಭದ್ರವಾತಿ ತಾಲೂಕಿನ ಅಂತರಗಂಗೆ ಗ್ರಾಮದ ವಧುವಿನ ಮದುವೆಯನ್ನು ಕುಮಾರಿ ನಾರಾಯಣಪುರ ಗ್ರಾಮದ ವರನೊಂದಿಗೆ ನಿಶ್ಚಯವಾಗಿತ್ತು. ಇವರಿಬ್ಬರ ಮದುವೆ ಭದ್ರಾವತಿ ನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಇಂದು-ನಾಳೆ (ಫೆ.12 ಮತ್ತು 13) ನಡೆಯಬೇಕಿತ್ತು. ಆದರೆ ಗುರುವಾರ(ಫೆ.10) ತಡರಾತ್ರಿ ವಧುವಿನ ಅಜ್ಜಿ (ತಂದೆಯ ತಾಯಿ) ಲಕ್ಷ್ಮಮ್ಮ (82) ನಾಗಮಂಗಲ ತಾಲೂಕು ಕದಬಳ್ಳಿಯಲ್ಲಿ ನಿಧನರಾದರು. ಪರಿಣಾಮ ಮದುವೆ ಮುಂದೂಡಲ್ಪಟ್ಟಿದೆ. ಶನಿವಾರ ಮದುವೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ ವರನ ಕಡೆಯವರು ಪೇಚಾಡುವಂತಾಗಿದೆ. ಮದುವೆ ನಿಂತಿರುವ ವಿಚಾರವನ್ನ ಸಂಬಂಧಿಕರಿಗೆ ತಿಳಿಸುವುದೇ ದೊಡ್ಡ ಸಮಸ್ಯೆಯಾಗಿದೆ.

    ವರನ ತಂದೆ ಸಾವು: ಭದ್ರಾವತಿ ನಗರದ ಉಜ್ಜನೀಪುರದ ಕೃಷಿಕ ಬೋರೇಗೌಡರ ಮಗನ ಮದುವೆ ಶಿವಮೊಗ್ಗ ಸಿದ್ರಹಳ್ಳಿಯ ಯುವತಿಯೊಂದಿಗೆ ನಿಶ್ಚಯವಾಗಿತ್ತು. ಅದರಂತೆ ಫೆ.9 ಮತ್ತು 10ರಂದು ನಿಗದಿಯಾಗಿದ್ದ ಶಿವಮೊಗ್ಗದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಮದುವೆಗೆ ಎಲ್ಲ ಸಿದ್ಧತೆಯೂ ನಡೆದಿತ್ತು. ಫೆ.9 ರಾತ್ರಿ ಆರತಕ್ಷತೆ, 10ರಂದು ಧಾರಾಮುಹೂರ್ತ ಇತ್ತು. ಮದುವೆ ಚಪ್ಪರದ ಶಾಸ್ತ್ರ ಮುಗಿಸಿ ಇನ್ನೇನು ಕಲ್ಯಾಣ ಮಂಟಪಕ್ಕೆ ಹೋಗಬೇಕು ಎನ್ನುವಷ್ಟರಲ್ಲಿ ವರನ ತಂದೆ ಬೋರೇಗೌಡ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟಿದ್ದರಿಂದ ಮದ್ವೆ ಮುಂದೂಡಲಾಗಿದೆ.

    ಭದ್ರಾವತಿ ತಾಲೂಕಿನಲ್ಲಿ ಒಂದೇ ವಾರದಲ್ಲಿ ಸಾವಿನ ಕಾರಣಕ್ಕೆ 2 ಮದುವೆಯನ್ನು ಮುಂದೂಡಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಗಳು ಶೋಕದಲ್ಲಿ ಮುಳುಗಿವೆ. ಮತ್ತೊಂದು ಪ್ರಕರಣದಲ್ಲಿ ಮದುವೆ ಮುಗಿಸಿಕೊಂಡು ಬೆಂಗಳೂರಿಗೆ ಇಬ್ಬರು ಮಕ್ಕಳು ಮತ್ತು ತಾಯಿಯೊಂದಿಗೆ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿ ಮೂವರು ಕೊನೆಯುಸಿರೆಳೆದಿದ್ದರು.

    ಮದುವೆ ಎಂದರೆ ವರ ಹಾಗೂ ವಧುವಿನ ಎರಡೂ ಕುಟುಂಬಗಳು ಮದುವೆಗೂ ಮುನ್ನ ಹಾಗೂ ನಂತರವೂ ಸಂಭ್ರಮಕ್ಕೆ ಸಾಕ್ಷಿಯಾಗಬೇಕಾದ ಕ್ಷಣಗಳು. ಆದರೆ ಆ ಸುಂದರ ಕ್ಷಣ ಮದುವೆ ಮಾಡುವ, ಮಾಡುತ್ತಿರುವ ಎಲ್ಲ ಕುಟುಂಬಕ್ಕೂ ಅದ್ಹೇಕೋ ಕಾಣಿಸುತ್ತಿಲ್ಲ. ಕೆಲವು ಕುಟುಂಬಗಳಿಗೆ ಮದುವೆ ಮುನ್ನ ಆಘಾತವಾದರೆ, ಮತ್ತೆ ಕೆಲವರಿಗೆ ಮದುವೆ ನಂತರ ಆಘಾತವಾಗುತ್ತಿದೆ.

    ಬೆಂಗಳೂರಿನಿಂದ ನಗರಕ್ಕೆ ಬಂದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುವಾಗ ವರನ ಸಂಬಂಧಿ ಕುಟುಂಬವೊಂದು ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಒಂದು ಪ್ರಕರಣವಾದರೆ, ಮನೆಯ ಮುಂದೆ ಚಪ್ಪರ ಹಾಕಿ ಇನ್ನೇನು ಮದುವೆ ಮನೆಗೆ ತನ್ನ ಮಗನನ್ನು ಕರೆದುಕೊಂಡು ಆರತಕ್ಷತೆಯಲ್ಲಿ ಪಾಲ್ಗೊಳ್ಳಬೇಕಾದ ಸಂದರ್ಭದಲ್ಲಿ ವರನ ತಂದೆ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದು, ನಡೆಯಬೇಕಾದ ಮದುವೆ ಮುಂದೂಡಲ್ಪಟ್ಟಿದ್ದು ಎರಡನೇ ಪ್ರಕರಣವಾಗಿದೆ. ಇದೀಗ ವಧುವಿನ ಅಜ್ಜಿ ಸಾವಿನಿಂದ ಮದುವೆ ಮುಂದಕ್ಕೆ ಹೋಗಿದೆ.

    ಮದ್ವೆ ಮಂಟಪಕ್ಕೆ ಹೊರಡುವ ಮುನ್ನವೇ ವರ ಮನೆಯಲ್ಲಿ ದುರಂತ: ಅಯ್ಯೋ ವಿಧಿಯೇ ಇನ್ನೊಂದು ದಿನ ಬಿಡಬಾರದಿತ್ತೇ…

    ಅಪ್ಪು ಆಗಮನಕ್ಕಾಗಿ ಕಾಯುತ್ತಿದೆ ಹಿರಿಯ ಜೀವ! ಪುನೀತ್​ ಅಗಲಿರುವ ವಿಷಯವೇ ಗೊತ್ತಿಲ್ಲ… ಮನಕಲಕುತ್ತೆ ಈ ಸ್ಟೋರಿ

    ಯೋಗ ಕ್ಲಾಸ್​​ನಲ್ಲಿ ಪರಪುರಷನ ಜತೆ ಲವ್ವಿಡವ್ವಿ! ಪತ್ನಿಯ ಈ ಅಸಹ್ಯ ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts