More

    ಜೈಲು ಅಧಿಕಾರಿಗಳಿಗೆ ಹೆದರಿ ಮೊಬೈಲ್​ ನುಂಗಿದ ಕೈದಿ! ತಿಹಾರ್​ ಜೈಲಿನಲ್ಲಿ ಮೊಬೈಲ್ ಸೃಷ್ಟಿಸಿದ​ ಅವಾಂತರ ಅಷ್ಟಿಷ್ಟಲ್ಲ

    ಹೊಸದಿಲ್ಲಿ: ಮೊಬೈಲ್​ ಬಳಸಿ ತಪ್ಪು ಮಾಡಿ ಸಿಕ್ಕಿ ಬೀಳುವ ಭಯದಲ್ಲಿ ಅಬ್ಬಬ್ಬಾ ಅಂದ್ರೆ ಏನು ಮಾಡ್ತಾರೆ? ಮೊಬೈಲ್​ ಅನ್ನು ಸುಟ್ಟು ಹಾಕ್ಬೋದು, ಟಾಯ್ಲೆಟ್​ನ ಪಿಟ್​ಗುಂಡಿಗೆ ದೂಡಬಹುದು, ಕೆರೆಗೋ-ಬಾವಿಗೋ ಎಸೆದು ಸಾಕ್ಷ್ಯ ನಾಶ ಮಾಡೋಕೆ ಯತ್ನಿಸಬಹುದು… ಆದರೆ ಇಲ್ಲೊಬ್ಬ ಭೂಪ ಆ ಮೊಬೈಲ್​ ಅನ್ನೇ ನುಂಗಿದ್ದಾನೆ!

    ಹೌದು, ಇಂತಹ ವಿಚಿತ್ರ ಘಟನೆ ಬುಧವಾರ ತಿಹಾರ್ ಸೆಂಟ್ರಲ್ ಜೈಲಿನಲ್ಲಿ ಸಂಭವಿಸಿದೆ. ಜೈಲಿನಲ್ಲಿ ಮೊಬೈಲ್​ ಬಳಕೆ ನಿಷಿದ್ಧ. ಹಾಗಿದ್ದರೂ ಪ್ರಭಾವ ಬಳಸಿ ಕೈದಿಗಳು ಕದ್ದು-ಮುಚ್ಚಿ ಮೊಬೈಲ್​ ಬಳಕೆ ಮಾಡುತ್ತಿದ್ದ ಮಾಹಿತಿ ಮೇರೆಗೆ ಜೈಲಾಧಿಕಾರಿಗಳು ತಪಾಸಣೆಗೆ ಬಂದರು. ಆ ವೇಳೆ ಸಿಕ್ಕಿ ಬೀಳುವ ಭಯದಲ್ಲಿ ಕೈದಿಯೊಬ್ಬ ಮೊಬೈಲ್​ ಅನ್ನೇ ನುಂಗಿಬಿಟ್ಟಿದ್ದಾನೆ.

    ಕೂಡಲೇ ಆತನನ್ನು ಜೈಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಆರೋಗ್ಯ ಸ್ಥತಿ ಕ್ಷೀಣಿಸುತ್ತಿತ್ತು. ನಂತರ ಕೈದಿಯನ್ನು ದೀನ್​ ದಯಾಳ್​ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತ ನುಂಗಿದ್ದು, ಸಣ್ಣ ಗಾತ್ರದ ಮೊಬೈಲ್​ ಆಗಿದ್ದು, ಹೊರ ತೆಗೆಯಲು ಎಷ್ಟೇ ಯತ್ನಿಸಿದರೂ ಪ್ರಯೋಜನವಾಗಿಲ್ಲ. ಈತನ ಆರೋಗ್ಯ ಸ್ಥಿತಿ ಹದಗೆಡುತ್ತಲೇ ಇದೆ. ಕೊನೆ ಶಸ್ತ್ರ ಚಿಕಿತ್ಸೆ ಮೂಲಕ ಮೊಬೈಲ್​ ಹೊರ ತೆಗೆಯಲು ವೈದ್ಯರು ಮುಂದಾಗಿದ್ದಾರೆ.

    ಘಟನೆ ನಡೆದು 24 ಗಂಟೆ ಕಳೆದರೂ ಕೈದಿಯ ಹೊಟ್ಟೆಯಲ್ಲಿದ್ದ ಮೊಬೈಲ್ ತನ್ನಿಂದ ತಾನೇ ಹೊರ ಬಂದಿಲ್ಲ. ಶಸ್ತ್ರಚಿಕಿತ್ಸೆ ಅನಿವಾರ್ಯವಾದರೆ ವೈದ್ಯರು ಮಾಡಲಿದ್ದಾರೆ ಎಂದು ತಿಹಾರ್ ಕೇಂದ್ರ ಕಾರಾಗೃಹದ ಡಿಜಿ ಸಂದೀಪ್ ಗೋಯಲ್ ತಿಳಿಸಿದ್ದಾರೆ.

    ನಾನು ಜೀವಂತವಾಗಿ ವಾಪಸ್​ ಬರಲು ಸಹಕರಿಸಿದ್ದಕ್ಕೆ ಥ್ಯಾಂಕ್ಸ್​: ಪಂಜಾಬ್​ ಸಿಎಂಗೆ ಪ್ರಧಾನಿ ಟಾಂಗ್​

    ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

    ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಗುಸುಗುಸು ಸ್ಫೋಟ! ಕೆಟ್ಟ ನನ್ಮಗ, ಇವನಿಂದ ಜಿಲ್ಲೇಲಿ ಒಂದು ಸೀಟ್ ಬರೋಲ್ಲ…

    ಹಾಸನದಲ್ಲಿ ಮಟಮಟ ಮಧ್ಯಾಹ್ನವೇ ಮಾಜಿ ಸಚಿವರನ್ನ ಬೆನ್ನಟ್ಟಿ ಹಿಡಿದ ಅಂತಾರಾಜ್ಯ ಪೊಲೀಸರು! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts