More

    ವಿದ್ಯಾರ್ಥಿನಿ ದತ್ತು ಪಡೆದ ವರ್ತಕ

    ಕಲಾದಗಿ: ಸಮೀಪದ ಚಿಕ್ಕಶೆಲ್ಲಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಟಚ್ ನೀಡಲು ಬಾಗಲಕೋಟೆಯ ಜಾಲವಾದಿ ಪೇಂಟ್ಸ್ ಆ್ಯಂಡ್ ಹಾರ್ಡ್‌ವೇರ್ ಅಂಗಡಿ ಅವರು ದಾನದ ರೂಪದಲ್ಲಿ ಅಂದಾಜು ಎರಡು ಲಕ್ಷ ರೂ. ಮೌಲ್ಯದ ಬಣ್ಣ ಹಾಗೂ ಪ್ರತಿಭಾವಂತ ಮಕ್ಕಳಿಗೆ ವಿತರಿಸಲು 10 ಸಾವಿರ ರೂ. ನೀಡಿದ್ದಾರೆ.

    ಶಾಲೆಯಲ್ಲಿ ಬುಧವಾರ ನಡೆದ ಚೆಕ್ ಹಸ್ತಾಂತರ ಕಾರ್ಯಕ್ರಮದಲ್ಲಿ ಜಾಲವಾದಿ ಪೇಂಟ್ಸ್ ಆ್ಯಂಡ್ ಹಾರ್ಡ್‌ವೇರ್ ಅಂಗಡಿ ಮಾಲೀಕ ಅಶೋಕ ಜಾಲವಾದಿ ಮಾತನಾಡಿ, ಗ್ರಾಮೀಣ ಮಕ್ಕಳು ಶೈಕ್ಷಣಿಕ ಸೌಲಭ್ಯಗಳಿಂದ ವಂಚಿತಗೊಳ್ಳಬಾರದು. ಅವರು ಕಲಿಯುವ ಸರ್ಕಾರಿ ಶಾಲೆಯಲ್ಲಿ ಉತ್ತಮ ವಾತಾವರಣ ಇರಬೇಕು ಎಂಬ ನಮ್ಮ ಆಸೆ ಈಡೇರಿಕೆಗಾಗಿ ಚಿಕ್ಕಶೆಲ್ಲಿಕೇರಿ ಶಾಲೆಗೆ ಬಣ್ಣವನ್ನು ದಾನವಾಗಿ ಹಾಗೂ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಲು 10 ಸಾವಿರ ರೂ. ನೀಡಿರುವುದಾಗಿ ತಿಳಿಸಿದರು.

    ಶಾಲೆ ವಿದ್ಯಾರ್ಥಿನಿ ನಂದಾ ಪಾವ್ಲೆಯನ್ನು ದತ್ತು ಪಡೆದು ಅಕೆಯ ಭವಿಷ್ಯದ ಶೈಕ್ಷಣಿಕ ಖರ್ಚು ವೆಚ್ಚವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    ಕಾರ್ಯಕ್ರಮಧ ಸಾನ್ನಿಧ್ಯ ವಹಿಸಿದ್ದ ಅಡಿವೆಪ್ಪ ಶಾಸಿಗಳು ಮಾತನಾಡಿ, ಶಿಕ್ಷಣಕ್ಕಾಗಿ ನೀಡುವ ದಾನಕ್ಕೆ ಬಹಳ ಮಹತ್ವವಿದೆ. ಗ್ರಾಮೀಣ ಮಕ್ಕಳ ಶಿಕ್ಷಣ ಕಾಳಜಿ ಹೊಂದಿರುವ ಜಾಲವಾದಿ ಅವರ ಕಾರ್ಯ ಶ್ಲಾಘನೀಯ. ಉಳ್ಳವರು ಇಂಥ ಸೇವೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.

    ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ರಮೇಶ ತಳವಾರ, ಊರಿನ ಪ್ರಮುಖರಾದ ಯಲ್ಲಪ್ಪ ಗಾಣಿಗೇರ, ಎಂ.ಜಿ.ಕರಣಿ, ವೆಂಕಣ್ಣ ದೊಡಮನಿ, ರಾಮಣ್ಣ ಕಟಗೇರಿ, ಮುಖ್ಯಗುರು ವೈ.ಎಚ್.ವಗ್ಯಾನವರ, ಶಿಕ್ಷಕ ಎಚ್.ಬಿ.ಹಾಲಿಗೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts