More

    ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರಿನಲ್ಲಿ ವಿಶೇಷ ಕರೊಕೆ ಗಾಯನ ಸ್ಪರ್ಧೆ

    ಮೈಸೂರು: ಸ್ವರಲೋಕ ಸಾಂಸ್ಕೃತಿಕ ಕಲಾ ವೇದಿಕೆಯಿಂದ ಮಾ.24ರಂದು ವಿಶ್ವ ಮಹಿಳಾ ದಿನಾಚರಣೆ ಹಾಗೂ ವಿಶೇಷ ಕರೊಕೆ ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.
    ನಗರದ ಪುರಭವನದಲ್ಲಿ ಅಂದು ಬೆಳಗ್ಗೆ 9ಕ್ಕೆ ಆಯೋಜಿಸಿರುವ ಕಾರ್ಯಕ್ರಮಕ್ಕೆ ಚಿತ್ರನಟಿ ರೇಖಾದಾಸ್ ಚಾಲನೆ ನೀಡಲಿದ್ದು, ತೀರ್ಪುಗಾರರಾಗಿ ಗಾಯಕಿ ಜೋಗಿ ಸುನೀತಾ ಭಾಗವಹಿಸಲಿದ್ದಾರೆ. ಸ್ವರಲೋಕ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷೆ ಯಶಸ್ವಿನಿ ಲೋಕೇಶ್ವರ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಸುಮಾರು 45ರಿಂದ 50 ಜನ ರಾಜ್ಯದ ವಿವಿಧ ಜಿಲ್ಲೆಗಳಿಂದ ಗಾಯಕ, ಗಾಯಕಿಯರು ವಿಶೇಷ ಕರೋಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಿಜೇತರಿಗೆ ಚಿನ್ನದ ಹಾಗೂ ಬೆಳ್ಳಿ ನಾಣ್ಯಗಳನ್ನು ವಿತರಿಸಿ, ಗೌರವಿಸಲಾಗುವುದು.
    ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈದ್ಯೆ ಡಾ.ರೇಖಾ ಅರುಣ್, ಸಮಾಜ ಸೇವಾ ಕ್ಷೇತ್ರದಲ್ಲಿ ನಳಿನಿ ತಮ್ಮಯ್ಯ, ಆರಕ್ಷಕ ಸೇವಾ ಕ್ಷೇತ್ರದಲ್ಲಿ ಇನ್ಸ್‌ಪೆಕ್ಟರ್ ಮಮತಾ, ಧನಲಕ್ಷ್ಮಿ, ಶುಶ್ರೂಶಕಿ ಕ್ಷೇತ್ರದಲ್ಲಿ ಕೆ.ಕೆ.ಯಶೋದಾ, ರಂಗಭೂಮಿ ಕಲಾವಿದರ ಕ್ಷೇತ್ರದಲ್ಲಿ ಮೇರಿ ವಸಂತ್, ಶಿಕ್ಷಣ ಕ್ಷೇತ್ರದಲ್ಲಿ ಸಹಾಯಕ ಪ್ರಾಧ್ಯಾಪಕಿ ಪ್ರಿಯಾಂಕಾ ಶೆಣೈ ಅವರನ್ನು ಗೌರವಿಸಲಾಗುವುದು. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಮಾಹಿತಿಗೆ ಮೊಬೈಲ್ 9663661646 ಅಥವಾ 9343056766 ಸಂಪರ್ಕಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಪ್ರಿಯಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts