More

    ಸಿಎಸ್​ಕೆಗೆ ಇಂದು ಸೂಪರ್​ಜೈಂಟ್ಸ್​ ಚಾಲೆಂಜ್​: ಋತುರಾಜ್​ ಪಡೆಗೆ ಹ್ಯಾಟ್ರಿಕ್​ ಗೆಲುವಿನ ಹಂಬಲ

    ಲಖನೌ:ಹ್ಯಾಟ್ರಿಕ್​ ಗೆಲುವಿನ ನಂತರ ಸತತ 2 ಪಂದ್ಯಗಳಲ್ಲಿ ಸೋಲು ಅನುಭವಿಸಿ ಲಯ ತಪ್ಪಿರುವ ಆತಿಥೇಯ ಲಖನೌ ಸೂಪರ್​ ಜೈಂಟ್ಸ್​ ತಂಡ ಐಪಿಎಲ್​&17ರಲ್ಲಿ ಶುಕ್ರವಾರ ಹಾಲಿ ಚಾಂಪಿಯನ್​ ಚೆನ್ನೆ$ ಸೂಪರ್​ ಕಿಂಗ್ಸ್​ ಸವಾಲು ಎದುರಿಸಲಿದೆ. ಏಕನಾ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕನ್ನಡಿಗ ರಾಹುಲ್​ ಪಡೆ ಜಯದ ಹಳಿಗೇರುವ ತವಕದಲ್ಲಿದೆ. ಋತುರಾಜ್​ ಗಾಯಕ್ವಾಡ್​ ಬಳಗ ಹ್ಯಾಟ್ರಿಕ್​ ಗೆಲುವು ಬಾರಿಸುವ ಹಂಬಲದಲ್ಲಿದೆ.
    ಸತತ ಎರಡು ಪಂದ್ಯ ಗೆದ್ದು ಬೀಗುತ್ತಿರುವ ಸಿಎಸ್​ಕೆ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು, 2 ಸೋಲಿನೊಂದಿಗೆ 8 ಅಂಕ ಕಲೆಹಾಕಿದೆ. ಇತ್ತ ಲಖನೌ ತಂಡ ಆಡಿರುವ 6 ಪಂದ್ಯಗಳಲ್ಲಿ 3 ಗೆಲುವು, 3 ಸೋಲು ಅನುಭವಿಸಿ 6 ಪಾಯಿಂಟ್​ ಹೊಂದಿದೆ. ತವರಿನಲ್ಲಿ ಸತತ 13 ಪಂದ್ಯಗಳಲ್ಲಿ 160 ಪ್ಲಸ್​ ರನ್​ ರಸಿಕೊಂಡಿದ್ದ ಲಖನೌ, ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಮುಗ್ಗರಿಸಿತು. ಬೌಲಿಂಗ್​ಗೆ ನೆರವು ನೀಡುವ ಪಿಚ್​ನಲ್ಲಿ ಎರಡು ತಂಡಗಳ ಬಲ ಪ್ರದರ್ಶನಕ್ಕೆ ಪಂದ್ಯ ಸಾಯಾಗಲಿದೆ.

    ಅಸ್ಥಿರ ಬ್ಯಾಟಿಂಗ್​ ಪ್ರದರ್ಶನ: ಹಾಲಿ ಟೂರ್ನಿಯಲ್ಲಿ ಲಖನೌ ತಂಡದ ಬ್ಯಾಟಿಂಗ್​ ವಿಭಾಗ ನಿರೀತ ಆಟ ಪ್ರದರ್ಶಿಸಿಲ್ಲ. ಕ್ವಿಂಟನ್​ ಡಿಕಾಕ್​ ರನ್​ ಬರ ಎದುರಿಸುತ್ತಿದ್ದು, ನಾಯಕ ರಾಹುಲ್​ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ಎಡವಿದ್ದಾರೆ. ಟಿ20 ವಿಶ್ವಕಪ್​ಗೆ ಟೀಮ್​ ಇಂಡಿಯಾದಲ್ಲಿ ವಿಕೆಟ್​ ಕೀಪರ್​ ಸ್ಥಾನಕ್ಕೆ ಐಪಿಎಲ್​ ಪ್ರದರ್ಶನ ಪ್ರಮುಖ ಎನಿಸಿದ್ದು, ರಾಹುಲ್​ ಮೇಲೆ ಹೆಚ್ಚಿನ ಒತ್ತಡ ತಂದಿದೆ. ದೇವದತ್​ ಪಡಿಕ್ಕಲ್​, ದೀಪಕ್​ ಹೂಡಾ ಇಬ್ಬರು ಬ್ಯಾಟರ್​ಗಳ ವೈಲ್ಯ ಪ್ರಮುಖ ಹಿನ್ನಡೆ ಎನಿಸಿದೆ. ನಿಕೋಲಸ್​ ಪೂರನ್​ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರ ಸ್ತಂಭವಾಗಿದ್ದಾರೆ. ಮಾರ್ಕಸ್​ ಸ್ಟೋಯಿನಿಸ್​ ಸಹ ನಿರೀತ ಆಟವಾಡಿಲ್ಲ. ಗಾಯದಿಂದ ಕಳೆದೆರಡು ಪಂದ್ಯ ತಪ್ಪಿಸಿಕೊಂಡಿದ್ದ ಮಯಾಂಕ್​ ಯಾದವ್​ ಮರಳಿ ಕಣಕ್ಕಿಳಿಯುವ ಸಾಧ್ಯತೆಗಳಿದ್ದು, ಬೌಲಿಂಗ್​ ಬಲ ಹೆಚ್ಚಿಸಿದೆ. ರವಿ ಬಿಷ್ಣೋಯಿ 4 ವಿಕೆಟ್​ ಪಡೆದಿದ್ದಾರೆ. ಸಿಎಸ್​ಕೆಯ ಶಿವಂ ದುಬೆ ಎದುರು ಕಠಿಣ ಪರೀೆ ಎದುರಾಗಲಿದೆ.

    ದುಬೆ, ಜಡೇಜಾ ಬಲ: ಏಕನಾ ಕ್ರೀಡಾಂಗಣ ಸ್ಪಿನ್ನರ್​ಗಳಿಗೆ ಹೆಚ್ಚಿನ ನೆರವು ಒದಗಿಸಲಿದ್ದು, ಸಿಎಸ್​ಕೆ ತಂಡದ ರವೀಂದ್ರ ಜಡೇಜಾ ಅಪಾಯಕಾರಿ ಎನಿಸಿದ್ದಾರೆ. ಅದೇ ರೀತಿ ಸ್ಪಿನ್ನರ್​ಗಳ ಎದುರು ಸರಾಗವಾಗಿ ಬ್ಯಾಟಿಂಗ್​ ನಡೆಸುವ ಶಿವಂ ದುಬೆ ಉತ್ತಮ ಾಮ್​ರ್ನಲ್ಲಿದ್ದು, ಇಂಪ್ಯಾಕ್ಟ್​ ಪ್ಲೇಯರ್​ ಆಗಿ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ನಾಯಕ ಋತುರಾಜ್​, ಡೆರಿಲ್​ ಮಿಚೆಲ್​ ಸಹ ಾಮ್​ರ್ನಲ್ಲಿದ್ದಾರೆ. ಗಾಯಾಳು ಅಜಿಂಕ್ಯ ರಹಾನೆ, ರಚಿನ್​ ರವೀಂದ್ರ ಆರಂಭಿಕ ಪಂದ್ಯಗಳ ಬಳಿಕ ಮಂಕಾಗಿದ್ದಾರೆ. ಎಂಎಸ್​ ಧೋನಿ ಫಿನಿಶರ್​ ಪಾತ್ರದಲ್ಲಿ ಮಿಂಚಿದ್ದು, ಸಿಎಸ್​ಕೆ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಸ್ತಾಫಿಜುರ್​ ರೆಹಮಾನ್​, ಮಥೀಶ ಪಥಿರಣ ಲಖನೌ ಬ್ಯಾಟರ್​ಗಳಿಗೆ ಸವಾಲೊಡ್ಡಲಿದ್ದು, ಹೆಚ್ಚುವರಿ ಸ್ಪಿನ್ನರ್​ಗಳ ಆಯ್ಕೆಯೂ ಸಿಎಸ್​ಕೆ ಬಲ ಹೆಚ್ಚಿಸಿದೆ.

    ಮುಖಾಮುಖಿ: 3
    ಸಿಎಸ್​ಕೆ: 1
    ಲಖನೌ: 1
    ರದ್ದು: 1
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts