More

    ಹವ್ಯಕ ಪ್ರತಿಭೆ ತಿಳಿಸುವ ‘ಪ್ರತಿಬಿಂಬ’

    ಸಿದ್ದಾಪುರ: ಭೂತಕಾಲದ ಪ್ರತಿಬಿಂಬ ವರ್ತಮಾನಕಾಲದಲ್ಲಿದೆ. ವರ್ತಮಾನದ ಪ್ರತಿಬಿಂಬ ಭವಿಷ್ಯವನ್ನು ತಿಳಿಸುತ್ತದೆ. ಹವ್ಯಕ ಪ್ರತಿಭೆ ಹೇಗಿತ್ತು ಎನ್ನುವುದನ್ನು ಪ್ರತಿಬಿಂಬ ತಿಳಿಸುತ್ತದೆ ಎಂದು ಹಿರಿಯ ವಿದ್ವಾಂಸ ಪೊ›. ಗಂಗಾಧರ ಭಟ್ಟ ಅಗ್ಗೆರೆ ಮಣ್ಣಿಕೊಪ್ಪ ಹೇಳಿದರು.

    ತಾಲೂಕಿನ ಭಾನ್ಕುಳಿಯ ಗೋಸ್ವರ್ಗದಲ್ಲಿ ಅಖಿಲ ಹವ್ಯಕ ಮಹಾಸಭಾ ಭಾನುವಾರ ಆಯೋಜಿಸಿದ್ದ ಸಿದ್ದಾಪುರ ಪ್ರಾಂತ್ಯದ ಸ್ಪರ್ಧಾ ಕಾರ್ಯಕ್ರಮ ಪ್ರತಿಬಿಂಬ ಉದ್ಘಾಟಿಸಿ ಅವರು ಮಾತನಾಡಿದರು.

    ಹವ್ಯಕರ ಹಾದಿ ಧೈರ್ಯ, ಸ್ಥೈರ್ಯದಿಂದ ಸಮ್ಮಿಳಿತವಾಗಿದೆ. ಹೀಗಾಗಿಯೇ ಸಿದ್ದಾಪುರದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಹಸ್ರಾರು ಹವ್ಯಕ ಪುರುಷರ ಜತೆ ನೂರಾರು ಮಾತೆಯರೂ ತೊಡಗಿಕೊಂಡು ಕೆಚ್ಚೆದೆ ಮೆರೆದಿದ್ದು ಸರ್ವಕಾಲಿಕ ದಾಖಲೆ.

    ಕಂಠಪಾಠವನ್ನು ಗಿಳಿಪಾಠ ಎಂದು ಆಧುನಿಕ ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ, ಕಂಠಪಾಠ ಸಮನ್ವಯತೆಯನ್ನು, ಸ್ವಾವಲಂಬಿ ಜೀವನ ವಿಧಾನವನ್ನೂ ಕಲಿಸುತ್ತದೆ. ಎರಡು ಸಾವಿರ ಪುಟಗಳ, 32 ಸಂಪುಟಗಳ ಋಗ್ವೇದವನ್ನು ಕಂಠಪಾಠ ಮಾಡಿ ಒಪ್ಪಿಸಿದ ಹಿರಿಮೆ ಭಾರತೀಯರಿಗಿದೆ.

    ಇಂದು ಗ್ರಂಥಗಳನ್ನು ಸುಡಿ ಎನ್ನುವವರಿಗೆ ಇದು ತಕ್ಕ ಉತ್ತರ ನೀಡುತ್ತದೆ. ಭಗವಂತನ ಕ್ರೀಡೆಯೇ ಜಗತ್ತು. ಕ್ರೀಡೆ ಸೋಲನ್ನು ಪ್ರಾಂಜಲವಾಗಿ ಸ್ವೀಕರಿಸುವ ಮನೋಭಾವ ಕಲಿಸುತ್ತದೆ. ಭಾರತೀಯ ಕ್ರೀಡೆ ಬದುಕನ್ನು ಎದುರಿಸುವ ತರಬೇತಿ ನೀಡುತ್ತದೆ ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾ ಉಪಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಮಾತನಾಡಿ, ಹವ್ಯಕ ಸಮಾಜ ಸಂಖ್ಯೆಯ ದೃಷ್ಟಿಯಿಂದ ಚಿಕ್ಕದಾದರೂ ಪ್ರಪಂಚದಾದ್ಯಂತ ಪಸರಿಸಿ ತನ್ನ ಛಾಪು ಮೂಡಿಸಿದೆ. ಪರಧರ್ಮ ಸಹಿಷ್ಣತೆಗೆ ಹವ್ಯಕರು ಪ್ರಥಮ ಸ್ಥಾನದಲ್ಲಿದ್ದಾರೆ. ಹವ್ಯಕರ ಉಡುಗೆ, ತೊಡುಗೆ, ಆಚಾರ, ವಿಚಾರ, ವ್ಯವಹಾರ ವಿಶಿಷ್ಟವಾಗಿದ್ದು, ನಮ್ಮ ಶ್ರೇಷ್ಠವಾದ ವಂಶವಾಹಿನಿಯನ್ನು ಕಾಯ್ದುಕೊಂಡು ಹೋಗಬೇಕಾಗಿದೆ. ಹವ್ಯಕರಲ್ಲಿ ಪ್ರತಿಭೆಗಳು ಸಾಕಷ್ಟಿದ್ದರೂ ವೇದಿಕೆ ದೊರೆಯುವುದಿಲ್ಲ. ಇಂತಹ ಕಾರ್ಯಕ್ರಮಗಳಿಂದ ಪ್ರತಿಭೆ ಅನಾವರಣವಾಗುತ್ತದೆ ಎಂದರು

    ಗೋಸ್ವರ್ಗ ಸಂಸ್ಥಾನದ ಅಧ್ಯಕ್ಷ ಎಂ.ಜಿ. ರಾಮಚಂದ್ರ ಮರ್ಡಮನೆ, ಸರ್ವಸಂಯೋಜಕ ಶಾಂತಾರಾಮ ಹಿರೇಮನೆ, ಹವ್ಯಕ ನಿರ್ದೇಶಕ ಜಿ.ಎಂ. ಭಟ್ಟ ಗಾಜಿನಮನೆ, ಹವ್ಯಕ ಸದಸ್ಯತ್ವ ಅಭಿಯಾನದ ಜಿ.ಜಿ. ಹೆಗಡೆ ಬಾಳಗೋಡ ಉಪಸ್ಥಿತರಿದ್ದರು.

    ಈ ಸಂದರ್ಭದಲ್ಲಿ ಪಾಕಶಾಸ್ತ್ರ ಪ್ರವೀಣ ತಾರಗೋಡ ಸುಬ್ರಾಯ ಹೆಗಡೆ ಆಲಳ್ಳಿ ಅವರನ್ನು ಹವ್ಯಕ ಮಹಾಸಭಾ ವತಿಯಿಂದ ಸನ್ಮಾನಿಸಲಾಯಿತು.

    ಹವ್ಯಕ ಕಾರ್ಯದರ್ಶಿ ಆದಿತ್ಯ ಕಲಗಾರು ಸ್ವಾಗತಿಸಿದರು. ಸಂಚಾಲಕ ಗಣಪತಿ ಹೆಗಡೆ ಗುಂಜಗೋಡ ವಂದಿಸಿದರು. ಸ್ನೇಹಾ ಆದಿತ್ಯ ಹೆಗಡೆ ಮಗೇಗಾರು ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts