More

    ಹುಣಸೋಡು ಸ್ಫೋಟ ಮರು ತನಿಖೆ

    ಶಿವಮೊಗ್ಗ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಹುಣಸೋಡು ಕ್ವಾರಿ ಸ್ಫೋಟ ಪ್ರಕರಣದ ಮರುತನಿಖೆಗೆ ಹೈಕೋರ್ಟ್ ಆದೇಶಿಸಿದ್ದು ಸಿಇಎನ್ ಠಾಣೆ ಬದಲು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ತನಿಖೆ ನಡೆಸಲು ಆದೇಶ ಮಾಡಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಸೂಚಿಸಿದೆ.

    2021ರ ಜ.21ರಂದು ರಾತ್ರಿ ನಗರದ ಹೊರವಲಯದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಸೈಬರ್ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ ಪ್ರಕರಣದ ಆರೋಪಿ ಆಂಧ್ರಪ್ರದೇಶದ ಮಂಜುನಾಥ್ ಸಾಯಿ ತನಿಖೆ ವಿಧಾನ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ 2022ರ ನವೆಂಬರ್‌ನಲ್ಲಿ ಅರ್ಜಿ ಸಲ್ಲಿಸಿ ಕೇಸ್ ವಜಾಗೊಳಿಸುವಂತೆ ಕೋರಿದ್ದರು.
    ಮಂಜುನಾಥ್ ಸಾಯಿ ಹೈಕೋರ್ಟ್‌ನಲ್ಲಿ ಎತ್ತಿರುವ ಪ್ರಶ್ನೆಗೆ ಕಾಕತಾಳೀಯ ಎಂಬಂತೆ ನ.8ರಂದು ಹುಣಸೋಡು ಪ್ರಕರಣದ ಕೇಸ್ ಶಿವಮೊಗ್ಗದ ಸಿಇಎನ್ ಠಾಣೆಯಿಂದ ಗ್ರಾಮಾಂತರ ಠಾಣೆಗೆ ಶಿಫ್ಟ್ ಆಗಿದೆ. ಸಿಇಎನ್ ಠಾಣೆಯ ಬಗ್ಗೆ ಸಲ್ಲಿಸಿದ ರಿಟ್ ಅರ್ಜಿಯನ್ನು ಕೂಲಂಕುಶವಾಗಿ ಪರಿಶೀಲಿಸಿದ ನ್ಯಾಯಾಧೀಶರು, ಸರ್ಕಾರಕ್ಕೆ ನೋಟಿಸ್ ನೀಡಿ ಸಂಬಂಧಿಸಿದ ದಾಖಲೆ ಕೇಳಿದ್ದರು. ಆದರೆ ಸರ್ಕಾರದ ಬಳಿ ಸಿಇಎನ್ ಠಾಣೆಗೆ ಆದೇಶ ಮಾಡಿರುವ ದಾಖಲೆಗಳು ಪೂರಕವಾಗಿರಲಿಲ್ಲ. ಆದ್ದರಿಂದ ಸೆನ್ ಠಾಣೆಯ ಚಾರ್ಜ್‌ಶೀಟ್ ವಜಾಗೊಳಿಸಿ ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಮರು ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸುವಂತೆ ಆದೇಶಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts