More

    “ನನ್ನ ಬರ್ತ್​ಡೇಗೆ ದಾಖಲೆ ಲಸಿಕೆ ನೀಡಿದ್ದಕ್ಕೆ ಒಂದು ರಾಜಕೀಯ ಪಕ್ಷಕ್ಕೆ ಜ್ವರ ಬಂತು”

    ಪಣಜಿ: ತಮ್ಮ ಹುಟ್ಟಿದಹಬ್ಬಕ್ಕೆ ದೇಶಾದ್ಯಂತ ಎರಡೂವರೆ ಕೋಟಿ ಡೋಸ್​​ ಕರೊನಾ ಲಸಿಕೆಗಳನ್ನು ನೀಡಿದ ದಾಖಲೆ ರಚಿಸಿದ್ದು ಭಾವನಾತ್ಮಕ ಮತ್ತು ಮರೆಯಲಾರದ ಸಂದರ್ಭವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೇ, ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್​ಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

    ಗೋವಾದ ಆರೋಗ್ಯ ಕಾರ್ಯಕರ್ತರು ಮತ್ತು ಲಸಿಕೆ ಫಲಾನುಭವಿಗಳೊಂದಿಗೆ ಇಂದು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಮೋದಿ, “ನಿಮ್ಮ ಪ್ರಯತ್ನಗಳಿಂದಾಗಿ ಒಂದೇ ದಿನದಲ್ಲಿ 2.5 ಕೋಟಿ ಲಸಿಕೆಗಳನ್ನು ನೀಡುವ ವಿಶ್ವ ದಾಖಲೆಯನ್ನು ಭಾರತ ಸೃಷ್ಟಿಸಿದೆ. ಈ ಸಾಧನೆಯನ್ನು ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳೂ ಮಾಡಲು ಸಾಧ್ಯವಾಗಿಲ್ಲ” ಎಂದರು. ಇದಕ್ಕೆ ಕಾರಣವಾದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಡಳಿತವರ್ಗವನ್ನು ಮೋದಿ ಅಭಿನಂದಿಸಿದರು.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದವರಿಗೆ ಚಿನ್ನದ ಕಿವಿಯೋಲೆ, ಸೀರೆ ಗಿಫ್ಟ್!

    “ಬರ್ತ್​ಡೇಗಳು ಬರುತ್ತವೆ, ಹೋಗುತ್ತವೆ. ನಾನು ಜನ್ಮದಿನದ ಆಚರಣೆಯಿಂದ ದೂರ ಉಳಿಯುತ್ತಾ ಬಂದಿದೀನಿ. ಆದ್ರೆ ನಿನ್ನೆ ನನಗೆ ತುಂಬಾ ವಿಶೇಷ ದಿನವಾಗಿತ್ತು, ಅವಿಸ್ಮರಣೀಯ ದಿನವಾಗಿತ್ತು… ಪ್ರತಿಯೊಂದು ಲಸಿಕೆಯಿಂದ ಒಂದು ಪ್ರಾಣ ಉಳಿಸಬಹುದು. ಅಂತಹ 2.5 ಕೋಟಿ ಡೋಸ್​ಗಳನ್ನು ನೀಡಿರುವುದು ಮಹತ್ವದ ವಿಷಯವಾಗಿದೆ” ಎಂದು ಹೇಳಿದ ಮೋದಿ, “ನಿನ್ನೆ ದೇಶದ ಕಣ್ಣುಗಳು ಕೋವಿನ್​ ಡ್ಯಾಶ್​ಬೋರ್ಡ್​ ಮೇಲಿತ್ತು. ಗಂಟೆಗೆ 15 ಲಕ್ಷ ಲಸಿಕೆ ಡೋಸ್​ಗಳು, ಪ್ರತಿ ನಿಮಿಷಕ್ಕೆ 26,000 ಡೋಸ್​ಗಳನ್ನು ನೀಡಲಾಯಿತು. ಪ್ರತಿ ಸೆಕೆಂಡಿಗೆ ದೇಶದ 425ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಯಿತು” ಎಂದರು.

    ಇದೇ ಸಂದರ್ಭದಲ್ಲಿ, ಯಾವುದೇ ಪಕ್ಷದ ಹೆಸರು ಹೇಳದೆ, ತಮ್ಮ ಜನ್ಮದಿನದಂದು ಅಷ್ಟೊಂದು ಲಸಿಕೆಗಳನ್ನು ನೀಡಿದ್ದರಿಂದ ಒಂದು ರಾಜಕೀಯ ಪಕ್ಷಕ್ಕೆ ಜ್ವರ ಬಂದಂತಾಯಿತು ಎಂದು ಮೋದಿ ಕುಟುಕಿದರು. “ಲಸಿಕೆಗಳ ಸೈಡ್​ ಎಫೆಕ್ಟ್​ ಆಗಿ ಜ್ವರ ಬರುತ್ತೆ ಅಂತ ಜನ ಹೇಳುತ್ತಾರೆ. ಆದರೆ, ನನ್ನ ಜನ್ಮದಿನದಂದು 2.5 ಕೋಟಿ ಲಸಿಕೆಗಳನ್ನು ನೀಡಿದ ಮೇಲೆ ಒಂದು ರಾಜಕೀಯ ಪಕ್ಷಕ್ಕೆ ಜ್ವರ ಬಂತು” ಎಂದು ಮೋದಿ ಹೇಳಿದರು. (ಏಜೆನ್ಸೀಸ್)

    ದಾಖಲೆ ಲಸಿಕೀಕರಣ: ಒಂದೇ ದಿನದಲ್ಲಿ ಆಸ್ಟ್ರೇಲಿಯಾ ಜನಸಂಖ್ಯೆಗೆ ಸಮಾನ ಡೋಸ್​ಗಳು!

    ನಟ ಸೋನು ಸೂದ್​​ಗೆ ಐಟಿ ಕಂಟಕ: 20 ಕೋಟಿ ರೂ. ತೆರಿಗೆ ವಂಚನೆ ಆರೋಪ

    ಅಸ್ತಮಾ ನಿಯಂತ್ರಣಕ್ಕೆ ‘ಬದ್ಧ ಪದ್ಮಾಸನ’ ಮಾಡಿ! ಗೂನು ಬೆನ್ನಿಗೂ ಇದು ಪರಿಹಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts