More

    ಚಿರತೆ ಉಪಟಳಕ್ಕೆ ಕಡಿವಾಣ ಹಾಕಲು ಹೊಸ ಮಾದರಿ ಬೋನು

    ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
    ವಿಶೇಷ ಬೋನುಗಳನ್ನಿಟ್ಟು ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿಯೇ ಪ್ರಥಮವಾಗಿ ಹೊಸ ರೀತಿಯ ಬೋನುಗಳ ಖರೀದಿಗೆ ಅರಣ್ಯ ಕ್ರಮ ಕೈಗೊಂಡಿದೆ.
    ಇತ್ತೀಚಿನ ದಿನಗಳಲ್ಲಿ ವಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ ಭಾಗಗಳಲ್ಲಿ ಚಿರತೆ ಕಾಟ ಹೆಚ್ಚಿದೆ. ಮನುಷ್ಯರ ಮೇಲೆ ಎರಗುವುದು ಗಾಯಗೊಳಿಸುವುದು, ಸಾಕು ಪ್ರಾಣಿಗಳನ್ನು ಹೊತ್ತೊಯ್ಯುವುದು, ಸಂಜೆ, ಬೆಳಗಿನ ವೇಳೆಯಲ್ಲಿ ಗ್ರಾಮದೊಳಗೆ ಪ್ರವೇಶಿಸಿ ಜನರನ್ನು ಭಯಗೊಳಿಸುತ್ತಿರುವ ಪ್ರಕರಣಗಳು ಅರಣ್ಯ ಇಲಾಖೆ ನಿದ್ರೆಗೆಡಿಸಿವೆ.

    ಚಿರತೆ ಸೆರೆಗೆ ಅರಣ್ಯ ಇಲಾಖೆ ಈಗ ಬಳಸುತ್ತಿರುವ ಬೋನುಗಳು ಚಿಕ್ಕದಾಗಿದ್ದು, ತುಮಕೂರು ವಿಭಾಗದಲ್ಲಿ ಬಳಸಿರುವ ನೂತನ ವಿಧಾನದ ಬೋನನ್ನು ಪ್ರಥಮ ಬಾರಿಗೆ ಚನ್ನಪಟ್ಟಣ ವಲಯದಲ್ಲಿ ಪ್ರಯೋಗ ವಾಡಲಾಗುತ್ತಿದೆ. ಚಿಕ್ಕ ಮನೆಯಂತೆ ನಿರ್ವಾಣ ವಾಡಬಹುದಾದ ಈ ಬೋನಿಗೆ ಬಹುಬೇಗನೆ ಚಿರತೆಗಳು ಸಿಕ್ಕಿ ಬೀಳಲಿವೆ ಎಂಬ ಕಾರಣದಿಂದ ಜಿಲ್ಲೆಯಲ್ಲೂ ಖರೀದಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
    ಇಗ್ಗಲೂರು ಸಮೀಪದ ಚಿಕ್ಕಬೋರೇಗೌಡನದೊಡ್ಡಿ ಬಳಿ ಕಳೆದ ವಾರ ಬಾಲಕನ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಜತೆಗೆ ಇತರ ನಾಲ್ಕೈದು ಜನರಿಗೆ ಗಾಯಗೊಳಿಸಿತ್ತು. ಇಲ್ಲಿ ಚಿರತೆ ಸೆರೆಗೆ ಮಾಮೂಲಿ ಬೋನು ಇಡಲಾಗಿತ್ತು. ಆದರೆ ಚಿರತೆ ಸೆರೆ ಸಾಧ್ಯವಾಗಿರಲಿಲ್ಲ. ಇದೀಗ ಹೊಸ ಬೋನನ್ನು ಶನಿವಾರ ಗ್ರಾಮದ ಬಳಿ ಇಡಲಾಗಿದೆ.
    ಈಗ ಚಿರತೆ ಹಿಡಿಯುವ ಹೊಸ ಪ್ರಯೋಗ ಯಶಸ್ವಿಯಾಗುತ್ತದೆಯೇ, ಜಿಲ್ಲೆಯಲ್ಲಿ ಚಿರತೆ ಕಾಟಕ್ಕೆ ಮುಕ್ತಿ ಸಿಗಲಿದಯೇ, ಅರಣ್ಯ ಇಲಾಖೆ ತಲೆನೋವು ದೂರವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

    ಹೊಸ ಬೋನಿನ ವಿಶೇಷತೆ: ಬೋನು 20 ಅಡಿ ಉದ್ದ, 10 ಅಡಿ ಅಗಲ, 10 ಅಡಿ ಎತ್ತರ ಇದೆ. ದನದ ಕೊಟ್ಟಿಗೆ ರೀತಿ ನಿರ್ವಾಣವಾಗಿದೆ. ಕಬ್ಬಿಣ ಸಲಾಕೆ, ಜಾಲರಿಯಿಂದ ನಿರ್ವಾಣ ಆಗಿದೆ. ಸಿಸಿ ಕ್ಯಾಮರಾ ಅಳವಡಿಸಲು ಅವಕಾಶವಿದೆ. ಬೋನಿನ ಮೇಲೆ ಗರಿ ಮುಚ್ಚಿ ಶೆಡ್ ರೀತಿ ವಾಡಬಹುದಾಗಿದೆ. ಬೋನಿನ ಒಳಭಾಗದಲ್ಲಿ ಮೇಕೆ, ಕುರಿ ಕಟ್ಟಲು ಕೊಟ್ಟಿಗೆ ನಿರ್ವಾಣ ವಾಡಬಹುದಾಗಿದೆ. ಚಿರತೆಗಳು ದನದ ಕೊಟ್ಟಿಗೆ ಎಂದು ಭಾವಿಸಿ ಬೋನಿಗೆ ಬೀಳುತ್ತವೆ. ಈ ಪರಿಕಲ್ಪನೆಯಲ್ಲಿ ಹೊಸ ಬೋನು ತಯಾರಾಗಿದೆ. ಅಂದಾಜು 2.5 ಲಕ್ಷ ರೂ. ವೆಚ್ಚದಲ್ಲಿ ರಾಮನಗರ ಅರಣ್ಯ ವಿಭಾಗಕ್ಕೆ ಹೊಸ ಬೋನು ಖರೀದಿಸಲು ಅರಣ್ಯ ಇಲಾಖೆ ಮುಂದಾಗಿದೆ ಎಂಬುದು ಅರಣ್ಯಾಧಿಕಾರಿಗಳ ವಾತು.

    ಚಿರತೆ ಉಪಟಳಕ್ಕೆ ಕಡಿವಾಣ ಹಾಕಲು ಹೊಸ ಮಾದರಿ ಬೋನು

    ಹೊಸ ಬೋನಿನಲ್ಲಿ ಸುಲಭವಾಗಿ ಚಿರತೆ ಬೋನಿಗೆ ಬೀಳುವ ವ್ಯವಸ್ಥೆ ಇದೆ. ದನ, ಮೇಕೆ ಶೆಡ್, ಕೊಟ್ಟಿಗೆ ರೀತಿಯಲ್ಲಿಯೇ ಬೋನು ಇರುವ ಕಾರಣ ಚಿರತೆ ಸೆರೆಗೆ ಹೊಸ ಬೋನು ಸೂಕ್ತವಾಗಿದೆ ಎಂಬ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಖರೀದಿಗೆ ಇಲಾಖೆ ಮುಂದಾಗಿದೆ.
    ದೇವರಾಜು ಡಿಎಫ್‌ಒ, ರಾಮನಗರ

    ಚಿರತೆ ಉಪಟಳಕ್ಕೆ ಕಡಿವಾಣ ಹಾಕಲು ಹೊಸ ಮಾದರಿ ಬೋನು

    ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ವನ್ಯಜೀವಿ) ಅನುಮತಿ ಮೇರೆಗೆ ಚನ್ನಪಟ್ಟಣದ ಚಿಕ್ಕಬೋರೇಗೌಡ ದೊಡ್ಡಿಯಲ್ಲಿ ಬೋನು ಇಟ್ಟು ಚಿರತೆ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ. ಒಂದೆರಡು ದಿನಗಳಲ್ಲಿಯೇ ಚಿರತೆ ಸೆರೆಯಾಗಬಹುದು.
    ಎ. ಕಿರಣ್‌ಕುವಾರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts