More

    ಜಂಟಿ ಸರ್ವೇ ಅಂತಿಮಕ್ಕೂ ಮುನ್ನ ಸಭೆಯಾಗಲಿ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಂಟಿ ಸರ್ವೇ ಕಾರ್ಯ ಅಂತಿಮಗೊಳಿಸುವ ಮೊದಲು ಡಿಸಿ ಪರಿಶೀಲನೆ ನಡೆಸಬೇಕು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಬಳಿಕವೇ ಉಳಿದ ಭೂಮಿಗೆ ಮುಂದಿನ ಆದೇಶ ನೀಡಬೇಕು ಎಂದು ಕಸ್ತೂರಿ ರಂಗನ್ ವರದಿ ಮತ್ತು ಮುಳ್ಳಯ್ಯನಗಿರಿ ಮೀಸಲು ಯೋಜನೆ ವಿರೋಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಎಸ್.ವಿಜಯಕುಮಾರ್ ಹೇಳಿದರು.

    ಜಿಲ್ಲೆಯಲ್ಲಿ ನಡೆಸುತ್ತಿರುವ ಕಂದಾಯ ಮತ್ತು ಅರಣ್ಯ ಭೂಮಿಗಳ ಜಂಟಿ ಸರ್ವೇ ಕಾರ್ಯವು ತಾಲೂಕಿನ ಸುಮಾರು 18 ಸರ್ವೇ ನಂಬರ್‌ಗಳಲ್ಲಿ ತ್ವರಿತವಾಗಿ ಮುಗಿಸಿ ತಾಲೂಕು ಭೂಮಾಪನ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಜಿಲ್ಲೆಯ ಇತರೆ ತಾಲೂಕುಗಳ ಸರ್ವೇ ಕಾರ್ಯ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಸರ್ವೇ ಆಗಿರುವ ಪ್ರದೇಶಗಳಲ್ಲಿ ಯಾವ ರೀತಿ ಸರ್ವೇ ನಡೆದಿದೆ ಎಂಬುದು ನಿಗೂಢವಾಗಿದೆ. ಹೀಗಾಗಿ ಸರ್ವೇ ಕಾರ್ಯ ಅಂತಿಮಗೊಳಿಸುವ ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸಾರ್ವಜನಿಕ ಉಪಯೋಗದ ಭೂಮಿ, ಶಾಲೆ, ಸ್ಮಶಾಣ, ರಸ್ತೆ ಮತ್ತು ಇತರೆ ಅಭಿವೃದ್ಧಿಗೆ ಅಗತ್ಯ ಭೂಮಿ ಹಾಗೂ ಪಂಚಾಯಿತಿ ವ್ಯಾಪ್ತಿಯ ಜಾನುವಾರುಗಳಿಗೆ ಗೋಮಾಳ ಮೀಸಲಿಟ್ಟು ಉಳಿಕೆ ಭೂಮಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಜಿಪಂನಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸ್ಥಳೀಯ ಶಾಸಕ ಎಚ್.ಡಿ ತಮ್ಮಯ್ಯ ಅವರ ಒತ್ತಾಯದಂತೆ ಮುಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶದ ಪ್ರಸ್ತಾವನೆಯನ್ನು ಮತ್ತೊಮ್ಮೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಾಭಿಪ್ರಾಯ ಪಡೆಯುವ ನಿರ್ಣಯ ಸ್ವಾಗತಾರ್ಹ. ಈ ಬಾರಿಯಾದರೂ ಜನಾಭಿಪ್ರಾಯದಂತೆ ಅಧಿಕಾರಿಗಳು ಕ್ರಮ ಕೈಗೊಂಡು ಜಿಲ್ಲೆಯ ಅರಣ್ಯ ಹಾಗೂ ಜನಸಾಮಾನ್ಯರ ಸಮತೋಲನ ಕಾಪಾಡಬೇಕು ಎಂದರು.
    ಈಗಾಗಲೇ ಸರ್ಕಾರ ಅಕ್ರಮ-ಸಕ್ರಮ ಸಮಿತಿಗಳನ್ನು ರಚಿಸಿದ್ದು ಜಿಲ್ಲೆಯ ತಹಸೀಲ್ದಾರ್‌ಗಳು ಆಯಾ ತಾಲೂಕಿನ ವ್ಯಾಪ್ತಿಯಲ್ಲಿ ಗೋಮಾಳ ಭೂಮಿಗಳನ್ನು ಕೂಡಲೇ ನಿಗದಿ ಮಾಡಿಕೊಂಡು ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಮತ್ತು ವೇಶನ ರಹಿತರಿಗೆ ನಿವೇಶನ ನೀಡಲು ಕ್ರಮ ವಹಿಸಬೇಕು ಎಂದು ಹೇಳಿದರು.
    ಹೋರಾಟ ಸಮಿತಿ ಸಂಚಾಲಕರಾದ ಕೆ.ಕೆ ರಘು, ಪ್ರಭು ರೇಣುಕಾರಾಧ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts