More

    ಪ್ರಿಯಕರನೊಂದಿಗೆ ಕಬ್ಬಾಳು ಬೆಟ್ಟದಿಂದ ಹಾರಿ ಪ್ರಾಣಬಿಟ್ಟ ವಿವಾಹಿತೆ! 4 ದಿನದ ಬಳಿಕ ಬೆಚ್ಚಿಬಿದ್ದ ಸ್ಥಳೀಯರು

    ಕನಕಪುರ: ಒಲ್ಲದ ಮನಸ್ಸಿನಿಂದ ಬೇರೊಬ್ಬನೊಂದಿಗೆ ಮದುವೆಯಾಗಿದ್ದ ಯುವತಿಯೊಬ್ಬಳು, ಕೊನೆಗೆ ಪ್ರಿಯಕರನೊಂದಿಗೆ ದುರಂತ ಅಂತ್ಯ ಕಂಡಿದ್ದಾಳೆ.
    ಇಂತಹ ದುರ್ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಬ್ಬಾಳು ಬೆಟ್ಟದಲ್ಲಿ ಸಂಭವಿಸಿದೆ.

    ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅಂಚೆಟ್ಟಿ ತಾಲೂಕು ಉರ್ಗ್ಯಂ ಗ್ರಾಮದ ಚಂದನ (20) ಮತ್ತು ಈಕೆಯ ಪ್ರಿಯಕರ ಸತೀಶ್​ಕುಮಾರ್ (24) ಮೃತರು. ಕಳೆದ ವರ್ಷ ಉರ್ಗ್ಯಂ ಗ್ರಾಮದ ಪಕ್ಕದಲ್ಲಿರುವ ದೊಡ್ಡಮರಳಿ ಗ್ರಾಮದ ಗಣೇಶ್ ಎಂಬಾತನ ಜತೆ ಚಂದನಳ ವಿವಾಹ ಆಗಿತ್ತು. ಗಣೇಶ್ ಕನಕಪುರದ ವಾಸು ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಒಂದೇ ಗ್ರಾಮದವರಾದ ಚಂದನ ಮತ್ತು ಸತೀಶ್​ಕುಮಾರ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಪೋಷಕರ ಒತ್ತಡಕ್ಕೆ ಮಣಿದು ಒಲ್ಲದ ಮನಸ್ಸಿನಿಂದಲೇ ಗಣೇಶನನ್ನು ಚಂದನ ಮದುವೆಯಾಗಿದ್ದಳು.

    ಕೊನೆಗೆ ಗಂಡನನ್ನ ಬಿಟ್ಟು ಚಂದನ ತನ್ನ ಪ್ರಿಯಕರನೊಂದಿಗೆ ಸೆ.22ರಂದು ಊರು ಬಿಟ್ಟಿದ್ದಳು. ಕನಕಪುರ ಕಬ್ಬಾಳು ಬೆಟ್ಟಕ್ಕೆ ಬಂದಿದ್ದ ಇವರು ಬೆಟ್ಟದ ಮೇಲಿಂದ ಹಾರಿ ಪ್ರಾಣಬಿಟ್ಟದ್ದಾರೆ. ನಾಲ್ಕು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾನುವಾರ ಕೊಳೆತ ಸ್ಥಿತಿಯಲ್ಲಿದ್ದ ಶವಗಳನ್ನ ಕಂಡ ಸ್ಥಳೀಯರು ಮತ್ತು ದನಗಾಹಿಗಳು ಬೆಚ್ಚಿಬಿದ್ದಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಾತನೂರು ಪೊಲೀಸರು ಪರಿಶೀಲನೆ ನಡೆಸಿದರು.

    ಮೃತಳ ತಾಯಿ ನೀಡಿದ ದೂರಿನ ಮೇರೆಗೆ ಸಾತನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಸರ್ಕಲ್ ಇನ್​ಸ್ಪೆಕ್ಟರ್ ಟಿ.ಟಿ. ಕೃಷ್ಣ, ಸಾತನೂರು ಎಸ್.ಐ.ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts